ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೬

ಭಾರತೀಯರ ಇತಿಹಾಸವು.

ವಿಚಾರಗಳನ್ನು ತನ್ನ ಪ್ರವಾಸ ವರ್ಣನೆಯಲ್ಲಿ ಬರೆದಿಟ್ಟಿದ್ದಾನೆ; ಅದರಲ್ಲಿ ಅವನನ್ನುವದು - ಈ ಮಹಾರಾಷ್ಟ್ರದ ಅಂದರೆ, ದೊಡ್ಡ ನಾಡಿನ ಸುತ್ತಳತೆಯು ೧೨೦೦ ಮೈಲು. ರಾಜಧಾನಿಯ ಪಶ್ಚಿಮಕ್ಕೊಂದು ಹೊಳೆ. ಬೆಳಸು ಭೂಮಿ. ಉಷ್ಣ ಹವೆ. ನಾಡಿಗರ ನಿಲುವಿಕೆ ಎತ್ತರ. ನಡೆಯಲ್ಲಿ ಛಲಬಲ ಬಿಂಕುಗಳುಳ್ಳ ವೀರಾಳುಗಳು. ಉಪಕಾರಿಗಳು. ಮೋಸವನ್ನರಿಯದವರು. ಸತ್ಯವ೦ತರು. ಮೊರೆಹೊಕ್ಕವರನ್ನು ಕಾಪಾಡುವ ತೆತ್ತಿಗರು. ಮಾನಧನರು. ಕದ್ದು ಮುಚ್ಚಿ ಹಗೆತೀರಿಸಿಕೊಳ್ಳುವರಲ್ಲ.” ಎಂದು ಮುಂತಾಗಿ ವರ್ಣಿಸಿದ್ದರಲ್ಲಿ ಕನ್ನಡಿಗರ ಕನ್ನಡತನದ ಕುರುಹುಗಳ ಬಣ್ಣವು ಇದ್ದಕ್ಕಿದ್ದಂತೆ ಎದ್ದು ಮೂಡಿರುವದೆನ್ನಬಹುದು. ತನ್ನ ರಾಜ್ಯದ ಬೇರೆ ಬೇರೆ ಭಾಗಗಳನ್ನು ಈ ಮಹಾರಾಯನ ತಮ್ಮಂದಿರು, ಮಕ್ಕಳು, ಸೊಸೆ೦ದಿರು ಕೂಡ ಒ೦ದೊ೦ದು ಬೇರೆ ಬೇರೆ ಪ್ರಾಂತವನ್ನು ಸ್ವತಂತ್ರವಾಗಿ ಆಳಿದ ಸಂಗತಿಯನ್ನು ಶಿಲಾಶಾಸನಗಳಲ್ಲಿ ಓದಿದರೆ, ಈತನ ರಾಜ್ಯ ವಿಸ್ತಾರದ ಕಲ್ಪನೆಯಾಗುತ್ತದೆ. ಕುಬ್ಜ ವಿಷ್ಣುವರ್ಧನನೆಂಬೊಬ್ಬ ತಮ್ಮನು ಪೂರ್ವವೆಂಗಿಯಲ್ಲಿ, ಮತ್ತೊಬ್ಬ ಜಯಸಿಂಹನೆಂಬ ತಮ್ಮನು ಲಾಟದೇಶದಲ್ಲಿ (ಗುಜರಾತ) ಹಿರಿಯ ಮಗನಾದ ಚಂದ್ರಾದಿತ್ಯನು ಗೋವೆ ಹಾಗೂ ಸಾವಂತವಾಡಿಯಲ್ಲಿ, ಕಿರಿಯ ಮಗನು ಕೃಷ್ಣಾ, ತುಂಗಾ ನದಿಗಳ ನಡುವಿನ ನಾಡಿನಲ್ಲಿ, ಕೆಲದಿನ ಈತನ ಸೊಸೆ ವಿಜಯಭಟ್ಟಾರಿಕೆಯೂ ಸಾವಂತವಾಡಿಯ ಪ್ರಾಂತವನ್ನಾಳಿದ ಬಗ್ಗೆ ಶಾಸನಗಳಿವೆ. ಹರ್ಷವರ್ಧನನ್ನು ಮುರಿದೊತ್ತಿ ಈತನು ನರ್ಮದೆಯ ದಂಡೆಯಲ್ಲಿ ತನ್ನ ರಾಜ್ಯದ ಕಾವಲಿಗಾಗಿ ದಂಡನ್ನಿಟ್ಟಿದ್ದರ ಮೇಲಿಂದ ಈತನ ರಾಜ್ಯವ್ಯವಸ್ಥೆಯ ಹಾಗೂ ರಾಜ್ಯವಾಳುವ ಮುನ್ನೋಟವು ಎಷ್ಟು ಸೂಕ್ಷ್ಮವಾಗಿತ್ತೆಂಬುದನ್ನು ತಿಳಿಯಲಿಕ್ಕೆ ಸಾಕು. ಈತನ ಸೈನ್ಯದೊಳಗೆ ಅರವತ್ತು ಸಾವಿರ ಆನೆಬಲ. ಈತನ ಸೈನ್ಯಕ್ಕೆ 'ಕರ್ನಾಟಕ ಬಲ'ವೆ೦ಬ ನಾಡಿಗತನದ ಅರಿವುಳ್ಳ ಹೆಸರು. ಇವೆಲ್ಲವುಗಳನ್ನು ನಿರೀಕ್ಷಿಸಿದರೆ ಈತನೆಷ್ಟು ಅಭಿಮಾನಿಯೂ, ವೀರನೂ ಇದ್ದನೆಂಬುದಕ್ಕೆ ಪತಾಕೆಗಳು. ಸ್ತ್ರೀಯರೂ ಸಹ ಇವರ ವಂಶದಲ್ಲಿ ರಾಜ್ಯವಾಳಿದ್ದು, ಮೇಲಾಗಿ ಉಂಬಳಿಗಳನ್ನು ಹಾಕಿಕೊಟ್ಟಿದ್ದು,