ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಮಾಜಿಕ ದೇಶಾಚಾರಗಳು.

೨೮೩

ನೋಡಿದರೆ, ಈ ಕಾಲದಿಂದ ಮುಂದೆಯೇ ದೇಶದೊಳಗೆ ಬಾಲವಿವಾಹದ ಖೋಡಿ ನಡೆಯು ನಮ್ಮಲ್ಲಿ ಪ್ರಚಾರವಾಯಿತು. ಕ್ಷತ್ರಿಯರಲ್ಲಿ ಬುರುಕೆಯ ವಾಡಿಕೆಯಿದ್ದು ಮದುವೆಯ ಹೊತ್ತಿನಲ್ಲಿ ರಾಜ್ಯಶ್ರಿಯು ಪತಿರಾಯನ ಮು೦ದೆ ಮರ್ಯಾದೆಯಿ೦ದ ಕೆಳಮೋರೆ ಮಾಡಿಕೊ೦ಡು ಕುಳಿತಿದ್ದಳು. ಬಾಣನು ಬಣ್ಣಿಸಿದ ವಿಧವೆಯರ ಸಂಗತಿಯನ್ನು ಓದಿದರೆ ಆ ಕಾಲಕ್ಕೆ ಬ್ರಾಮ್ಹಣ ವಿಧವೆಯರನ್ನು ಈಗಿನಂತೆ ಮಡಿ ಮಾಡುವದು ಬಳಕೆಯಲ್ಲಿರಲಿಲ್ಲವೆಂಬುದು ಗೊತ್ತಾಗುವದು. ಎದೆ ಸೀಳುವಂತಹ ವೈಧವ್ಯಸ್ಥಿತಿಯಲ್ಲಿ ಕಾಲನೂಕುವದು ಅಸಾಧ್ಯವೆಂದರಿತುಕೊ೦ಡು ಹಲವು ಸ್ತ್ರೀಯರು ಬೌದ್ಧ ಭಿಕ್ಷುಣಿಯರಾಗಲಿಕ್ಕೆ ಮನಗೊಳ್ಳುತ್ತಿರುವದೇನು ಸೋಜಿಗ ? ಹೀಗಾಗಿ ಬೌದ್ಧಮತದೊಳಗೆ ವಿಧವೆಯರ ಸಂಖ್ಯೆಯೇ ಹೆಚ್ಚು. ಸೋತ ಅರಸನ ಹ೦ಡತಿಯರನ್ನು ಗೆದ್ದ ಅರಸನು ತನ್ನರಮನೆಯ ಊಳಿಗದವರನ್ನಾಗಿ ನಿಯಮಿಸುತ್ತಿದ್ದುದರಿಂದ ಮುಂಬರುವ ಈ ಪ್ರಖರ ಪ್ರಸಂಗವನ್ನು ತಾಳಲಾರದೆ, ಮೊದಲೇ ಅನೇಕರು ಆತ್ಮಹತ್ಯೆ ಮಾಡಿಕೊಳ್ಳಲನುವಾಗುತ್ತಿದ್ದರು. ಪ್ರಭಾಕರವರ್ಧನನ ಪಟ್ಟರಾಣಿಯೂ ಹರ್ಷನ ತಾಯಿಯೂ ಆದ ಯಶೋಮತಿಯ೦ತೂ ಪತಿಯು ಇನ್ನುಳಿಯುವದಿಲ್ಲವೆಂದು ತಿಳಿದೊಡನೆ ತಾನು ಅಗ್ನಿ ಪ್ರವೇಶ ಮಾಡಿದಳೆಂದು ಬಾಣನು ಬರೆಡಿಟ್ಟಿರುವದರ ಮೇಲಿಂದ ಸತಿ ಹೂಗುವದು ಧಾರಾಳವಾಗಿ ವಾಡಿಕೆಯಲ್ಲಿತ್ತೆ೦ಬುದು ತಾನೇ ಸ್ಪಷ್ಟವಾಗುತ್ತದೆ. ಕೆಲಸಾರೆ, ಪುರುಷರು ಕೂಡ ತಮ್ಮ ಸ್ವಾಮಿಯ ಅಥವಾ ಮಿತ್ರನ ವಿಯೋಗದುಃಖವನ್ನು ಸೈರಿಸಲಾರದೆ ಅವರೊಡನೆ ತಮ್ಮ ದೇಹವನ್ನೂ ಕಿಚ್ಚಿಗೊಡ್ಡಿದ ದೃಷ್ಟಾಂತಗಳಿವೆ. ಕಾಲಿದಾಸನು ಕಾಲವಾದ ಮಯಕ್ಕೆ ಸಿ೦ಹಲದ್ವಿಪದ ಮಹಾರಾಜನೂ, ಪ್ರಭಾಕರ ವರ್ಧನನು ಮೃತನಾದಾಗ್ಗೆ ಅವನ ನಂಬಿಗೆಯ ಮಂತ್ರಿಯೂ, ರಾಜ ವೈದ್ಯನೂ, ಬೇರೆ ಕೆಲ ಜನ ಊಳಿಗದವರೂ ಅವನೊಡನೆ ಅಗ್ನಿಯಲ್ಲಿ ಹಾರಿಕೊ೦ಡ ಸ೦ಗತಿಯು ಈ ಪದ್ಧತಿಗೆ ಕೈಗನ್ನಡಿಯಾಗಿದೆ. ಈ ತೆರವಾದ ಪದ್ಧತಿಯು ಜಪಾನದೊಳಗೆ ಈಗ್ಯೂ ನಡೆಯಲ್ಲಿದ್ದು ಈಗ ಕೆಲ ವರ್ಷಗಳಾಚೆ ಮೊದಲಿನ ಮಿಕ್ಯಾಡೋ ರಾಜನು ಮರಣ ಹೊಂದಿ