ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕನ್ನಡಿಗರ ಚೆನ್ನಗಾಲವು.

೩೦೧

ಯಕ್ಕೆ ಅದು ಮೈತು೦ಬಿಕೊ೦ಡು ತನ್ನೊಳಗಿನ ಶಾರೀರಿಕ ಶಕ್ತಿ, ಬುದ್ಧಿಶಕ್ತಿ, ಹೃದಯಶಕ್ತಿಗಳನ್ನು ಪ್ರಕಟಗೊಳಿಸಲು ತನ್ನ ಸ್ವತ್ವದ ಒ೦ದೊ೦ದೇ ಗುಣಗಳನ್ನು ಹೂವು ಅರಳುವಂತೆ ಅರಳಿಸಲುದ್ಯುಕ್ತ ವಾದಂತೆ ಲಕ್ಷಣಗಳು ಗೋಚರವಾಗುತ್ತವೆ; ಹೀಗಾಗಿ ಕರ್ನಾಟಕನಾಡಿಗತನದಲ್ಲಿ ಹರೆಯದ ಗುರುತುಗಳು ಈಗ ಕ೦ಡುಬರುತ್ತವೆ. ಈ ಅ೦ಶಗಳನ್ನು ಮನಗಾಣಿಸಲಿಕ್ಕೆ ಆಕಾಲದ ಕನ್ನಡಿಗರ ಶಾರೀರಿಕಬಲ, ಬುದ್ದಿಬಲ, ಹೃದಯಬಲಗಳ ಜ್ಞಾನವು ನಮಗಿದ್ದೇ ತೀರಬೇಕಷ್ಟೇ ? ಕನ್ನಡಿಗರ ಬಲವನ್ನಳೆಯಲಿಕ್ಕೆ ನಮಗೆ ಉತ್ತರದ ಸಾರ್ವಭೌಮನಾದ ಹರ್ಷನನ್ನು ಕನ್ನಡಿಗರು ಸೋಲಿಸಿ ಸದೆಬಡಿದುದೊ೦ದೇ ಒ೦ದು ಬಹುಕಾಲದಿಂದಲೂ ಸ೦ಚಿನ೦ತುರಿಯುವ ಮಾತು ಸಾಕಷ್ಟಿದೆ. ಅವರ ಬುದ್ಧಿಶಕ್ತಿಯನ್ನು ತಿಳಿಯಲಿಕ್ಕೆ ಆಯಾ ಕಾಲದಲ್ಲಿ ಹುಟ್ಟಿ ಬೆಳೆದ ಕವಿಗಳು ತಮ್ಮ ವಾಣಿಯ ಬಲದಿಂದ ಕನ್ನಡಿಗರ ಜನರ ಜೀವನದ ಪರಿಯನ್ನು ತಮ್ಮ ಅಕ್ಷರಗಳಲ್ಲಿ ಚಿತ್ರಿಸಿದ್ದೊಂದು ಸಾಕು. ಜನಜೀವನದ ನೆರಳು ಈ ಕಾಲಕ್ಕೆ ರಾಜರಲ್ಲಿ ಮೂಡಿ ಮೂರ್ತಿಗೊ೦ಡಿತ್ತೆನ್ನಲಿಕ್ಕೆ ಚಾಲುಕ್ಯ ರಾಜರುಗಳೆಲ್ಲರೂ ಒಂದರಹಿಂದೊಬ್ಬರು ಕಡುಗಲಿಯ ಮಾನಾಳುಗಳಾಗಿ ತಮ್ಮ ಬುದ್ಧಿಶಕ್ತಿಯಿಂದ ಕನ್ನಡದ ಹೆಸರನ್ನು ಅಮರಗೊಳಿಸಿ ಹಿಂದೂದೇಶದ ಇತಿಹಾಸದೊಳಗೆ ತಮ್ಮ ಅ೦ದರೇನೇ ಕನ್ನಡಿಗರ ಚರಿತ್ರೆಯನ್ನು ಬರೆಯಹಚ್ಚಿದೊಂದು ಸಾಕು. ಇನ್ನು ಅವರ ಹೃದಯ ಬಲವನ್ನರಿಯಲಿಕ್ಕೆ ಅವರೆಲ್ಲರೂ ತಮ್ಮ ಪ್ರಜೆಗಳನ್ನು ಮಕ್ಕಳಂತೆ ನಡೆಯಿಸಿಕೊಂಡು ಅವರಿಗೆ ಯೋಗ್ಯ ಜೀವನವನ್ನು ಕಲ್ಪಿಸಿಕೊಟ್ಟು ವಿತರಣೆಯಿ೦ದಲೂ ದಯೆಯಿಂದಲೂ ಅವರನ್ನಾಳಿ ತಮ್ಮ ಆಳಿಕೆಯಲ್ಲಿಯೇ ಕನ್ನಡಿಗರ ಶಿಲ್ಪಕಲೆಯದೊ೦ದು ಹೊಸ ಮಾದರಿಯ ಮೋಡಿಯನ್ನು ರೂಪುಗೊಳಿಸಿ, ಬಳಿಕೆಯಲ್ಲಿ ತಂದಿರುವದೊಂದು ಮಾತು ಸಾಕು. ಇವೆಲ್ಲ ' ಮಾತು ನಾಕು ' ಗಳಲ್ಲಿ ಮಿಡಿಗನ್ನಡಿಗರ ಮಿಡಿಯೋಟದ ನೆಲ್ಮೆಯ ನೋಟವು ಬಲು ಢಾಳಾಗಿ ಕಾಣುತ್ತಿದೆಯಲ್ಲವೇ ? ಕನ್ನಡ ಸಂಸ್ಕೃತಿಯ ಮು೦ದಾಡಿಗಳಾದ ಚಾಲುಕ್ಯರು ವೈಷ್ಣವರಾಗಿದ್ದುದು ಮು೦ದೆ ಕನ್ನಡನಾಡಿನಲ್ಲಿ ವೈಷ್ಣವಮತವು ಮುಂಬರುವ ಶುಭೋದ