ಪುಟ:Daaminii.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

4

ಶ್ರೀಕೃಷ್ಣಸೂಕ್ತಿ ಮುಕ್ತಾವಳಿ

ಅವ್ಪನು ದಾಮಿನಿಯನ್ನು ಮನೆಗೆ ಕರೆದುಕೊಂಡು ಹೊರಟಳು. ದಾಮಿನಿಯೂ, ಗಂಭೀರವಾಗಿ, ತನ್ನ ದೀಪದ ಪರಿಣಾಮವನ್ನೇ ಯೋಚಿಸುತ್ತ, ಮನೆಗೆ ನಡೆದಳು. ಅಂಗಳದಲ್ಲಿ ಕೊಡದ ತುಂಬ ನೀರಿದ್ದಿತು. ಅದರಲ್ಲಿ ಪುಟ್ಟ ಕಯ್ಬೆರಳುಗಳಿಂದ ಪುಟ್ಟ ಪುಟ್ಟ ಕಾಲ್ಗಳನ್ನು ಪ್ರಕ್ಷಾಲನಮಾಡಿಕೊಂಡು, ಶಯನಗೃಹವನ್ನು ಪ್ರವೇಶಿಸಿದಳು. ಮಲಗಿದುದೇ ತಡ;-ನಿದ್ದೆ ಬಂದಿತು.
ನಿದ್ದೆಯಲ್ಲಿಯೆ ದಾಮಿನಿಯೊಂದು ಸ್ವಪ್ನವನ್ನು ನೋಡಿದಳು. ಅಂಧಕಾರ ದಲ್ಲಿ ಘನೀಭೂತವಾಗಿ ಮೇಘವ ನದಿಯ ಮೇಲೆ ಬಾಗಿಬಿದ್ದಿದ್ದಿತು, ಅದನ್ನು ನೋಡಿ, ಭಯಗೊಂಡು ದಾಮಿನಿಯ ದೀಪವು ಸಣ್ಣ ಸಣ್ಣನೆ ತೊಳತೊಳಗುತ್ತ ಓಡ ತೊಡಗಿತು. ಪತನೋನ್ಮುಖವಾಗಿದ್ದ ದೊಡ್ಡ ದೊಡ್ಡ ಭಯಾನಕತರಂಗಗಳೆಷ್ಟೋ ಸುತ್ತು ಸುತ್ತಲೂ ಸುಳಿಯುತ್ತ ನಾಲ್ಕು ಕಡೆಗಳಿಂದಲೂ ಆ ಕ್ಷುದ್ರದೀಪವನ್ನು ಆಕ್ರಮಿಸಿಬಿಟ್ವುವು. ಅವುಗಳಲ್ಲಿ ಒಂದರ ತಲೆಯ ಮೇಲೆ ಒಂದು ಬೆಕ್ಕು ಗಂಭೀ ರವಾಗಿ ಕುಳಿತಿದ್ದಿತು. ಅದನ್ನು ನೋಡಿದೊಡನೆಯೆ ಗುರುತಿಸಿದಳು; ಅದು ಆ ಹಳ್ಳಿಯಲ್ಲಿಯೆಲ್ಲ ಕೆಟ್ಟ ಬೆಕ್ಕಾಗಿದ್ದಿತು. ದಾಮಿನಿಯನ್ನು ನೋಡಿತೆಂದರೆ, ಪರಚುವು ದಕ್ಕೇ ಬರುವುದು; ಅವಳೂ, ಅದು ಬಂದಿತೆಂದರೆ, ಕಣ್ಣು ಮುಚ್ಚಿಕೊಂಡು ಚೀತ್ಕಾರಮಾಡುವಳು;-ಅದರ ಭಯದಿಂದ ತಪ್ಪಿಸಿಕೊಂಡು ಓಡುವುದಕ್ಕೂ ಅವಳಿಂದಾಗದು, ಇಂದು ಆ ತರಂಗಶಿಖರದಲ್ಲಿ ಅದೇ ಹಾಳ ಬೆಕ್ಕನ್ನು ನೋಡಿ, ಅವಳಿಗೆ ತಡೆಯಲಾರದಷ್ಟು ಭಯವುಂಟಾಯಿತು. ಮಾತಾಮಹಿಯ ಮುಂಜೆರಗನ್ನು ಹಿಡಿ ದುಕೊಂಡು, ಕಣ್ಣು ಮುಚ್ಚಿಕೊಂಡಳು. ಕ್ರುದ್ದೆಯಾಗಿ, ಆ ವೃದ್ದೆ ಸೆರಗನ್ನೆಳೆದು ಕೊಂಡು, ದಾಮಿನಿಯನ್ನು ಹಿಡಿದು ಅವಳ ಕ್ಷುದ್ರದೇಹವನ್ನು ಅಗಾಧಜಖಲದಲ್ಲಿ ಎಸೆದುಬಿಟ್ಟಳು. ದಾಮಿನಿ ಸ್ವಪ್ನದಲ್ಲಿಯೂ ಚೀತ್ಕಾರಮಾಡತೊಡಗಿದಳು.
ಭಯವೇನೆಂದು ಕೇಳುತ್ತ ನಿದ್ರಿತೆಯಾಗಿದ್ದ ಆ ದಾಮಿನಿಯನ್ನು ಅಜ್ಜಿಯೆತ್ತಿ ಕೊಂಡಳು. ದಾಮಿನಿಗೆ ಎಚ್ಚರವಾಗಿ, “ಅಮ್ಮಾ! ಎಲ್ಲಿ?” ಎಂದು ಅಳತೊಡಗಿ) ದಳು. ಪಾಪ! ಅಭಾಗಿನಿಯಾದವಳಿಗೆ ಅಮ್ಮನಿರಲಿಲ್ಲ. ಮೂರು ವರ್ಷಗಳಿಗೆ ಮೊದಲೇ, ನಿರುದ್ದೇಶಯಾಗಿ, ಎಲ್ಲಿಗೋ ಹೊರಟುಹೋಗಿದ್ದಳು.
ಮರುದಿನ, ಪ್ರಾತಃಕಾಲದಲ್ಲಿ, ಪಾಠಶಾಲೆಗೆ ಹೋಗುತ್ತಿದ್ದ ಹನ್ನೆರಡು ವರ್ಷದ ಒಬ್ಬ ಹುಡುಗನು ದಾಮಿನಿಯ ಗೃಹದ್ವಾರದಲ್ಲಿ ನಿಂದು, – “ಹಕ್ಕಿಯ ಮರಿ ಗಳಿಗಾಗಿ ಕಾಳುಗಳನ್ನು ಸಂಗ್ರಹಿಸಿಲ್ಲವೆ?” – ಎಂದು ಕೇಳಿದನು. ದಾಮಿನಿಯೋ ಬ್ಬಳೇ ಕುಳಿತಿದ್ದಳು; ಅವನ ಆ ಪ್ರಶ್ನೆಗೆ ತಲೆಯಾನ್ನಾಡಿಸುತ್ತ ಉತ್ತರಕೊಟ್ಟಳು, ಬಾಲಕನಿಗೆ ತೃಪ್ತಿಯಾಗಲಿಲ್ಲ. ಕೊಂಚ ಮುಂಬರಿದು - ಅದೇಕೆ? ಜ್ವರ ಬಂದಿ ದೆಯೆ?” ಎಂದು ಕೇಳಿದನು. ಅವಳು ಪುನಃ ತಲೆಯಾಡಿಸಿದಳು. ಪುನಃ,