ಪುಟ:Daaminii.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
|| ಶ್ರೀನಿವಾಸಾಯ ನಮಃ ||

Daminee.
ದಾಮಿನಿ.

ಪ್ರಥಮ ಪರಿಚ್ಛೇದ.

ದೆಷ್ಟೋ ಕಾಲದ ಮಾತು. ಒಂದು ದಿನ, ಸಂಜೆಯ ಹೊತ್ತಿನಲ್ಲಿ ಏಳು ವರ್ಷದ ಒಬ್ಬ ಹುಡುಗಿ ಭಾಗೀರಥಿಯ ತೀರದಲ್ಲಿ ಒಂದು, ಅನಿಮಿಷನಯನಗಳಿಂದ, ಆ ತೇಲುತ್ತಿರುವ, ತರಂಗತಾಡಿತವಾದ ದೀಪಮಾಲೆಯನ್ನು ನೋಡುನೋಡುತ್ತೆ, ಹಾಗೆಯೆ ಹಿಂದೆ ಬರುತ್ತಿದ್ದ ವೈದ್ದಯೂಬ್ಬಳನ್ನುದ್ವೇಷಿಸಿ, -“ ಅವ್ಪಾ' ನನ್ನ ದೀಪವು ತೇಲಿಹೋಯಿತಲ್ಲೇ!? -- ಎಂದಳು. “ಹೋಗಲಿ; ಇಡು, ಇನ್ನು ಮನೆಗೆ ನಡೆ, ಕತ್ತಲೆಯಾಯಿತು!-- ಎಂದು ಅವನ ಹೇಳಿದರೂ ಕೇಳದೆ, - “ ತಾಳ.. ಇನ್ನೂ ಕೊಂಚ ನೋಡುವ! - ಎಂದು ಹುಡುಗಿ ಮಾತ್ರ ಹಾಗೆಯೆ ನಿಂದೇ ಇದ್ದಳು.
ಹುಡುಗಿಯ ಹೆಸರು ದಾಮಿಸಿ, ಹಣ್ಣು ಮುದಕಿಯಾದ ಆ ತಾಯ ತಾಯಲ್ಲದೆ, ದಾಮಿನಿಗೆ ಇನ್ನಾರೂ ಇಲ್ಲ. ಇಂದು ಅಜ್ಜಿಯೊಡನೆ ಒಂದು, ಇದೇ ಮೊದಲು, ತನ್ನ ದೀಪವನ್ನು ತೇಲಿಬಿಟ್ಟಿದ್ದಳು. ದೀಪವು ತೇಲಿಹೋಯಿತು. ಇತರ ಬಾಲಿಕೆಯರಂತೆ ಅವಳು ನಗಲಿಲ್ಲ. “ನನ್ನ ದೀಪವು ಹೋಗುತ್ತಿದೆ. ನೋಡು!”..." ಎಂದು ಆಹ್ಲಾದದಿಂದ ಅದನ್ನು ತನ್ನ ಸುಖಿಯರಿಗೆ ಪ್ರದರ್ಶನಮಾಡಿಸ ಲಿಲ್ಲ. ಕೇವಲ ಗಂಭೀರಭಾವದಿಂದ, ನಟ್ಟ ದೃಷ್ಟಿಯಿಂದ, ಅದನ್ನು ನೋಡುತ್ತಿ ದಳು;--ಅಷ್ಟೆ.
ತುಂಬಿ ಹರಿಯುತ್ತಿದ್ದ ಆ ನದಿಯಲ್ಲಿ ದಾಮಿನಿಯ ದೀಪವು ಏಕಾಕಿಯಾಗಿ ತೇಲಿಹೋಗತೊಡಗಿತು. ಸ್ವತಃ ದಾಮಿನಿಯೇ ತನ್ನ ದೀಪವನ್ನು ತೇಲಿಬಿಟ್ಟಿದ್ದಳು ಈಗಳನ್ನು ಉಪಾಯವಿಲ್ಲ!. “ಹೇ ಜಗದೀಶ್ವರ! ನನ್ನ ದೀಪವನ್ನು ಕಾಪಾಡು!'... ಎಂದು ಕಾತರಹ್ರದಯದಿಂದ ಸಂಪ್ರಾರ್ಥಿಸತೊಡಗಿದಳು.
ಅಂಧಕಾರವು ಕ್ರಮಕ್ರಮವಾಗಿ ಅತಿಶಯಿಸುತ್ತ ಒಂದುದನ್ನು ನೋಡಿ