ಪುಟ:ಕ್ರಾಂತಿ ಕಲ್ಯಾಣ.pdf/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕ್ರಾಂತಿ ಕಲ್ಯಾಣ

೫. ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ

ಆಮೇಲಿನ ಎರಡು ವಾರಗಳು ಅನುಭವಮಂಟಪದ ಇತಿಹಾಸದಲ್ಲಿ
ಎಂದಿಗೂ ಮರೆಯದ ಚರಿತ್ರಾರ್ಹ ದಿನಗಳಾಗಿ ಪರಿಣಮಿಸಿದವು.
ಮಂಗಳವೇಡೆಯಲ್ಲಿ ಚಾಲುಕ್ಯರಾಣಿ ಕಾಮೇಶ್ವರಿದೇವಿಯ ಮೇಲೆ ಬಿಜ್ಜಳನು</br ನಡೆಸಿದ ರಹಸ್ಯ ಅತ್ಯಾಚಾರ ಅಗ್ನಿದಾಹದಲ್ಲಿ ಪರ್ಯವಸಾನವಾಗಿ, ಅದರ
ಕಿಡಿಗಳು ಕಲ್ಯಾಣಕ್ಕೆ ಹಾರಿ ಹೊನ್ನಮ್ಮನ ಚಾವಡಿಯ ದುರಂತದಲ್ಲಿ
ಮುಕ್ತಾಯವಾಯಿತು.
ಮುಂದಿನ ದಿನಗಳಲ್ಲಿ ಸಂಪಾದನೆ ಕಾಲಜ್ಞಾನಗಳ ರಚನೆಗಾಗಿ ಪರಿಶ್ರಮಿಸಿದ
ಶರಣಕವಿಗಳು ಐತಿಹಾಸಿಕ ದೃಷ್ಟಿಯನ್ನು ಬೆಳೆಸಿಕೊಂಡಿದ್ದರೆ
, “ಮಂಗಳವೇಡೆಯ ಅಗ್ನಿದಾಹವೆ ಪ್ರಣತೆಯಾಗಿ,
ಹರಳಯ್ಯ ಮಧುವರಸ ಶೀಲವಂತರ ರಕ್ತವೆ
ಕೆಂಬಣ್ಣದ ಎಣ್ಣೆಯಾಗಿ,
ಚಾಲುಕ್ಯರಾಜ್ಯ ಪ್ರತಿಷ್ಠೆಯ ಬತ್ತಿಯ ಹಚ್ಚಿದರು, ನೋಡಾ !
ಉರಿದಿತ್ತು ಪ್ರಜ್ವಲಿಸಿ, ಹರಡಿತ್ತು ನಾಲೈಸೆಗೆ !
ದೀಪಕೆಳೆಸಿದ ಶಲಭದಂತೆ ಆ ಉರಿಯಲ್ಲಿ
ಅಳಿದನು ಬಿಜ್ಜಳನು ಭಸ್ಮವಾಗಿ,” ಎಂದು ಬರೆಯುತ್ತಿದ್ದರು.
ಆದರೆ ಭಾರತೀಯರ ದೃಷ್ಟಿಯಲ್ಲಿ ರಾಜಕೀಯ ಘಟನೆಗಳ ಪಟ್ಟಿಯಾಗಿರಲಿಲ್ಲ
ಇತಿಹಾಸ, ರಾಜ್ಯದ ಸಂಸ್ಕೃತಿ ಸಮನ್ವಯಗಳೇ ಇತಿಹಾಸವೆಂದು ಅವರು ತಿಳಿದಿದ್ದರು.
ಅಂತೆಯೇ ಶರಣಕವಿಗಳು ರಾಜಕೀಯ ಘಟನೆಗಳನ್ನು ಉಪೇಕ್ಷಿಸಿ ಸಾಂಸ್ಕೃತಿಕ
ಇತಿಹಾಸವನ್ನು ಚರಿತ್ರೆ ಪುರಾಣಗಳಾಗಿ ಚಿತ್ರಿಸಿದರು.
ವಧಾಪೀಠದ ಅಮಾನುಷ ದಾನವೀ ಘಟನೆಗಳು ಮುಗಿದ ಮಾರನೆಯ
ದಿನ ಅನುಭವಮಂಟಪದಲ್ಲಿ ಶರಣರ ಸಭೆ ನಡೆದು ಮಧುವರಸನ ಅಂತ್ಯ
ಸಂದೇಶದ ಪಾಠವಾಯಿತು. ಆ ಸಂದರ್ಭದಲ್ಲಿ ಸಭೆಯಲ್ಲಿದ್ದ ವೃದ್ಧ ಜವರಾಯ
ಆ ದಿನವೇ ಕಲ್ಯಾಣವನ್ನು ಬಿಟ್ಟು ಚಾಲುಕ್ಯರಾಜ್ಯದ ಐಹೊಳೆಯ ಸಮೀಪದಲ್ಲಿದ್ದ