ಪುಟ:Valmeeki Ramayana Shaapa Mattu Vara Preliminary Pages.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XX ಈ ಕೃತಿಯ ದೃಷ್ಟಿಕೋನ ರಾಮಾಯಣವನ್ನು ಆಳವಾಗಿ ಓದಿಕೊಂಡು ಅದರಿಂದ ಶಾಪ ಮತ್ತು ವರ ಇವುಗಳನ್ನು ಮಾತ್ರ ಆಯ್ದುಕೊಳ್ಳುವ ಇದೊಂದು ಪ್ರಯತ್ನವಾಗಿದೆ. ಇದು ಶಾಪ/ ವರಗಳ ಸಂಕಲನಾತ್ಮಕ ಗ್ರಂಥವಾಗಿದ್ದು ರಾಮಾಯಣದ ಮೇಲಿನ ಪ್ರಬಂಧ ವೆಂದು ತಿಳಿಯಬಾರದು. ಇದನ್ನು ಬರೆಯುವಾಗ ಒಂದು ದೃಷ್ಟಿಕೋನವನ್ನಿಟ್ಟು ವಿವೇಚನೆಯನ್ನು ಆ ಚೌಕಟ್ಟಿನಲ್ಲಿಯೇ ಇಟ್ಟುಕೊಳ್ಳಲಾಗಿದೆ. (೧) ಇಲ್ಲಿಯ ವಿಷಯ ಕೇವಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದೆ. ಅದನ್ನುಳಿದು ಬೇರೆ ರಾಮಾಯಣಗಳ ಊಹಾಪೋಹ ಇದರಲ್ಲಿಲ್ಲ. ಶಾಪ ಮತ್ತು ವರ ಇವುಗಳನ್ನು ಹೊರತುಪಡಿಸಿ, ಇವುಗಳಿಗೆ ಸಂಬಂಧವಿಲ್ಲದ ವಾಲ್ಮೀಕಿಯ ರಾಮಾಯಣ ದಲ್ಲಿಯ ಇತರ ಸಂದರ್ಭ-ವಿಷಯಗಳನ್ನು ಇದರಲ್ಲಿ ಅಳವಡಿಸಿಲ್ಲ; (೨) ವಾಲ್ಮೀಕಿ ರಾಮಾಯಣದಲ್ಲಿಯ ಎಲ್ಲ ಶಾಪ/ವರಗಳ ಸಂಕಲನವನ್ನು ತಯಾರಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿದ್ದರೂ ಅಪ್ಪಿತಪ್ಪಿ ಯಾವದಾದರೊಂದು ಶಾಪ/ವರವು ಉಳಿದುಹೋಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. (೩) ಇದರಲ್ಲಿ ವಾಲ್ಮೀಕಿರಾಮಾಯಣದಲ್ಲಿದ್ದ ಅರವತ್ತೊಂದು ಶಾಪಗಳ ಮತ್ತು ಎಂಬತ್ತೆರಡು ವರಗಳ ಬಗ್ಗೆ ವಿವರಣೆಯನ್ನು ಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಪ್ರತಿಯೊಂದು ಶಾಪ/ವರದ ಪೂರ್ವಸಂದರ್ಭವನ್ನು, ಸಂಸ್ಕೃತ ಸಂಹಿತೆಯ ಜೊತೆಗೆ ಕನ್ನಡ ಅನುವಾದವನ್ನು ಕೊಡಲಾಗಿದೆ. ಆವಶ್ಯಕವೆನಿಸಿದಲ್ಲಿ ಅದರ ವೈಶಿಷ್ಟ್ಯಪೂರ್ಣ ಮಾಹಿತಿಯನ್ನೂ ಕೊಡಲಾಗಿದೆ. ಜೊತೆಗೆ ಶಪಥ, ಸತ್ಯಕ್ರಿಯೆ, ಆಶೀರ್ವಾದ, ಹರಕೆ, ಆಕಾಶವಾಣಿ, ಪುಷವೃಷ್ಟಿ ಇವುಗಳ ವಿಮರ್ಶೆಯನ್ನು ಕೇವಲ ಶಾಪ/ವರಗಳ ಸಾಧರ್ಮ್ಮ ಅಥವಾ ಭೇದಗಳನ್ನು ಸೃಷ್ಟಿಕರಿಸಲು ಆವಶ್ಯಕವಿದ್ದ ಮಟ್ಟಿಗೆ ಆಯ್ದುಕೊಳ್ಳಲಾಗಿದೆ. ಇಲ್ಲಿ ಕೊಡಲಾದ ಉದಾಹರಣೆಗಳು ಸಂಪೂರ್ಣ ವಾಗಿಲ್ಲ. ಶಾಪ/ವರಗಳನ್ನು ಲಕ್ಷಿಸಿ ಬಂದ ವ್ಯಕ್ತಿಗಳ, ಸ್ಥಾನಗಳ ಸಂಕ್ಷಿಪ್ತ ಮಾಹಿತಿಯನ್ನು ಒಂದು ಸ್ವತಂತ್ರ ಪ್ರಕರಣದಲ್ಲಿ ಕೊಡಲಾಗಿದೆ. ಇಷ್ಟೇ ಅಲ್ಲದೆ, ಕೆಲವು ಸಂದೇಹಾಸ್ಪದ ಶಾಪ/ವರಗಳ ಹಾಗೂ ಓದುಗರ ಪರಿಶೀಲನೆಗೆ ಅನುಕೂಲವಾಗಲೆಂದು ಏಳು ಪಟ್ಟಿಗಳನ್ನು ಪರಿಶಿಷ್ಟದಲ್ಲಿ ಅಳವಡಿಸಲಾಗಿದೆ. ಶಾಪ/ವರಗಳ ಸಂಬಂಧವಾಗಿ ಬರುವ ಅನೇಕ ವಿಷಯಗಳ ಪರಾಮರ್ಶೆಯನ್ನು “ಶಾಪಾದಪಿ ವರಾದಪಿ!' ಎಂಬ ದೀರ್ಘ ಪ್ರಸ್ತಾವನೆಯಲ್ಲಿ ಮಾಡಲಾಗಿದೆ. ಶಾಪ/