ಪುಟ:ಕಾದಂಬರಿ ಸಂಗ್ರಹ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಗವತೀದಾಸ :-ಮಂತ್ರಿವರ್ಯನೆ ! ಅದಕ್ಕೆ ತಕ್ಕೆ ಚಿಂತಿಸಬೇಕು ? ಬಹಳ ಕಾಲದಿಂದಲೂ, ನಮ್ಮ ರಜಪೂತಯೋಧಗಣವು ರಣಸಮುದ್ರದಲ್ಲಿ ಧುಮಿಕಿ ಯವನರ ಎದೆಯ ರುಧಿರವನ್ನು ಹೀರಿ ತಮ್ಮ ದಾಹವನ್ನು ತೀರಿಸಿಕೊಳ್ಳಲು ಬಹಳ ಆತುರಸಡು ತಿರುವುದು. ಆ ನೀಚನಾದ ಮುಜಫರನ ಯವನ ಸೈನ್ಯವು ನಮ್ಮ ದುರ್ಗವನ್ನು ಸಮೀಪಿಸಿದುದೇ ಆದರೆ ನಮ್ಮ ಸುಶಿಕ್ಷಿತವಾದ ಸೇನೆಯು ಅದನ್ನು ನಿರ್ಮೂಲಮಾಡಿ ಮುಜಫರನ ಹೆಸರನ್ನು ಪ್ರಪಂಚದಿಂದಲೇ ಅಳಿಸಿ ಬಿಡುವುದರಲ್ಲಿ ಲೇಶಮಾತ್ರವೂ ಸಂದೆ ಗವಿರಲಾರದು. ಹೀಗಿರುವಲ್ಲಿ ನಾವು ಆ ತುಚ ನಾದ ಯವನನಿಗೆ ಏತಕ್ಕಾಗಿ ಭಯತ ಡಬೇಕು ? ಆ 'ನು ನಮ್ಮ ಸೈನ್ಯದ ಬಳಿ ಬರಲಿ ! ಆಗ ರಾಜ ಪುತ್ರ ಕನೈಯನ್ನು ಹಿ' ಜಾತಿಯವನು ಅಪೇಕ್ಷಿಸುವುದರ ಸುಗಮವೇನಾಗುವುದೆಂಬುದನ್ನು ಅವನಿಗೆ ಜನ ತಿಳುಹಿಸಿ ಬುದ್ದಿಗಲಿಸುವೆನು. ವಿಕ್ರಮಸಿಂಹ :-ಮಹಾರಾಜ ! ಸಾವಧಾನದಿಂದ ಚಿತ್ಸೆ ಸಿಳಿ, ಕೋವೋ. ಪ್ರೇಕದಿಂದ ಸಿಕ್ಕಿದಹಾಗೆಲ್ಲ ಪ್ರವರ್ತಿಸುವುದು ಶ್ರೇಯಸ್ಕರವಾದುದು. ಚೆನ್ನಾಗಿ ಪರ್ಯಾಲೋಚಿಸಿ ನೋಡಿ-ನಮ್ಮ ಸೇನೆಯಿರುವುದು ? ಅವರ ಬಲವೆಸ್ಟಿರುವುದು ? ಅವರ ಅಗಾಧವಾದ ಸೇನೆಯನ್ನು ಇರಿಸಿದರೆ ನಮ್ಮ ಗತಿಯೇನಾಗುವುದು ? ಭಗವತೀದಾಸ :---ಎಕ್ರಮಸಿಂಹ ! ಏನು ಹೇಳುತ್ತಿರ.ವಿ ? ಒಂದೂವರೆ ಸಹಸ್ರ ಸುಶಿಕ್ಷಿತರಾದ ಯೋಗಳು ನನ್ನ ಅಚ್ಚಾ ಬದ್ಧರಾಗಿಲ್ಲವೆ ? ವಿಕ್ರಮಸಿಂಹ ನಮ್ಮ ಬಳಿ ಇರುವವರಾದರೋ ಒಂದೂವರೆಸಹಸ್ರ ಸವಾ ರರು, ಆದರೆ, ಅವರ ಬಳಿ ಐದುಸಹಸ್ರ ರಾಯತರಿರುವರಲ್ಲ ! ಭಗವತೀದಾಸ-ವಂತ್ರಿವರ್ಯನೆ ! ಹಾಗಾದರೆ ನಮ್ಮ ಸೈನ್ಯವು ಅವರ ಸೈನ್ಯವನ್ನಿ ದಿರಿಸಿ ಯುದ್ದಮಾಡಲಾರದೆ ? ನಮ್ಮ ಸೈನಿಕರ ನರಗಳಲ್ಲಿಯೂ ದುರ್ಬಲ ತೆಯು ವ್ಯಾಪಿಸಿರುವುದೇನು ? ನಮ್ಮವರೆಲ್ಲರೂ ಹೆಂಗಸರಾದರೋ ? ನಮ್ಮ ಸೈನಿಕರಲ್ಲಿನ ರಜಪೂತರಕ್ತವು ಇಂಗಿಹೋಯಿತೆ ? ನಮ್ಮವರು ತಮ್ಮ ಪೂರ್ವ ಪುರುಷರ ಶೌರ್ಯ, ಸೈರ್, ಸಾಹಸಾದಿ ಸತ್ವಗುಣಗಳನ್ನು ಮರೆತುಬಿಟ್ಟರೆ ? ಅವರ ಜ್ಞಾಪಕಶಕ್ತಿಯು ಹಾಳಾಗಿ ಹೋಯಿತೆ ? ನಮ್ಮವರು, ಭರತಖಂಡಕ್ಕೆ ರತ್ನ ಪ್ರಾಯವಾದ ರಾಜಸ್ಥಾನ ದಲ್ಲಿ ಆರ್ಯವೀರದಂಪತಿಗಳಿಗೆ ಜನ್ಮಗ್ರಹಣಮಾಡಲಿಲ್ಲವೆ ? ನಮ್ಮವರು ರಜಪೂತಜನ ನಿಯ ಸ್ತನ್ಯಪಾನವನ್ನು ಮಾಡಲಿಲ್ಲವೇನು ? ನಮ್ಮವರೆಲ್ಲರಲ್ಲಿಯೂ ಕ್ಷಾತ್ರಧರ್ಮವು ತಿಲಮಾತ್ರವಾದರೂ ಉಳಿದುಕೊಳ್ಳದೆ ಬಲುಪ್ತವಾಗಿ ಹೋಯಿತೆ?-ಎಲೈ, ವಿಕ್ರಮ