ಪುಟ:Daaminii.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

14

ಶ್ರೀಕೃಷ್ಣ ಸಕ್ತಿಮುಕ್ತಾವಳಿ.

ಮೇಲೆ ಎದ್ದೆನು; ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು, ಇನ್ನೇನು?- ಹೊರಡ ಬೇಕೆಂದು ಯೋಚಿಸಿ, ಆ ಕತ್ತಲೆಯಲ್ಲಿಯೂ ನಸ್ಯದ ಡಬ್ಬಿಯನ್ನು ಹುಡುಕಿ ತೆಗೆದು, ಒಂದು ಚಿಟಿಕೆಯ ನಸ್ಯವನ್ನು ಅಭ್ಯಾಸವಿಲ್ಲದಿದ್ದರೂ ಮಗಿಗೆ ಏರಿಸಿದೆನು, ಇಂತಹ ಕಾರ್ಯಗಳಲ್ಲಿಯೆಲ್ಲ ನಸ್ಯವಿಲ್ಲದಿದ್ದರೆ, ಆಗುವುದೇ ಇಲ್ಲ. ಆ ಮೇಲೆ ನೋಡಿದೆನು; --ಮೆಯ್ಯೆಲ್ಲ ಬೆವರಾಗಿದ್ದಿತು; ಬೆವರಿನಿಂದ ಸರ್ವಾಂಗವೂ ತೊಯ್ದು ಹೋಗಿದ್ದಿತು. ಈ ಎಲ್ಲ ಕಾರ್ಯಗಳಿಗೂ ಬೆವರುವುದು ಒಳ್ಳೆಯದಲ್ಲ ;-- ಆ ಮೇಲೆ ಆ ಯವನರು ಹಿಂದಿರುಗಿ ಓಡಿಹೋದರೆ?... ಏನು ಮಾಡಲಿ? ಎಂದಾಲೋಚಿಸಿ, ಗಾತ್ರವರ್ಜನಿಯನ್ನು ತೆಗೆದುಕೊಂಡು, ವಿಲಕ್ಷಣವಾಗಿ ಮಯ್ಯನ್ನೊರಸಿಕೊಂಡೆನು. . ಎಲ್ಲ ವಿಚಾರಗಳೂ ಒಟ್ಟೂಟ್ಟಿಗೆ ನೆನಪಾಗುವುದಿಲ್ಲ! ಮೆಯ್ಯನ್ನೋರಸಿಕೊಂಡ ಮೇಲೆ ಅಸ್ತ್ರದ ನೆನಪಾಯಿತು. ಅಸ್ತ್ರವಿಲ್ಲದೆ ಹೋಗಿ ಮಾಡುವುದೇನು? ಬಡಿ ಗೋಲನ್ನು ತಂದುಕೊಡೆಂದು ಆಕೆಗೆ ಹೇಳಿದೆನು. ಅವಳು ತರುವಳೆ? ಅದರಿಂದ ಕೆಲಸವಿಲ್ಲವೆಂದು ಹೇಳಿಬಿಟ್ಟಳು. ಕೊನೆಗೆ ಒಂದು ಮಗು--ಆ ನನ್ನ ಏಳನೆಯ ಮಗು-ಒಂದು ಇಟ್ಟಿಗೆಯನ್ನು ತಂದುಕೊಟ್ಟಿತು. ಅದನ್ನು ತೆಗೆದುಕೊಂಡು, ಬಿಸಿಲು ಮಾಳಿಗೆಯ ಮೇಲೆ ಹತ್ತಿ ನೋಡುತ್ತೇನೆ; ಏನನ್ನು ನೋಡುವುದು? ದುವ್ಯತ್ಯರೆಲ್ಲ ರೂ ಈಗಲೇ ಹಿಂದಿರುಗಿಹೋಗುತ್ತಿದ್ದಾರೆ. ಇನ್ನು ಇಟ್ಟಿಗೆಯಿಂದ ಫಲವೇನೆಂದು, ಅದನ್ನು ಹಾಗೆಯೆ ಎಸೆದುಬಿಟ್ಟೆನು.”
ಗಣೇಶಚಂದ್ರನು ಈ ಪರಿಯಾಗಿ ಆತ್ಮಶೌರ್ಯವನ್ನು ಪರಿಚಯಮಾಡಿಕೊಡು
ತಿದ್ದನು. ಆ ವೇಳೆಗೆ ಒಕ್ಕಲಿಗನೊಬ್ಬನು ಅಲ್ಲಿಗೆ ಬಂದು, ವರ್ತಮಾನಕೊಟ್ಟನು: -- “'ನೌಜುದಾರನ ಮಗನು ಮಾರ್ಗದಲ್ಲಿಯೆ ಸತ್ತು ಬಿದ್ದಿದ್ದಾನೆ; ಹೊಡೆದವರಾ ರೆಂಬುದು ಇನ್ನೂ ಗೊತ್ತಾಗಿಲ್ಲ.”
ಅತ್ಯಾನಂದದಿಂದ ಗಣೇಶಚಂದ್ರನು- “ಹಾಗಾದರೆ, ಸರಿನಾನೇ, ನನ್ನ
ಇಟ್ಟಿಗೆಯೇಟಿನಿಂದಲೇ ಅವನಿಗೆ ಮರಣ! ನಿಜವಾಗಿಯೂ ಹೇಳುತ್ತೇನೆ;-ಆಯವನ ನನ್ನು ನಾನೇ ಕೊಂದೆನು, ನನ್ನ ಗುರಿಯೆಂದರೆ ಏನು? ಸಾಮಾನ್ಯವೇ?”... ಎಂದನು.
ಇನ್ನೊಬ್ಬನು ಸ್ವಲ್ಪ ಸಕ್ಕು-“ಅಂತಹ ಮಾತನ್ನು ಆಡುವುದೇ ಒಳ್ಳೆದಲ್ಲ.
ಸತ್ತವನು 'ಫೌಜುದಾರನ ಏಕಮಾತ್ರ ಪುತ್ರನು. ಅಂತಹ ಮಗನನ್ನು ಅವನು ಕೊಂದಿರುವನೋ ಅವನ ಅದೃಷ್ಟದಲ್ಲಿ ಶೂಲವೇ ಬರೆದಿರುವುದು!”ಎಂದನು.
ಈ ಬಾರಿ ಭಯದಿಂದ ಗಣೇಶನು ನಡುಗಿದನು. ಕಂಪಿತಸ್ತರದಿಂದ ಮೆಲ್ಲ
ಮೆಲ್ಲನೆ ಹೇಳತೊಡಗಿದನು:- " ನಿಜವಾಗಿಯೂ ಇದುವರೆಗೂ ಹಾಸ್ಯವಾಡುತ್ತಿದ್ದೆ