ಪುಟ:ಕಾದಂಬರಿ ಸಂಗ್ರಹ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ ಅದಕ್ಕಾಗಿ ನಾನು ಅವರಿಗೆ ಎಷ್ಟು ಕೃತಜ್ಞನಾಗಿದ್ದರೂ ಸಾಲದಾಗಿರುವುದು, ಪ್ರಭು ಗಳೇ ! ಇತ್ತ ನೋಡಿ, ಆ ರಾಜಕುಮಾರಿಯ ಚಿತ್ರ ಪಠದ ಪ್ರತಿಯೊಂದು ಇಲ್ಲಿಯೇ ಇರುವುದು, ತಾವು ಈ ಗರೀಬನಮೇಲೆ ದಯವಿಟ್ಟು ಅದನ್ನು ಪರಿಕಿಸಿ ತಮ್ಮ ಅಭಿ ಪ್ರಾಯವನ್ನು ತಿಳುಕೋಣಾಗಲಿ ಎಂದು ಹೇಳಿ, ಅಂಬಾಲಿಕೆಯ ಚಿತ್ರಪಠವೊಂದನ್ನು ಮುಜಫರಖಾನನ ಹಸ್ತದಲ್ಲಿಟ್ಟು, ನವ್ರಭಾವದಿಂದ ದೂರದಲ್ಲಿ ನಿಂತುಕೊಂಡು, ಖಾನನ ಉತ್ತರಾಪೇಕ್ಷಿಯಾಗಿ, ತನ್ನ ತಾನೇ, ಭಗವತೀದಾಸನ ಮೇಲಿನ ಸೂಡನ್ನು ತೀರಿಸಿ ಕೊಳ್ಳುವುದಕ್ಕೊಂದು ಸುಲಭವಾದ ಮಾರ್ಗವು ಸಮಾಗತವಾಯಿತೆಂದುಕೊಂಡು ಆನಂದಿಸುತ್ತಿದ್ದನು. ಆ ಚಿತ್ರಪರವನ್ನು ನೋಡಿದ ಕೂಡಲೇ ಮುಜಫರನ ಮನಸ್ಸು ಅನೇಕ ವಿಕಾರ ಗಳಿಗೊಳಗಾಯಿತು. ಅವನ ಮನದಲ್ಲಿ ಏನೇನೋ ಭಾವನೆಗಳುಂಟಾದುವು. ಹಾಗೆಯೇ ಸ್ವಲ್ಪ ಹೊತ್ತಿನವರೆಗೂ ಚಿತ್ತಾಪಿತಳಾದ ಆ ರಮಣಿಯ ಸೌಂದರ್ಯವನ್ನು ಚಂಚಲ ದೃಷ್ಟಿಯಿಂದ ನೋಡುತ್ತಿದ್ದನು. ಆಗ, ಮುಜಫರನು, ಚಿತ್ರಗತಳಾದ ರಾಜಕುಮಾರಿ ಯನ್ನು ವಿವಾಹಮಾಡಿಕೊಂಡು ಸುಖಿಸಬೇಕೆಂಬ ಉತ್ಕಟವಾದ ಇಚ್ಛೆಯುಳ್ಳವನಾ ದನು. ಅನಂತರ ಅವನು ಮೋಹನನನ್ನು ಕುರಿತು, ( ಅಯ್ಯಾ ! ಚಿತ್ರಗಾರ, ನಿನ್ನ ನಾಮಧೇಯವೇನು ? ” ಎಂದು ಪ್ರಶ್ನಿಸಿದನು. ಮೋಹನ :- ಮಹಾಪ್ರಭು ! ನನ್ನ ಹೆಸರು-ಮೋಹನಸಿಂಹ-ನೆಂದಿರುವುದು.” ಮುಜಫರಖಾನ್ :-ಒಳ್ಳಿತು ಮೋಹನಸಿಂಹ; ನಾನು ಈ ಚಿತ್ರಪಠವನ್ನು ಕ್ರಯಕ್ಕೆ ತೆಗೆದುಕೊಳ್ಳುವೆನು. ಇದರ ಬೆಲೆಯೇನು ?-ಹೇಳು, ಮೋಹನಸಿಂಹ :-ಹುಜೂರ್' ! ಅದಕ್ಕೆ ಪ್ರತಿಫಲವಾಗಿ ನನಗೇನೂ ಬೇಡ. ನನ್ನನ್ನು ತಮ್ಮ ಬಳಿ ಆವುದಾದರೊಂದು ಚಾಕರಿಯಲ್ಲಿಟ್ಟು ಕೊಂಡರೆ ಸಾಕು. ಮುಜಫರ :-ಒಳ್ಳೆಯದು. ಇಂದಿನಿಂದಲೇ ನೀನು ನನ್ನ ಅಂಗರಕ್ಷಕಲ್ಲೋರ್ವ ನಾಗಿರು, ಇದನ್ನು ಕೇಳಿ ಅಲ್ಲಿದ್ದ ಒಬ್ಬ ಯವನ ಚಾಕರನು, ೧ ಹುಜರ್ ! ನನ್ನ ಮನ ವಿಯನ್ನು ಲಾಲಿಸಬೇಕು.” ಎಂದನು. ಮುಜಫರ : ಅದೇನೋ ? ಗುಲಾಮ ! ಬೇಗ ಹೇಳು.