ಪುಟ:ಭಾರತ ದರ್ಶನ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೪

ಭಾರತ ದರ್ಶನ

ಸ್ಪಷ್ಟ ಪ್ರತ್ಯಕ್ಷವಾಗಿದೆ. ಪುನಃ ಅಲ್ಪ ಸಂಖ್ಯಾತರಿಗೂ ಬಹುಸಂಖ್ಯಾತರಿಗೂ ಒಂದು ಬಾಂಧವ್ಯ ಬೆಳೆದುಬರುತ್ತದೆ. ಒಟ್ಟಿನಲ್ಲಿ ಒಟ್ಟಿಗೇ ಹೋಗುತ್ತಾರೆ,

ಈ ರೀತಿ ವಿಚಾರಶಕ್ತಿ ಮತ್ತು ಕಾರ್ಯಶೀಲತೆ, ಸಾಹಿತ್ಯ ಮತ್ತು ನಾಟಕ, ವಾಸ್ತುಶಿಲ್ಪ ಮತ್ತು ಶಿಲ್ಪ ಕಲೆ ಮತ್ತು ಭಾರತದಿಂದಾಚೆ ಬಹುದೂರ ವಲಸೆ, ಸಂಸ್ಕೃತಿ ಮತ್ತು ಪ್ರಚಾರ ಪ್ರಸರಣ ಕಾರ್ಯದಲ್ಲಿ ನವಜೀವನ ನಿರ್ಮಾಣ ಪ್ರಯತ್ನಗಳು ಅಲೆಅಲೆಯಾಗಿ ಕಾಲಕಾಲಕ್ಕೆ ಪ್ರವಹಿಸಿವೆ. ಮಧ್ಯೆ ಮಧ್ಯೆ ಅಂತರ್ದೋಷಗಳಿಂದ, ಬಾಹ್ಯ ಆಗಂತುಕ ಕಾರಣಗಳಿಂದ ವಿರಸಜೀವನದ, ಘರ್ಷಣೆ ಗಳ ಕಾಲಗಳೂ ಇವೆ. ಆದರೂ ಅಂತ್ಯದಲ್ಲಿ ಅವುಗಳನ್ನು ಎದುರಿಸಿ ಪುನಃ ನಿರ್ಮಾಣಕಾರದ ನವಯುಗ ಆರಂಭವಾಗುತ್ತದೆ. ಇಂತಹ ಬಹುಮುಖ ಕಾರ್ಯೋತ್ಸಾಹದ ಕೊನೆಯ ಮಹಾಯುಗ ವೆಂದರೆ ಕ್ರಿಸ್ತಶಕ ನಾಲ್ಕನೆಯ ಶತಮಾನದಿಂದ ಆರಂಭವಾದ ಆದರ್ಶ ಯುಗ. ಸುಮಾರು ಕ್ರಿಸ್ತಶಕ ೧೦೦೦ ದ ಹೊತ್ತಿಗೆ ಅಥವ ಸ್ವಲ್ಪ ಮುಂಚೆ ಭಾರತದಲ್ಲಿ ಅಂತರ್ಗ್ಲಾನಿಯ ಸೂಚನೆಗಳು ಕಾಣುತ್ತವೆ; ಆದರೂ ಸನಾತನ ಕಲಾಭಿಜ್ಞತೆ ಅಚ್ಚಳಿಯದೆ ಉಳಿದು ಉತ್ತಮ ಕೃತಿಗಳನ್ನು ಕೊಟ್ಟಿದೆ. ಭಿನ್ನ ಸಂಸ್ಕೃತಿಯ ಹಿನ್ನೆಲೆಯ ನೂತನ ಜನಾಂಗಗಳ ಆಗಮನದಿಂದ ಭಾರತದ ದಣಿದ ಮನಸ್ಸು ಮತ್ತು ಆತ್ಮಕ್ಕೆ ಹೊಸ ಕಾರ್ಯಶಕ್ತಿ ಬಂದಿತು, ಆ ಘರ್ಷಣೆಗಳಿಂದ ಹೊಸ ಸಮಸ್ಯೆಗಳು ಉದ್ಭವಿಸಿ, ಅವುಗಳ ಪರಿಹಾರಕ್ಕೆ ಹೊಸ ಪ್ರಯತ್ನಗಳೂ ನಡೆದವು.

ಇಂಡೋ ಆರ್ಯರ ಈ ತೀಕ. ವ್ಯಕ್ತಿವಾದದಿಂದ ಅಂತ್ಯದಲ್ಲಿ ಸತ್ಪರಿಣಾಮಗಳ ಜೊತೆಯಲ್ಲಿ ಕೆಲವು ದುಷ್ಪರಿಣಾಮಗಳೂ ಆದವು. ಇತಿಹಾಸದ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ಮಾತ್ರ ವಲ್ಲ ಯುಗಯುಗಗಳಲ್ಲಿ ಪುನಃ ಪುನಃ ಅತ್ಯುನ್ನತ ಅವತಾರ ಪುರುಷರು ಉದ್ಭವಿಸಿದರು, ಅದು ಸಮಗ್ರ ಸಂಸ್ಕೃತಿಗೆ ಒಂದು ಅಮೋಘವಾದ ಆದರ್ಶ ಮತ್ತು ನೈತಿಕ ಹಿನ್ನೆಲೆಯನ್ನು ಕೊಟ್ಟಿತು. ಆ ಹಿನ್ನೆಲೆ ನಮ್ಮ ಇಂದಿನ ಜೀವನಮಾರ್ಗದಲ್ಲಿ ಹೆಚ್ಚು ಪ್ರಭಾವಶಾಲಿಯಾಗದಿದ್ದರೂ ಜೀವನಕ್ಕೆ ಅಂಟಿಕೊಂಡಿತ್ತು. ಇನ್ನೂ ಅಂಟಿಕೊಂಡಿದೆ. ಈ ಹಿನ್ನೆಲೆಯ ಸಹಾಯದಿಂದ ಮತ್ತು ಆದರ್ಶ ಪುರುಷರ ಮಾರ್ಗಾನುಸರಣಶಕ್ತಿಯಿಂದ ಸಾಮಾಜಿಕ ಭದ್ರತೆಯನ್ನು ಕಾಪಾಡಿಕೊಂಡು ಬಂದರು, ಮತ್ತು ಆ ಭದ್ರತೆಯಲ್ಲಿ ಬಿರುಕುಬರುವ ವೇಳೆಗಳಲ್ಲಿ ಪುನಃ ಪುನಃ ಪುನುರುಜೀವನ ಕಾರ್ಯವನ್ನೂ ನಡೆಸಿದರು. ಈ ನಾಗರಿಕತೆ ಮತ್ತು ಸಂಸ್ಕೃತಿಯ ಅದ್ಭುತ ವಿಕಸನವು ಉತ್ತಮ ಪಂಗಡದ ಅಲ್ಪ ಸಂಖ್ಯಾತರಲ್ಲಿ ಮಾತ್ರ ಕಂಡುಬಂದರೂ ಅದರ ರಸವತ್ತಾದಸಾರ ಸಾಮಾನ್ಯ ಜನತೆಯಲ್ಲೂ ಹರಡಿತ್ತು. ಪರಮತ ಮತ್ತು ಪರಧರ್ಮ ಸಹಿಷ್ಣು ತೆಯಿಂದ ಸಮಾಜವನ್ನು ಛಿದ್ರಛಿದ್ರ ಮಾಡುವ ಘರ್ಷಣೆಗೆ ಳನ್ನು ನಿವಾರಿಸಿದರು ; ಸಾಮಾನ್ಯವಾಗಿ ಸರ್ವದಾ ಒಂದು ವಿಧವಾದ ಸಾಮಾಜಿಕ ಸಮತೂಕವಿತ್ತು. ವಿಶಾಲ ಸಾಮಾಜಿಕ ಚೌಕಟ್ಟಿನಲ್ಲಿ ಜನ ತಮತಮಗೆ ಇಷ್ಟ ಬಂದ ಜೀವನ ನಡೆಸಲು ತಕ್ಕಷ್ಟು ಸ್ವಾತಂತ್ರವನ್ನು ಕೊಟ್ಟು ಜ್ಞಾನವೃದ್ಧ, ಅನುಭವ ಪೂರ್ಣ ಜನಾಂಗದ ವಿವೇಕವನ್ನು ತೋರಿದರು. ಇವೆಲ್ಲ ಮಹಾ ಅದ್ಭುತ ಸಾಧನೆಗಳು

ಆದರೆ ಈ ವ್ಯಕ್ತಿ ಪ್ರಾಧಾನ್ಯತೆಯಿಂದಲೇ ಮನುಷ್ಯನ ಸಾಮಾಜಿಕ ದೃಷ್ಟಿಗೆ, ಸಾಮಾಜಿಕ ಕರ್ತವ್ಯಕ್ಕೆ ಯಾವ ಬೆಲೆಯೂ ದೊರೆಯದಂತಾಯಿತು. ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ವಿಭಜನೆಯಾಗಿ, ನಿರ್ದಿಷ್ಟವಾಗಿತ್ತು ; ವರ್ಣಾಶ್ರಮ ಧರ್ಮದ ಚೌಕಟ್ಟಿನಲ್ಲಿ ತನ್ನ ಸಂಕುಚಿತ ವಾತಾವರಣದಲ್ಲಿ ತನ್ನ ಕರ್ತವ್ಯ ಮತ್ತು ಭಾರ ನಿರ್ವಹಣೆ, ಸಮಗ್ರ ಸಮಾಜದ ಕಲ್ಪನೆಯ ಇರಲಿಲ್ಲ. ಆ ಸಮಾಜಕ್ಕೆ ಕರ್ತವ್ಯವೂ ಇರಲಿಲ್ಲ, ತಾನೂ ಸಮಾಜದ ಒಂದು ಅಂಗ ಎಂಬ ಐಕ್ಯತೆಯ ಭಾವನೆಯನ್ನೂ ಅವನಲ್ಲಿ ಬೆಳೆಸಲಿಲ್ಲ. ಈ ಭಾವನೆ ಬಹುಮಟ್ಟಿಗೆ ಇತ್ತೀಚಿನದು ಮತ್ತು ಯಾವ ಪ್ರಾಚೀನ ಸಮಾಜದಲ್ಲಿಯೂ ಕಂಡುಬರುವುದಿಲ್ಲ. ಆದ್ದರಿಂದ ಪ್ರಾಚೀನ ಭಾರತದಲ್ಲಿ ಅದನ್ನು ನೋಡಲೆತ್ನಿಸುವುದು ಸರಿಯಲ್ಲ. ಆದರೂ ವ್ಯಕ್ತಿಶ್ರೇಷ್ಠತೆ, ಪ್ರತ್ಯೇಕತೆ, ವರ್ಣಾಶ್ರಮ ಧರ್ಮಕ್ಕೆ ಇರುವ ಪ್ರಾಧಾನ್ಯ ಇಂಡಿಯದಲ್ಲಿರುವಂತೆ ಬೇರೆ ಎಲ್ಲೂ ಇಲ್ಲ, ಕೊನೆಗೆ ಅದೇ ನಮ್ಮ ಜನರ ಮಾನಸಿಕ