ಪುಟ:ಅರಮನೆ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅರಮನೆ

೧೦೧

ಯಿರಲಿಲ್ಲ.. ಅವರವರ ಸ್ವಾಸ್ಥಿಗಳಿಗೆ ಅವರವರನ್ನು ಮರಳಿಸುವುದಾಗಲೀ, ಅವರ ಬದುಕಿಗೆ ಕಾಮಗಾರಿ ವದಗಿಸುವುದಾಗಲೀ ಸುಲಭದ ಕೆಲಸವಲ್ಲ. ಮುಗಾಲಯದಲ್ಲಿ ಮುಗಗಳ ಬದಲಿಗಾಗಲೀ.. ಮುಗಗಳೊಂದಿಗಾಗಲೀ.. ಹುಯಿಲಿಡುತಲಿದ್ದ ಅತಂತರಸ್ಥರನ್ನು ಕಾನೂನಿನ ಮೂಲಕ ಜಬರದಸ್ತಿನಿಂದ ದೂರ ಮಾಡಲಕಂದರೆ ವಬ್ಬರೇ ಯಬ್ಬರೇ.. ಅವರ ಪುನಶ್ವಸತಿ ತಿಳಿದುಕೊಳ್ಳುವ ಸಲುವಾಗಿ ತನ್ನ ಕಚ್ಚಿ ಕೆಳಗಿನ ಅಧಿಕಾರಿಗಳೊಂದಿಗೆ ವಂದು ಸುತ್ತು ಮಾತುಕತೆ ನಡೆಸಿದ. ಸಂತರಸ್ತರ ಅತಂತರಸ್ಥ ಸ್ಥಿತಿ ಮುಂದುವರಿದದ್ದೇ ಆದಲ್ಲಿ ಕಳುವು, ದರೋಡೆ, ಕೊಲೆ, ಸುಲಿಗೆ ಹೆಚ್ಚಬಹುದೆಂದೂ, ಅವರವರಿಗೆ ಅವರವರ ಅಂತಸ್ತಿನ ಪ್ರಕಾರ ಗುರುತಿನ ಚೀಟಿ ನೀಡಿದರೊಳಿತೆಂಬ ಅಭಿಪ್ರಾಯ ಸಮಾಲೋಚನೆಯಲ್ಲಿ ಮೂಡಿಬಂತು. ಮೂಡಿಬಂದ ಉನ್ನೊಂದು ಅಭಿಪ್ರಾಯ ಯಂದರೆ ಹರಪನಹಳ್ಳಿ ಸಂಡೂರು, ಚೋರನೂರು ಮುಂತಾದ ಕುಂಪಣಿ ಸರಕಾರ ಪಾಲಿತ ಕೇಂದ್ರಗಳ ಸ್ಥಿತಿಗತಿಗಳನ್ನು ಕೂಲಂಕಷ ತಿಳಿದುಕೊಳ್ಳುವುದು.. ಕೂಡಲೆ ಯಡ್ಡವರನು ಸಂತರಸ್ಥರಿಗೆ ಗುರುತಿನ ಚೀಟಿ ಕೊಡುವ ಯವಸ್ಥೆ ಮಾಡಿದನಲ್ಲದೆ ಮಲ್ಲಾರಿರಾವ್ ಚವುಗಲೆ ಯಂಬ ದಕ್ಷ ಅಧಿಕಾರಿಯ ನೇತೃತ್ವದಲ್ಲಿ ವಂದು ಸಮಿತಿ ರಚಿಸಿ ಸುತ್ತಮುತ್ತಲ ಕೇಂದ್ರಗಳಿಗೆ ಹೋಗಿ ಸಂತರಸ್ಥರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ತಿಂಗಳೊಪ್ಪತ್ತಿನಲ್ಲಿ ವರದಿ ಸಲ್ಲಿಸಬೇಕೆಂದು ಆಗೆ ಮಾಡಿದನು. ಅಷ್ಟಕ್ಕೆ ತಾನು ಸಮಾಧಾನದ ವುಸುರು ಬಿಡುವ ಸ್ಥಿತಿಯಲ್ಲಿರಲಿಲ್ಲ... ಸುತ್ತಮುತ್ತ ಯಂಥೆಂಥದೋ ತಗಾದೆಗಳು, ಅಡಚಣೆಗಳು.. ಆಡಳಿತದ ಪಗಡೆಯೊಳಗೆ ಕಪ್ಪೆಗಳನ್ನಿಟ್ಟು ತೂಗಿ ತೂಗೀ ತನ್ನ ಕಯ್ಕೆಗಳು ನಿಲಿಬಿದ್ದುಬಿಟ್ಟಿರುವವು. ವಂದು ಯಿನ್ನೊಂದಕ್ಕೆ ಕೂಡಿ ಬರುತಾಯಿಲ್ಲ. ತಂದೆ ಸ್ಥಾನದಲ್ಲಿದ್ದು ಪ್ರಜೆಗಳನ್ನು ಪಾಲಿಸಬೇಕಾದ ರಾಜರೇ ಕಳ್ಳಕಾಕರ ಮಾ ಪೋಷಕರಾಗಿರುವರೆಂಬ ವರಮಾನವು, ವಾಮ ಮಾರಗದಿಂದ ಸಂಪಾದಿಸಿರುವ ಹಣದಿಂದ ಸರಕಾರದ ಸಾಲಸೋಲಕ್ಕೆ ಜಮಾ ಮಾಡಿ ರುಣಮುಕ್ತರಾಗುತ್ತಿರುವ ವರಮಾನವು, ತಮ್ಮ ಸರಕಾರವೇ ಯಿಂಥದೊಂದು ಯಿಷಮ ಪರಿಸ್ಥಿತಿ ನಿರುಮಾಣವಾಗುವುದಕ್ಕೆ ಕಾರಣವಾಗಿರುವುದು, ಯೇ ತಪ್ಪನ್ನು ಸರಿಪಡಿಸುವ ದಿಸೆಯಲ್ಲಿ ಕಳ್ಳಕಾಕರನ್ನು ಸೆರೆಹಿಡಿಯುವುದೋ, ರಾಜರನ್ನು ನಿಗ್ರಹಿಸುವುದೋ, ರಾಜನೊಳಗೆ ಕಳ್ಳನನ್ನು ಪತ್ತೆಮಾಡುವುದಾಗಲೀ, ಕಳ್ಳನೊಳಗೆ ರಾಜನನ್ನು ಪತ್ತೆಮಾಡುವುದಾಗಲೀ ಸುಲಭದ ಕೆಲಸವಲ್ಲ. ತನ್ನ ಹೆಂಡತಿಯೂ, ಕುಸಾಗ್ರಮತಿಯೂ ಆದ ಜೆನ್ನಿಫರಳ ಸಲಹೆ ಪಡೆಯಬೇಕೆಂದರೆ ಆಕೆ ಸಡನ್ನ