ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧9 ಮಾಡಿದ್ದು ಣೋ ಮಹಾರಾಯ. ಸದಾಶಿವ ದೀಕ್ಷಿತನೂ ಕೃಷ್ಣರಾಜ ಒಡೆಯರವರ ಭೇಟೋ ಮಾಡಿಕೊಂಡರು; ನಡೆದ ಸಂಗತಿಯನ್ನೆಲ್ಲಾ ವಿಸ್ತಾರವಾಗಿ ಅರಿಕೆ ಮಾಡಿದರು. ಅದಕ್ಕೆ ಪ್ರಭುಗಳು ಅಂಧಾ ಮಹಾ ತ್ಯ ರ ದರ್ಶನ ಇಲ್ಲದೆ ಹೋಯಿತಲ್ಲಾ ಎಂದು ಬಹಳವಾಗಿ ಪೇಚಾಡಿದರು. ಈ ಸಂಗತಿಯನ್ನು ಕೇಳಿ ರಾಜಸಭೆ ಯಲಾ ಬೆರಗಾಯಿತು, ಸದಾಶಿವದೀಕ್ಷಿತನು ಸಂಸಾರ ಸಮೇತವಾಗಿ ಮೈಸೂರಲ್ಲಿಯೇ ನಿಂತನು, ಸೀತಮ್ಮ ನೂ ಮಹಾದೇವನೂ ಅನೇಕ ಕಾಲ ಸಂಸಾರ ಮಾಡಿಕೊಂಡು ಸುಖವಾಗಿದ್ದರು, ಅತ್ತ ಸಂಜನಾಡಿಯು ಕಳ್ಳರ ಹುತ್ತವೇ ಒಡೆದು ಹೋ ಯಿತು. ಆ ಗುಂಪಿಗೆ ಶಿಕ್ಷೆಯಾಯಿತು. ಅದೇ ಕಾಲದಲ್ಲಿ ಅಮಾಸೆಯದೆಸೆಯಿಂದ ಇದೆಲ್ಲಾ ಹೊರಕ್ಕೆ ಬಂದ ಕಾರಣ ಅವನ ಅಪರಾಧವನ್ನು ಮನ್ನಿಸಿ ಅವನಿಗೆ ಶಿಕ್ಷೆ ಮಾಡದೆ ಸ. ಕಾ೯ರದವರು ಬಿಟ್ಟುಬಿಟ್ಟರು. ಸಂಜನಾಡಿ ಮಹಾಜನರೆಲ್ಲಾ ಕಾರಾಗೃಹಕ್ಕೆ ಹೊರಡುತಾ ಇರುವಾಗಿ ಅಮಾಸೆಯು ಕಚೆ ರಿಯಿಂದ ಬಿಡುಗಡೆಯಾಗಿ ಈಚೆಗೆ ಬರುತಾ ಅವರನ್ನು ಕಂ ಡು- ( ಮಾಡಿದ ಉಣೋ ಮಹಾರಾಯ, ಮಾಡಿದ ಉಣೋ ಮಹಾರಾಯ, ಮಾಡಿದ್ದ ಉಣೋ ಮಹಾರಾಯ ? ಎಂದು ಕೂಗಿದನು, ಎಂಬಲ್ಲಿಗೆ ನುಂಗಳನುಹಾ, ಸ೦ಪೂ ಣ ೯ ,