ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೮

ಭಾರತೀಯರ ಇತಿಹಾಸವು.

ಮುಟ್ಟಿಸಬೇಕೆಂಬುದೊಂದು ಹವ್ಯಾಸವು ಇದೀಗ ಹೃದಯಪ್ರದೇಶದೊಳಗೆ ಹೆಚ್ಚುತ್ತಿದ್ದಿತು. ಯಾವ ಜ್ಞಾನಾಮೃತವನ್ನು ಅವರ ಗುರುವಾದ ಮಹಮ್ಮದ ಪೈಗಂಬರನು ಹಿಂದೂದೇಶದ ಕಡೆಯಿಂದ ಬೀಸುವ ಗಾಳಿಯಿ೦ದಲೂ, ಹಿಂದೂದೇಶದಿಂದ ಬರುವ ವರ್ತಕರಿಂದಲೂ, ಕಲಿತುಕೊಂಡು ಅದಕ್ಕೇ ಇಸ್ಲಾಮಧರ್ಮವೆಂಬ ಹೊದಿಕೆಯನ್ನು ಹರಿಸಿದನೋ, ಆ ಜ್ಞಾನಾಮೃತವನ್ನಲ್ಲದಿದ್ದರೂ, ಅದಕ್ಕೆ ಕೀಳಾದ ಅನೇಕ ವಿಧದ ಶಾಸ್ತ್ರವಿದ್ಯೆ ಮೊದಲಾದವುಗಳನ್ನು ಅರಬ ಸವಿಗಾರರು ಹಿಂದೂ ಜನರ ಅಡಿದಾವರೆಗಳಲ್ಲಿ ಕುಳಿತುಕೊಂಡು ಕಲಿತರು. ಬ್ರಾಮ್ಹಣರಾದವರಲ್ಲಿದ್ದುಕೊಂಡು ಅರಬ ಶೇಖರು ಅದೇ ಮೊದಲು ರಾಜತಂತ್ರ ಶಾಸ್ತ್ರದ ಮೂಲಾಕ್ಷರಗಳನ್ನು ತಿಳಿದುಕೊ೦ಡರು; ಇಷ್ಟೇ ಅಲ್ಲದೆ ತತ್ಕಾಲೀನ ಬಗದಾದ ಖಲೀಫರಾದ ಹರುನ-ಅಲ್-ರಸೀದ ಎಂಬವರು ಹಲವು ಹಿಂದೂ ಶಾಸ್ತ್ರಗಳನ್ನು ತಾವು ಕಲಿಯಬೇಕೆಂಬ ಅಪೇಕ್ಷೆಯಿಂದ ಹಿಂದುಸ್ಥಾನದಿಂದ ತಮ್ಮ ಒಡ್ಡೋಲಗಕ್ಕೆ ಬ್ರಾಮ್ಹಣ ಪ೦ಡಿತರನ್ನು ಕರೆಯಿಸಿ ಕೊಂಡರು. ಹೀಗಾಗಿ ಅರಬರು ಹಿಂದೂಜನರಿಂದ ಆರ್ಯಭಟ್ಟನ ಜ್ಯೋತಿಷ, ಗಣೀತಶಾಸ್ತ್ರ, ಬೀಜಗಣಿತ, ವೈದ್ಯಕೀಯ, ಶಿಲ್ಪಕಲೆ, ಗಾಯನಕಲೆ ಅವೇ ಮುಂತಾದ ಹಣ್ಣಿಗೆ ಬಂದ ಶಾಸ್ತ್ರಗಳನ್ನು ಕಲಿತು ಕೊ೦ಡದ್ದಲ್ಲದೆ, ಅವುಗಳ ಗ್ರಂಥಗಳನ್ನು ತಮ್ಮ ಭಾಷೆಯಲ್ಲಿ ಪರಿವರ್ತಿಸಿ, ಅವನು ಯುರೋಪದೊಳಗೆ ಹರಡಿಸಿದರು. ತಮ್ಮ ದೇಶದೊಳಗೆ ಆಸ್ಪತ್ರೆಗಳನ್ನು ಹಾಕಿ ಜನರಿಗೆ ಔಷಧ, ವನಸ್ಪತಿಗಳ ಜ್ಞಾನ ಮಾಡಿಕೊಡಲಿಕ್ಕೆಂದು ಹಿಂದೂದೇಶದಿಂದ ಅನೇಕ ವೈದ್ಯರನ್ನು ಒಯ್ದರು. ಅರಬಸ್ಥಾನದಂಧ ದೂರಿನ ದೇಶದಿಂದ ಹುರಿದುಂಬಿದವರಾದ ಅರಬ ವಿದ್ಯಾರ್ಥಿಗಳು ಜ್ಞಾನಪಡೆಯುವ ಲಾಲಸೆಂಬoದ ಬಂದು ಹಿಂದುಸ್ಥಾನದೊಳಗಿನ ಬೌದ್ಧವಿಹಾರ, ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ವಿದ್ಯಾರ್ಥಿಗಳೊಡನೆ ಒಂದಾಗಿ ಕಲೆತು ನಡೆಯುತ್ತಿದ್ದರು. ವೈದ್ಯಕೀಯ ಅಭ್ಯಾಸಕ್ಕೆ ಹೆಸರುವಾಸಿಯಾಗಿರುವ ತಕ್ಷಶಿಲೆಯ ವಿದ್ಯಾಲಯವಂತೂ ಬಗದಾದ ಅರಬ ವಿದ್ಯಾರ್ಥಿಗಳಿಗೆ ನಡುಮನೆ ಹಿತ್ತಲ ಮನೆಯ೦ತಾದ್ದರಿಂದ ಅವರೆಲ್ಲರೂ ಇಲ್ಲಿಯೇ ಬಂದು ಮುತ್ತುತ್ತಿದ್ದರು.