ಪುಟ:ಕಾದಂಬರಿ ಸಂಗ್ರಹ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ ಕುಮಾರಿಯು ಇದನ್ನು ಕೇಳಿ ಚಮಕಿತಳಾಗಿ ಹಿಂದಿರುಗಿ ನೋಡಿ ಮಂತ್ರಿಸುತನಾದ ಮೋಹನಸಿಂಹನನ್ನು ಕಂಡಳು. ಆದರೆ ಅವನ ಮನದಲ್ಲಿ ಆವುದೋ ಒಂದು ದುರಭಿ ಪ್ರಾಯವಿರಬೇಕೆಂದುಕೊಂಡು ಪುನಃ ಮುಂದುವರಿಯಲುಜ್ಜುಗಿಸಿದಳು. ಇದನ್ನು ಕಂಡು ಮೋಹನಸಿಂಹನು, ( ಅಂಬಾಲಿಕೆ ! ಇಷ್ಟು ಬೇಗ ಈ ನಿರ್ಭಾಗ್ಯನನ್ನು ಮರೆಯಲು ಯೋಚಿಸಿರುವಿಯೇನು ?” ಎಂದನು. ಅದಕ್ಕೆ ಅಂಬಾಲಿಕೆಯು, 1 ಮೋಹನಸಿಂಹ ! ಇಂತಹ ಅವೇಳೆಯಲ್ಲಿ ನೀನು ರಾಣೀವಾಸದ ಉಪವನವನ್ನು ಪ್ರವೇಶಮಾಡಿದುದು ಒಳ್ಳೆಯದಲ್ಲ. ಅದು ಹಾಗಿರಲಿ ನೀನು ಇಲ್ಲಿಗೆ ಬಂದುದಕ್ಕೆ ಸರಿಯಾದ ಕಾರಣ ವೇನಾದರೂ ಇರುವುದೋ ? ಎಂದಳು. ಮೋಹನ- ಕಾರಣವಿಲ್ಲದೆ ಎಂದಿಗಾದರೂ ಬರುವೆನೆ ? ಅದಕ್ಕೆ ತಕ್ಕ ಕಾರಣವಿದ್ದೇ ಇರುವುದು.” ಅಂಬಾಲಿಕೆ-Iಹಾಗಾದರೆ ಅಂತಹ ಕಾರಣವಾವುದು ? ಮೋಹನಸಿಂಹನು ರಾಜಕುಮಾರಿಯನ್ನು ಚಪಲದೃಷ್ಟಿಯಿಂದ ನೋಡುತ್ತ, “ ರಾಯಗುವರಿ ! ಅದರ ಕಾರಣವು ನೀನೇ ಎಂದು ಹೇಳಿದನು. ಇದನ್ನು ಕೇಳಿ ಅಂಬಾಲಿಕೆಯು ಆಪಾದಮಸ್ತಕಪರ್ಯಂತವೂ ತರಗೆಲೆಯಂತೆ ನಡುಗಿದಳು. ಆದರೂ ಧೈರವನ್ನವಲಂಬಿಸಿ, ಎಲಾ ! ನೀಚನೇ ! ಈ ಕ್ಷಣವೇ ಇಲ್ಲಿ ನಿಲ್ಲದೆ ಹೊರಟುಹೋಗು. ಇಲ್ಲದಿದ್ದರೆ ನಿನಗೆ ಒಳ್ಳೆಯದಾಗುವುದಿಲ್ಲ. ಮೋಹನಸಿಂಹನು ಈ ಹೆದರಿಕೆಯನ್ನು ಸ್ವಲ್ಪವೂ ಲಕ್ಷಿಸದೆಯೇ, ( ಅಂಬಾ ಲಿಕೆ ! ಈಗ ನೀನು ನನ್ನನ್ನು ವಿವಾಹವಾಗುವುದಕ್ಕೆ ಸಮ್ಮತಿಸಿದರೆ ಸರಿ, ಇಲ್ಲ ವಾದರೆ,-ಇಗೋ ! ನೋಡು, ನಾಳೆ, ನಿಮ್ಮ ತಂದೆ, ನಿಮ್ಮ ರಾಜ್ಯವಾವುದೂ ಇರುವುದಿಲ್ಲ. ಹಾಗೆ ಮಾಡುವಷ್ಟು ಅಪಾರವಾದ ಶಕ್ತಿಯು ನನ್ನಲ್ಲಿದೆ.” ಎಂದನು, ಅಂಬಾಲಿಕೆಯು ಈ ಪಿತಸೂಚಕವಾದ ಮಾತುಗಳನ್ನು ಕೇಳಲಿಚ್ಚಿಸದೆ, ಬಹಳ ಘಟ್ಟಿಯಾದ ಸ್ವರದಿಂದ ರಾಜದೂತರನ್ನು ಕೂಗಿದಳು, ತಕ್ಷಣವೇ ಮಂತ್ರಿ ಸುತನಾದ ಮೋಹನಸಿಂಹನು ಆ ವೃಕ್ಷಸಂದಣಿಯಲ್ಲಿ ಮಾಯವಾಗಿಬಿಟ್ಟನು. ಸ್ವಲ್ಪ ಹೊತ್ತಿನಲ್ಲಿಯೇ ಕೆಲವು ರಾಜದೂತರು ಬಂದು ರಾಜಪುತ್ರಿಯನ್ನು ಸುರಕ್ಷಿತವಾಗಿ ಅರಮನೆಗೆ ಕರೆದೊಯ್ದರು, ಅಲ್ಲಿ ಅವಳು ರಾಚೋದ್ಯಾನದಲ್ಲಿ ನಡೆದ ಸಮಾಚಾರವನ್ನು