ಪುಟ:ಕ್ರಾಂತಿ ಕಲ್ಯಾಣ.pdf/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೩೨

ಕ್ರಾಂತಿ ಕಲ್ಯಾಣ


ವಸ್ತುಗಳನ್ನು ತೆಗೆದು ಅಲಂಕರಿಸಿಕೊಂಡು ಅರ್ಧಗಳಿಗೆಯಲ್ಲಿ ಸಿದ್ದಳಾಗಿರಬೇಕು,” ಎಂದು ಹೇಳಿ ಬಾಗಿಲು ಮುಚ್ಚಿಕೊಂಡು ಹೊರಗೆ ಹೋದನು.

***

ರಾಜಗೃಹದಲ್ಲಿ ಆ ದಿನ ನಡೆಯುತ್ತಿದ್ದ ಪಾನಗೋಷ್ಠಿ ವಿಚಿತ್ರ ಪರಿಸ್ಥಿತಿಯಲ್ಲಿ, ವಿಶೇಷ ನಿಬಂಧನೆಗಳೊಡನೆ ಪ್ರಾರಂಭವಾಗಿತ್ತು.

ಪಾನಗೋಷ್ಠಿಯ ಆಮಂತ್ರಣವನ್ನು ಅಂಗೀಕರಿಸುವ ಮೊದಲು ಜಗದೇಕಮಲ್ಲನು ಕರ್ಣದೇವನಿಗೆ ಹೇಳಿದ್ದನು-“ದೀಕ್ಷೆ ನಡೆದಾಗ ಬ್ರಹ್ಮೇಂದ್ರ ಶಿವಯೋಗಿಗಳಿಗೆ ಸುರಾಪಾನ ಮಾಡುವುದಿಲ್ಲವೆಂದು ವಚನ ಕೊಟ್ಟಿದ್ದೇನೆ. ಅದರಂತೆ ನಡೆಯುವುದು ನನ್ನ ನಿರ್ಧಾರ. ನಿನಗೆ ಮಧು, ನನಗೆ ಪಾನಕ, ಹೀಗೆ ಎರಡು ಬಗೆಯ ಪಾನೀಯಗಳು ಸಿದ್ಧವಾಗಬೇಕು. ಗಣಿಕಾವಾಸದ ಹೆಗ್ಗಡಿತಿ ದಾಸಿಯರಾರೂ ಪಾನಗೋಷ್ಠಿಯಲ್ಲಿರಲಾಗದು. ನಿನಗೆ ಜೊತೆಗಾತಿಯೊಬ್ಬಳು ಅಗತ್ಯವಾದರೆ ನಗರದಿಂದ ಹೊಸ ಹೆಣ್ಣೊಬ್ಬಳನ್ನು ಕರೆಸಿಕೊಳ್ಳಬಹುದು. ನನ್ನ ಅಡ್ಡಿಯಿಲ್ಲ. ಈ ನಿಬಂಧನೆಗಳಿಗೆ ಒಪ್ಪುವುದಾದರೆ ನಾನು ಬರುತ್ತೇನೆ,” ಎಂದು.

“ನಿನ್ನ ಇಷ್ಟದಂತಾಗಲಿ, ಭಂಡರಾಜ. ಅದರಂತೆ ಎಲ್ಲವನ್ನೂ ಏರ್ಪಡಿಸಲು ಹೆಗ್ಗಡೆಗೆ ಹೇಳುತ್ತೇನೆ.” ಎಂದು ಕರ್ಣದೇವ ಭರವಸೆ ಕೊಟ್ಟಿದ್ದನು.

ನಿಬಂಧನೆಯಂತೆ ಪೈಜಣ ಕೈಬಳೆಗಳ ಸಪ್ಪಳವಿಲ್ಲದೆ ಗ್ರಾಮಾಂತರದಿಂದ ಬಂದಿದ್ದ ಇಬ್ಬರು ಲಾವಣಿಕಾರರ ನಾಡಗೀತೆಗಳಿಂದ ಪಾನಗೋಷ್ಠಿ ಪ್ರಾರಂಭವಾಯಿತು. ಜಗದೇಕಮಲ್ಲ ಕರ್ಣದೇವರಸರು ದಿಂಬುಗಳು ಹರಡಿದ್ದ ಪರ್ಯಂಕಗಳ ಮೇಲೆ ಕುಳಿತು ಕೇಳುತ್ತಿದ್ದರು.

ಪ್ರಾರಂಭದ ಶಿವಸ್ತೋತ್ರ ತತ್ವಗೀತೆಗಳನ್ನು ಮುಗಿಸಿ ಲಾವಣಿಕಾರರು ಕಾಮೋತ್ತೇಜಕ ಅಶ್ಲೀಲ ಗೀತೆಗಳನ್ನು ಹಾಡಲು ಮೊದಲು ಮಾಡಿದಾಗ ಜಗದೇಕಮಲ್ಲನು ಅಸಹನೆಯಿಂದ ಚಡಪಡಿಸಿದುದನ್ನು ಕಂಡು ಕರ್ಣದೇವ, ಬೇಗ ಮುಗಿಸುವಂತೆ ಹೆಗ್ಗಡೆಗೆ ಆಜ್ಞೆ ಮಾಡಿದನು.

ಲಾವಣಿಕಾರರು ಸಂಭಾವನೆ ಪಡೆದು ಹೊರಗೆ ಹೋದ ಮೇಲೆ ಪಸಾಯಿತರು ಮಧುಪಾತ್ರೆಬಟ್ಟಲುಗಳನ್ನು ಪಾರ್ಶ್ವದ ಪೀಠಗಳ ಮೇಲೆ ತಂದಿಟ್ಟುಸಜ್ಜುಗೊಳಿಸಿದರು. ಅವರಲ್ಲೊಬ್ಬನು ಹಣ್ಣಿನ ಪಾನೀಯ ಮತ್ತು ಮಧು ತುಂಬಿದ ಎರಡು ಬಟ್ಟಲುಗಳನ್ನು ಜಗದೇಕಮಲ್ಲ ಕರ್ಣದೇವರಸರ ಎದುರಿಗಿಟ್ಟು "ಪ್ರಭುಗಳು ಒಪ್ಪಿಸಿಕೊಳ್ಳಬೇಕು,” ಎಂದು ಹೇಳಿ ಹಿಂದೆ ಸರಿದನು.

ಜಗದೇಕಮಲ್ಲನೊಡನೆ ಕರ್ಣದೇವ ಹೇಳಿದನು : “ನೋಡು, ಭಂಡರಾಜ.