ಪುಟ:Daaminii.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಾಮಿನಿ.

21

ಅದರಲ್ಲಿಯೂ ವೃದ್ಧ; ಪಾಪ! ಬಿಸಿಲಲ್ಲಿ ನಿನ್ನನ್ನು ಹುಡುಕಿಕೊಂಡು ಬರುವುದಕ್ಕೆ
ಸಾಕು!"- ಎಂದಳು.
ಸಮವಯ‌‌‌‌ಸ್ಕೆಯು ಮನೆಗೆ ಹೋದಳು; ಆದರೆ, ಅವಳು ಬಹುಕಾಲ ಅಲ್ಲಿ
ರುವದಕ್ಕೆ ಆಗದೆ ಹೋಯಿತು. ಅಪರಾಹ್ನವಾಗುವುದರೊಳಗಾಗಿಯೆ, ಪುನಃ ಅದಿ ತಿಭಟ್ಟಾಚಾರ್ಯನ ಮನೆಯ ಹಿಂಗಡೆ ಬಂದು ನಿಂದಳು. ನೋಡಿದಳು; ದಾಮಿನಿಯು ಮೊದಲಂತೆಯೇ ಒಬ್ಬಳೆ ಮರದಡಿಯಲ್ಲಿ ಕುಳಿತು ಅನ್ಯಮನಸ್ಕ ಒಂದು ಹಕ್ಕಿಯನ್ನು ದೃಷ್ಟಿಸಿ ನೋಡುತ್ತಿದ್ದಳು. ಈಗಲವಳ ಕಣ್ಣುಗಳಲ್ಲಿ ನೀರಿರಲಿಲ್ಲ.
ಪ್ರತಿವಾಸಿನಿಯು ಮೆಲ್ಲಮೆಲ್ಲನೆ ದಾಮಿನಿಯ ಹತ್ತಿರ ಬಂದು, ಕುಳಿತುಕೊಂ
ಡಳು. ಕೊಂಚ ಕಾಲದ ವರೆಗೂ, ಇಬ್ಬರೂ ಮಾತನಾಡಲಿಲ್ಲ. ಅನಂತರ ದಾಮಿನಿಯು-" ಈ ರಾತ್ರಿಯೇ ಅವರು ಬಂದುಬಿಟ್ಟಗೆ?" -- ಎಂದಳು.
ಪ್ರತಿವಾಸಿನಿ:--“ಆರು? ನಿನ್ರ ಗಂಡನೆ? ಅವನು ಬಂದರೆ ಒಳ್ಳೆದೇ ಆಯಿತು.
ಒಳ್ಳಿದೋ, ಕೆಟ್ಟುದೋ, ಏನಾದರೊಂದು ಇತ್ಯರ್ಥವಾಗಿಹೋಗುವುದು.”
ದಾಮಿನಿ:- “ ಅವರು ಬಂದೂ, ಅರ್ಧಮಾರ್ಗದಲ್ಲಿಯೇ ಹೊರಟು ಹೋದರೆ?”
ಪ್ರತಿವಾಸಿನಿ:- ಅದೇನು? ಹೇಗಾದೀತು?
ದಾಮಿನಿ:- “ಆಗದೆ ಏನು? ದಾರಿಯಲ್ಲಿ ಅವರಿಗೆ ಆರೂ ಆವ ವೃತ್ತಾಂತವ ನ್ಯೂ ತಿಳಿಹದಿದ್ದರೆ? ಅಮ್ಮ! ಅವರೂ ನನ್ನನ್ನು ಬಿಟ್ಟು ಬಿಟ್ಟಾರೇ ಏನು?”
ಪ್ರತಿವಾಸಿನಿ: “ಆರಿಗೆ ಗೊತ್ತಮ್ಮ! ಗಂಡುಸರ ಮನಸ್ಸು ಆವಾಗ ಹೇಗೆ ಇರು
ವುದೆಂದು ಆರು ಹೇಳಬಲ್ಲರು?
ದಾಮಿನಿ:- “ ಅವರು ನನ್ನನ್ನು ಎಷ್ಟೊಂದು ಪ್ರೀತಿಸುವರು! ನನಳುವುದನ್ನು
ನೋಡಿದರೆ, ತಾವೂ ಅಳುವರು; ನನ್ನನ್ನು ನೋಡುನೋಡುತ್ತ, ಅಳುವರು.ನನ್ನ ನ್ನು ನೋಡುವುದೆಂದರೆ, ಅವರಿಗೆ ಎಷ್ಟು ಆಸೆ! ನೋಡುವ ನಿಮಿತ್ತವಾಗಿದೆ ಎಷ್ಟೊಂದು ಹಠಮಾಡಿ, ನನ್ನ ಹತ್ತಿರ ಬಂದು ಕುಳಿತುಕೊಳ್ಳುವರು! ಎಷ್ಟು ಬಾರಿ, ಎಷ್ಟು ಕಡೆಗಳಲ್ಲಿ ಕುಳಿತು ನೋಡುವರು! ಪುನಃ ನನ್ನ ಹಣೆಯಲ್ಲಿ ಕಯ್ಯನ್ನಿಟ್ಟು ನೋಡುವರು;ಗಲ್ಲಗಳನ್ನು ಹಿಡಿದು ನೋಡುವರು; ತುಟಿಗಳನ್ನು ಮುಟ್ಟಿ ನೋಡುವರು. ಎಷ್ಟು ನೋಡಿದರೂ ಅವರಿಗೆ ತೃಪ್ತಿಯಿಲ್ಲ. ರಾತ್ರಿಯ ವೇಳೆ ಎಚ್ಚರವಾದಾಗಲೆಲ್ಲ ಎದ್ದು ನನ್ನ ಮುಖದ ಕಡೆಗೆ ದೃಷ್ಟಿಸಿ ನೋಡುತ್ತಲೇ ಇರುವರು. ಆದರೆ ನಾನು ಈ ಹಾಳ ಕಣ್ಣುಗಳನ್ನು ಮುಚ್ಚಿಕೊಂಡೇ ನಿದ್ದೆ ಮಾಡುತ್ತಿರುವೆನು?” ಹೇಳುಹೇಳುತ್ತ, ದಾಮಿನಿಯ ಕಣ್ಣಗಳಲ್ಲ ನೀರು ತುಂಬಿತು. ದಾಮಿನಿ
ಯು ಅಳತೊಡಗಿದಳು. ಪ್ರತಿವಾಸಿನಿಯು-“ಅಮ್ಮ!ಸಂಜೆಯಾಯಿತು. ಈ