ಪುಟ:ವರ್ಷವರ್ದಂತೀ ಶತಕಂ .djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೀಠಿಕೆ, ಈ ಗ್ರಂಥಕರ್ತನಿಗೆ ಶ್ರೀವಾಸನೆಂದು ಹೆಸರು. ಈತನು ಗೋಕರ್ಣ ನಿವಾಸಿ; ಶಾಂಡಿಲ್ಯಗೋತ್ರದ ವೈಷ್ಯನ ಬ್ರಾಹ್ಮಣನು. ಇವನ ತಂದೆಗೆ ನಾರಾಯಣನೆಂದು ಹೆಸರು. ಕವಿಯು ಮುನ್ನುಡಿ ಕೃಷ್ಟರಾಣಿಯರವರ ವರ್ಷವಧ–ಂತಿಯ ಮಹೋತ್ಸವವನ್ನು ನೋಡಿ ಡುವುದಕ್ಕಾಗಿ ಪುತ್ರರೊಡನೆ ಗೋಕರ್ಣದಿಂದ ಮೈಸೂರಿಗೆ ಬಂದು, ಅಲ್ಲಿ ತಾನು ಕಂಡ ಮಹೋತ್ಸವದ ವಿಭವಗಳನ್ನೆಲ್ಲಾ ವಾರ್ಧಿಕಷಟ್ನದಿಗೆ ಇಂದ ಈ ಗ್ರಂಥರೂಪವಾಗಿ ರಚಿಸಿದ್ದಾನೆ. ಇದರ ಬಂಧವು ಲಲಿತವಾಗಿ ಯೂ ಶುದ್ಧವಾಗಿಯೇ ಇದೆ. ಇದರಲ್ಲಿ ರಾಜಧಾನಿಯಾದ ಮೈಸೂರು ನಗರದ ವರ್ಣನೆಯ, ವರ್ಧಂತೀಮಹೋತ್ಸವದಲ್ಲಿ ನಡೆದ ಎಲ್ಲಾ ಪದ್ಧತಿಗಳ ಕ್ರಮವಾಗಿ ವರ್ಣಿಸುಟ್ಟಿರುವುದರಿಂದ, ಮೈಸೂರು ಗೆ ಶವ ಕನ್ನಡಿಗರಿಗೆಲ್ಲಾ ಇದು ಆಸ್ತಾನಕರವಾಗದೆ ಇರಲಾರದು.