ಪುಟ:Valmeeki Ramayana Shaapa Mattu Vara Preliminary Pages.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xxi ವರಗಳ ಪಟ್ಟಿಯನ್ನು ತಯಾರಿಸಿ ಈ ಗ್ರಂಥವನ್ನು ಪರಿಪೂರ್ಣಗೊಳಿಸುವ ಪ್ರಯತ್ನವನ್ನು ಮಾಡಿಯಾಗಿದೆ. (೪) ವಾಲ್ಮೀಕಿರಾಮಾಯಣದ ಸಂಸ್ಕತ ಸಂಹಿತೆಗಳನ್ನು ಹೊಂದಿದ ಅನೇಕ ಆವೃತ್ತಿಗಳು ಪ್ರಕಟವಾಗಿದ್ದು, ಕೆಲವು ಸಂಕೀರ್ಣಗಳಲ್ಲಿ ಸಂಸ್ಕೃತದಲ್ಲಿ ಟೀಕೆ, ಭಾರತೀಯ ಭಾಷೆಯಲ್ಲಿಯ ಅನುವಾದ ಇವು ಅಂತರ್ಭೂತವಾಗಿವೆ. ನಿರ್ಣಯಸಾಗರ ಪ್ರೆಸ್‌, ಮುಂಬಯಿಯಲ್ಲಿ ಗುಜರಾತಿ ಪ್ರಿಂಟಿಂಗ್, ಪ್ರೆಸ್, ಮುಂಬಯಿ; ಗೀತಾ ಪ್ರೆಸ್, ಗೋರಖಪುರ; ಶ್ರೀರಾಮಕೊಶ ಮಂಡಳಿ, ಪುಣೆ- ಇವಲ್ಲದೆ ಮದ್ರಾಸ್, ಕುಂಭಕೋಣಮ್, ಕಲಕತ್ತೆ, ಬಡೋದಾ ಇಲ್ಲಿ ಪ್ರಕಟವಾದ ಆವೃತ್ತಿಗಳು ವಿಶೇಷವಾಗಿ ಉಲ್ಲೇಖನೀಯವಾಗಿವೆ. ಬಡೋದೆಯ ಓರಿಯೆಂಟಲ್ ಇನ್‌ಸ್ಟಿಟ್ಯೂಟ್ ಇವರ ಆವೃತ್ತಿಯಲ್ಲಿ ಸಂಶೋಧಿತ ಶುದ್ದ ಪಾಠವಿರುವುದರಿಂದ ಈ ಆವೃತ್ತಿಯಲ್ಲಿಯ ಸಂಹಿತೆಗೆ ಅಧಿಕೃತ ಮನ್ನಣೆ ಇದೆ. ಈ ಆವೃತ್ತಿಯಲ್ಲಿಯ ಸಂಹಿತೆಗಳನ್ನು ಬಳಸುವುದೇ ಸೂಕ್ತವಿದೆ. ಆದರೆ ಈ ಆವೃತ್ತಿಗಳು ತುಂಬಾ ಮಹತ್ವದ ಗ್ರಂಥಾಲಯಗಳಲ್ಲಿ, ಅದರಲ್ಲೂ ಗ್ರಾಮೀಣ ಸಂಸ್ಥೆಗಳಲ್ಲಂತೂ, ಈ ಪ್ರತಿಗಳು ಕಣ್ಣಿನಿಂದ ನೋಡಲು ಸಹ ಸಿಗುವುದಿಲ್ಲ. ಈ ಗ್ರಂಥವು ಈ ರೀತಿ ದುರ್ಲಭವಾಗಿರುವುದರಿಂದ ಸರ್ವ ಸಾಮಾನ್ಯರಿಗೆ ದೊರಕುವಂತಿಲ್ಲ. “ವಾಲ್ಮೀಕಿ ರಾಮಾಯಣ: ಶಾಪ ಮತ್ತು ವರ' ಗ್ರಂಥವು ಬಹುಮಟ್ಟಿಗೆ ಸರ್ವಸಾಮಾನ್ಯ ಓದುಗರಿಗಾಗಿ ಇರುವುದರಿಂದ ಇದರಲ್ಲಿ ಸಹಜವಾಗಿ ದೊರಕಬಹುದಾದ ಸಂಹಿತೆಗಳನ್ನು ಅಳವಡಿಸುವುದು ಆವಶ್ಯಕ ಮತ್ತು ಸೂಕ್ತವೆನಿಸಿದ್ದರಿಂದ ಗೀತಾ ಪ್ರೆಸ್‌, ಗೋರಖಪುರ, ಇವರ ಆವೃತ್ತಿಯಲ್ಲಿಯ ಸಂಸ್ಕೃತ ಸಂಹಿತೆಯನ್ನು, ಅದರಲ್ಲಿದ್ದ ಚಿಕ್ಕಪುಟ್ಟ ಕೊರತೆಗಳನ್ನು ಕಡೆಗಣಿಸಿ, ಉಪಯೋಗಿಸಲಾಗಿದೆ. (೫) ವಾಲ್ಮೀಕಿ ರಾಮಾಯಣದ ಉಪಲಬ್ದವಿದ್ದ ಮರಾಠಿ ಅನುವಾದಗಳನ್ನು, ಅವುಗಳಲ್ಲಿಯೂ ಕೈಕಾಶೀನಾಥಶಾಸ್ತಿ ಲೇಲೆ ಇವರಿಂದ ಪ್ರಪ್ರಥಮವಾಗಿ ಪ್ರಕಟಿಸಲ್ಪಟ್ಟ ಪ್ರತಿಯನ್ನು ಈ ವಿವೇಚನೆಯಲ್ಲಿ ಸ್ವೀಕರಿಸಲಾಗಿದೆ. (೬) ವ್ಯಕ್ತಿ ವಿಶೇಷ ಸ್ಥಳವಿಶೇಷ- ಈ ಪ್ರಕರಣಗಳನ್ನು ಬರೆಯುವಾಗ ಕೈ.ಸಿದ್ದೇಶ್ವರ ಶಾಸ್ತಿ ಚಿತ್ರಾವ ಇವರ 'ಪ್ರಾಚೀನ ಚರಿತ್ರಕೋಶ' ಅಲ್ಲದೆ ಪಂಡಿತ ಮಹಾದೇವಶಾಸ್ತ್ರೀ ಜೋಶಿ ಇವರು ಸಂಪಾದಿಸಿದ 'ಭಾರತೀಯ ಸಂಸ್ಕತಿ ಕೋಶ', ಇದೇ ರೀತಿ ಶ್ರೀ ಅವರೇಂದ್ರ ಗಾಡ ಗೀಳ ಅವರ 'ಶ್ರೀರಾಮಕೆಶ'- ಇವನ್ನು ಆಧಾರಗ್ರಂಥಗಳನ್ನಾಗಿಟ್ಟುಕೊಂಡಿದೆ. ಇವುಗಳಿಂದ ಕೆಲವು ಸಂದರ್ಭಗಳಲ್ಲಿ ಬೇಕಿದ್ದ ವಿಷಯಭಾಗವನ್ನು ಅವುಗಳಲ್ಲಿದ್ದಂತೆಯೇ ಬಳಸಿದ್ದರೆ, ಕೆಲವೆಡೆ ತುಸುಮಟ್ಟಿಗೆ ಆವಶ್ಯಕವಿದ್ದಲ್ಲಿ ಬದಲಾವಣೆ ಮಾಡಿ ಬಳಸಲಾಗಿದೆ. ಪ್ರಸ್ತಾವನೆ ಬರೆಯುವಾಗ ಉಪಯೋಗಿಸಲ್ಪಟ್ಟ ಸಂದರ್ಭಗಳ ಸೂಚಿಯನ್ನು ಕೊನೆಯಲ್ಲಿ ಕೊಡಲಾಗಿದೆ. ಈ ಎಲ್ಲ ಗ್ರಂಥಗಳಿಗೆ ಹಾಗೂ ಗ್ರಂಥಕರ್ತರಿಗೆ ನಾನು ಚಿರಋಣಿಯಾಗಿದ್ದೇನೆ. ಅವರ ಈ