ಪುಟ:Daaminii.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಾಮಿನಿ.

5

ಕೇಳಿದನು:- “ ಅವ್ಪನ ಮೇಲೆ ಕೋಪವೇನು??” ಅವಳು ಮಾತನಾಡಲಿಲ್ಲ. ಆವ ಉತ್ತರವೂ ಬಾರದುದನ್ನು ನೋಡಿ, ಬಟ್ಟೆಯ ಸೆರಗಿನಲ್ಲಿದ್ದ ಕೆಲವು ಕಾಳುಗಳನ್ನು ತೆಗೆದು ಅವಳ ಮುಂದಿರಿಸಿ, ಹುಡುಗನು ಪಾಠಶಾಲಾಭಿಮುಖನಾಗಿ ಹೊರಟು ಹೋದನು.
ಹುಡುಗನ ಹೆಸರು ರಮೇಶನು, ದಾಮಿನಿಗೆ ಅವನು ಏನೂ ಆಗಬೇಡ. ನೆರೆಯವನೆಂದು ಅವಳವನನ್ನು ಅಣ್ಣನೆನ್ನುವಳು; ಅವನನ್ನು ಆವಾಗಲೂ“ ಅಣ್ಣಾ!” ಎಂದು ಸಂಬೋಧಿಸುವಳು. ರಮೇಶನೆಂದರೆ, ದಾಮಿನಿಗೆ ಬಲು ಇಷ್ಟ: ಆವ ಬೆಕ್ಕನ್ನು ನೋಡಿದರೆ ತನಗೆ ಬಹುಭಯವಾಗುತ್ತಿದ್ದಿತೋ ಅದನ್ನು ರಮೇಶನು ನೋಡಿದೊಡನೆ ಹೊಡೆಯತೊಡಗುವನು. ಅದಕ್ಕಾಗಿಯೇ, ಅವಳು ಅವನ ಅನು ಗತೆಯಾಗಿರುವಳು. ಸ್ನಾನಮಾಡುತ್ತಿದ್ದಾಗ ರಮೇಶನು ದಾಮಿನಿಗಾಗಿ ನೀರಲ್ಲಿಳಿಇದು ಎಷ್ಟೋ ಪ್ರಯಾಸದಿಂದ ಜಲಪುಷ್ಪಗಳನ್ನು ತಂದುಕೊಡುವನು. ಅದನ್ನವಳು ತೆಗೆದುಕೊಂಡು, ನಗುನಗುತ್ತ ಹೆರಳಿಗೆ ಸೂಡಿ, ಮತ್ತೆ ತಲೆದಸಿ..... “ನೋಡಣ್ಣ! ಹೇಗಿದೆ?” ಎಂದು ಕೇಳುವಳು. ಬಹುಶಃ ರಮೇಶನು ಚೆನ್ನಾಗಿ ದೆಯೆಂದೇ ಹೇಳುವನು; ಆದರೆ, ಮಧ್ಯೆ ಮಧ್ಯೆ ಮನಸ್ಸಿಗೆ ಬಾರದಿದ್ದರೆ, ಸ್ವತಃ ಅದನ್ನು ಸರಿಯಾಗಿ ಮುಡಿಯಿಸುವನು. ಗ್ರಾಮದಲ್ಲಿನ ಎಲ್ಲ ಹುಡುಗಿಯರಿಂದಲೂ, ತನ್ನ ದಾಮಿನಿ ಸ್ವಾಭಾವಿಕವಾಗಿ ಶಂತೆಯೆಂದೂ ದುಃಖಿನಿಯೆಂದೂ ರಮೇಶನು ತಿಳಿದಿದ್ದನು. ಅಂತೆಯೆ ದಾಮಿನಿಯೂ ಆ ಗ್ರಾಮದ ಹುಡುಗರಲ್ಲಿಯೆಲ್ಲ ತನ್ನ ರಮೇಶನನ್ನು ಸ್ವಜನವೆಂದು ಭಾವಿಸಿಕೊಂಡಿದ್ದಳು. ಇತರರಾರೂ ತನಗಾಗಿ ಹೂಗಳನ್ನು ತಂದುಕೊಡುತ್ತಿಲ್ಲ; ಹಕ್ಕಿಗಳನ್ನು ಹಿಡಿಯುತ್ತಿಲ್ಲ; ಕಾಳುಗಳನ್ನು ಸಂಗ್ರಹಿ ಸುತ್ತಿಲ್ಲ; ತನ್ನ ವೈರಿಯಾದ ಬೆಕ್ಕನ್ನು ಹೊಡೆದೋಡಿಸುತ್ತಿಲ್ಲ. ಆದುದರಿಂದ, ರಮೇಶನನ್ನು ನೋಡಿದಳೆಂದರಿ, ದಾಮಿನಿಯೋಡಿಹೋಗಿ, ಅವನ ಬಳಿ ನಿಲ್ಲುತ್ತಿ ದ್ದಳು, ನಗೆಮೊಗದಿಂದ, ಅವನ ಮಾತುಗಳಿಗೆ ಉತ್ತರಗುಡುತ್ತಿದ್ದಳು. ಆದರೆ, ಇಂದು ಅವನನ್ನು ನೋಡಿ, ಮೊದಲಿನಂತೆ ಅವಳು ಆಹ್ಲಾದವನ್ನು ಸೂಚಿಸಲಿಲ್ಲ' ದಾಮಿನಿ ಶೈಶವದಲ್ಲಿಯೂ ಗಂಭೀರೆಯಾಗಿಹೋಗಿದ್ದಾಳೆ!
ಶೈಶವದಲ್ಲಿಯೂ, ದಾಮಿನಿಗೆ ಇಷ್ಟು ಗಂಭೀರಪ್ರಕೃತಿಯೇಕೆ? ಆವನು ಸುಖಿ ಯೋ, ಅವನು ಚಂಚಲನು; ಅವನು ದುಃಖಿಯೋ, ಅವನು ಶಾಂತನೂ, ಧೀರನೂ, ಗಂಭೀರಪ್ರಕೃತಿಯುಳ್ಳವನೂ ಆಗಿರುವನು. ಇದು ಸ್ವಭಾವವು. ದಾರುಣ ವಾದ ಒಂದು ದುಃಖದ ದೆಸೆಯಿಂದ, ದಾಮಿನಿಯಿಂದು, ಈ ಶೈಶವದಲ್ಲಿಯೂ, ಕಾತರೆಯಾಗಿರುವಳು. ಅವಳ ಆ ತಾಯಿಯೆಲ್ಲಿ?-ಏನು? ಸತ್ತುಹೋಗಿರಬಹುದೆ? ಹಾಗಾಗಿದ್ದರೆ, ಜನಗಳೇಕೆ ಹಾಗೆ ಹೇಳುವುದಿಲ್ಲ? ಹಳ್ಳಿಯ ಎಲ್ಲ ಮಕ್ಕಳೂ ತಾಯ