ಪುಟ:ಭಾರತ ದರ್ಶನ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೇಡನ್ ವೀಲರ್ : ಲಾಸೆನ್

೩೧

ಮಾಂಟ್ರಿ ಯಲ್ಲಿ ಕೆಲವು ದಿನ ಕಳೆದನಂತರ ಜಿನೀವಕ್ಕೆ ಹೋಗಿ ಅಲ್ಲಿಂದ ಮಾರ್ಸೆಲ್ ಸೇರಿ ಕೆ. ಎಲ್. ಎಂ. ವಿಮಾನ ಏರಿದೆ. ಮಧ್ಯಾನ ಮಾರಿ ರೋಮ್ ತಲ್ಪಿದಾಗ ಒಬ್ಬ ಉನ್ನತ ಅಧಿಕಾರಿಯು ಬಂದು ಮುಖ್ಯ ಮಂತ್ರಿ ಮುನ್ನೊಲಿನಿಯಿಂದ ಒಂದು ಪತ್ರ ಕೊಟ್ಟ. ಹೂಚೆ ನನ್ನನ್ನು ಕಾಣಲು ಇಷ್ಟ ಪಡುತ್ತಾರೆ, ಸಂಜೆ ಆರು ಗಂಟೆಗೆ ಭೇಟಿ ಏರ್ಪಾಡಾಗಿದೆ ಎಂದು ಬರೆದಿತ್ತು. ನನಗೆ ಆಶ್ಚರ್ಯವಾಗಿ, ಹಿಂದಿನ ಕಾಗದಗಳಲ್ಲಿ ನಾನು ಬರೆದ ವಿಷಯ ಜ್ಞಾಪಿಸಿದೆ. ಆದರೆ ಈಗ ಎಲ್ಲ ಏರ್ಪಾಡೂ ಆಗಿದೆ ; ಅದನ್ನೆಲ್ಲ ವ್ಯತ್ಯಾಸಮಾಡಲು ಸಾಧ್ಯವಿಲ್ಲ ಎಂದು ಬಲಾತ್ಕರಿಸಿದ. ಈ ಭೇಟ ನಡೆಯದೆ ಹೋದರೆ ತನ್ನ ಕೆಲಸಕ್ಕೂ ಸಂಚಕಾರ ಬರುವುದೆಂದು ತಿಳಿಸಿದ. ನಾನು 'ಡೂಚೆ' ಯನ್ನು ಎರಡು ನಿಮಿಷ ನೋಡಿದರೆ ಸಾಕು, ಪತ್ರಿಕೆಗಳಲ್ಲಿ ಸುದ್ದಿ ಬರುವುದಿಲ್ಲ ಎಂದ. ಹೂಚೆ ಸ್ವತಃ ನನಗೆ ಹಸ್ತಲಾಘವಕೊಟ್ಟು, ನನ್ನ ಹೆಂಡತಿಯ ವಿಯೋಗಕ್ಕೆ ಸಂತಾಪ ಸೂಚಿಸ ಬೇಕೆಂದಿದ್ದಾರೆ ಎಂದು ಹೇಳಿದ, ಈ ರೀತಿ ಸುಮಾರು ಒಂದು ಗಂಟೆ ಇಬ್ಬರೂ ಗೌರವದಿಂದಲೇ ಚರ್ಚೆ ಮಾಡಿದೆವು ; ಆದರೆ ಆಯಾಸ ಹೆಚ್ಚುತ್ತಿತ್ತು. ಆ ಒಂದು ಗಂಟೆ ನನಗೆ ಒಂದು ಪರೀಕ್ಷೆಯಾಯಿತು ; ಆತನಿಗೂ ಹಾಗೇ ಆಗಿರಬೇಕು. ಭೇಟಿಗೆ ಗೊತ್ತಾದ ಸಮಯ ಬಂದೇ ಬಿಟ್ಟಿತು. ಕೊನೆಗೆ ನಾನೇ ಗೆದ್ದೆ. ನಾನು ಬರಲು ಆಗುವುದಿಲ್ಲ ಎಂದು ಹೂಚೆಯ ಅರಮನೆಗೆ ಟೆಲಿಫೋನ್ ಸುದ್ದಿ ಹೋಯಿತು.

ಆ ಸಂಜೆ ಮುಸ್ಸೊಲಿನಿಗೆ ಒಂದು ಪತ್ರ ಬರೆದು ಆತನ ಆಹ್ವಾನವನ್ನು ಸ್ವೀಕರಿಸಲು ಸಾಧ್ಯ ವಿಲ್ಲದ್ದಕ್ಕಾಗಿ ವ್ಯಸನ ಸೂಚಿಸಿ ಆತನ ಅನುತಾಪಕ್ಕಾಗಿ ವಂದನೆಗಳನ್ನು ತಿಳಿಸಿದೆ.

ನನ್ನ ಪ್ರಯಾಣ ಮುಂದುವರಿಸಿದೆ. ಕೈರೋದಲ್ಲಿ ನನ್ನ ಹಳೆಯ ಸ್ನೇಹಿತರು ನನ್ನನ್ನು ಕಾಣ ಬಂದಿದ್ದರು. ಅಲ್ಲಿಂದ ಮುಂದೆ ಪಶ್ಚಿಮ ಏಷ್ಯದ ಮರುಭೂಮಿಗಳು. ಅನೇಕ ಘಟನೆಗಳು ಮತ್ತು ನನ್ನ ಪ್ರಯಾಣದ ಸಿದ್ದತೆಗಳೇ ಇದುವರೆಗೆ ನನ್ನ ಮನಸ್ಸು ತುಂಬಿದ್ದವು. ಆದರೆ ಕೈರೊ ಬಿಟ್ಟ ನಂತರ, ಗಂಟೆಗಂಟೆಗೂ, ಈ ಮರುಭೂಮಿಯ ಮೇಲೆ ಹಾರಿ ಹೋಗುವಾಗ ಒಂದು ಭಯಂಕರ ವಿವಿಕ್ತತೆಯನ್ನು, ಶೂನ್ಯತೆಯನ್ನು, ಅಸಾರ್ಥಕತೆಯನ್ನು ಅನುಭವಿಸಿದೆ. ನನ್ನ ಮನೆಗೆ ಒಬ್ಬನೇ ಏಕಾಂಗಿಯಾಗಿ ಹೋಗುತ್ತಿದ್ದೇನೆ ; ಇನ್ನು ಅದು ನನಗೆ ಮನೆಯೂ ಅಲ್ಲ. ನನ್ನ ಪಕ್ಕದಲ್ಲಿ ಒಂದು ಬುಟ್ಟಿ ; ಆ ಬುಟ್ಟಿಯಲ್ಲಿ ಒಂದು ಸಣ್ಣ ಮಡಕೆ, ಕಮಲಳ ಉಳಿಕೆಯೆಲ್ಲ ಅಷ್ಟೆ. ನಮ್ಮ ಉಜ್ವಲ ಕನಸುಗಳೆಲ್ಲ ಒಡೆದು ನುಚ್ಚು ನೂರಾಗಿ ಬೂದಿಯಾಗಿದ್ದವು. ಅವಳು ಇನ್ನಿಲ್ಲ, ಕಮಲ ಇನ್ನಿಲ್ಲ. ಇದೇ ನನ್ನ ಮನಸ್ಸಿನ ಪಲ್ಲವಿಯಾಯಿತು.

ಭೂವಾಲಿ ವಿಶ್ರಾಂತಿ ಮಂದಿರದಲ್ಲಿ ಆಕೆ ಕಾಹಿಲೆ ಮಲಗಿದ್ದಾಗ ಆಕೆಯೊಂದಿಗೆ ನಾನು ಚರ್ಚೆ ಮಾಡಿ ಬರೆದ ನನ್ನ ಜೀವನ ಚರಿತ್ರೆ- ನನ್ನ ಆತ್ಮಕಥೆ ' ಯನ್ನು ಜ್ಞಾಪಿಸಿಕೊಂಡೆ. ಅದನ್ನು ಬರೆಯುತ್ತಿದ್ದಾಗ ಆಗಾದ ಒಂದೆರಡು ಭಾಗಗಳನ್ನು ತೆಗೆದುಕೊಂಡು ಆಕಗೆ ಓದುತ್ತಿದ್ದೆ. ಅಲ್ಲಲ್ಲಿ ಕಂಡು ಕೇಳಿದ್ದಳು, ಅಷ್ಟೆ. ಇನ್ನು ಉಳಿದುದನ್ನು ಆಕೆ ನೋಡುವುದೆಲ್ಲಿ ? ನಾವಿಬ್ಬರೂ ಸೇರಿ ನಮ್ಮ ಜೀವನ ಪುಸ್ತಕದ ಭಾಗಗಳನ್ನು ಬರೆಯುವುದೂ ಮುಗಿಯಿತು.

ಬಾಗ್ದಾದ್ ನಗರ ಸೇರಿದೊಡನೆ ಕಣ್ಮರೆಯಾದ ಕಮಲಳಿಗೆ ” ಎಂದು ಅರ್ಪಣೆಯಿಂದ ಗ್ರಂಥಾರಂಭ ಮಾಡಿ ಎಂದು ನನ್ನ ಆತ್ಮಕಥೆಯನ್ನು ಪ್ರಕಟಿಸುವ ಮುದ್ರಣಕಾರರಿಗೆ ಕೇಬಲ್ ಕಳಿಸಿದೆ.

ಕರಾಚಿಗೆ ಬಂದೆ ; ಜನಜಂಗುಳಿ, ಅನೇಕ ಪರಿಚಿತ ಮುಖಗಳು. ಅನಂತರ ಅಲಹಾಬಾದ್, ಅಲ್ಲಿ ವೇಗವಾಹಿನಿ ಗಂಗಾಮಾತೆಯ ಮಡಿಲೊಳಗೆ ಮಡಕೆಯಲ್ಲಿದ್ದ ಬೂದಿಯನ್ನು ಚೆಲ್ಲಿದೆವು. ನಮ್ಮ ಪೂರ್ವಜರೆಷ್ಟು ಜನರನ್ನು ಈ ರೀತಿ ಕೊಂಡೊಯ್ದು ಸಮುದ್ರಕ್ಕೆ ಸೇರಿಸಿದ್ದಳೋ; ಆಕೆಯ ತೋಳತೆಕ್ಕೆಯಲ್ಲಿ ನಾವು ಎಷ್ಟು ಜನ ಹಿಂಬಾಲಿಸಬೇಕೋ,