ಪುಟ:ಕಾದಂಬರಿ ಸಂಗ್ರಹ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಬಾಲಿಕ - ೧೩ ಅನಂತರ ರಾಣಿಯೂ ರಾಯಗುವರಿ ಅಂಬಾಲಿಕೆಯೂ ಅವರವರ ಪಾಲ್ಕಿಗಳಲ್ಲಿ ಕುಳಿತರು. ರಾಜನು ಉಮಾಶ್ವವೊಂದು ಡುದನು, ಸೈನಿಕರೂ ತಂತಮ್ಮ ಅಶ್ವಗಳ ನಾ ರೋಪಿಸಿದರು. ರಣಭೇರಿಯು ಧ್ವನಿತವಾಯ್ತು. ಬಳಿಕ ಇನ್ನೊಂದುತಡವೆ ಸೈನಿಕ ಸೇನಾನಿಗಳೆಲ್ಲರೂ ಇಂತೆಂದು ಉಚ್ಚೆರ್ಘೋಷವನ್ನು ಮಾಡಿದರು. (1 ಜಯ ! ರಾಜಾ ಭಗವತೀದಾಸನಿಗೆ ಜಯ !! ಬಳಿಕ ಸೈನ್ಯವು ರಾಜಾಜ್ಞೆಯಮೇಲೆ ಜಸವಿರವನ್ನು ಕುರಿತು ಹೊರಟಿತು. ಆರನೆಯ ಅಧ್ಯಾಯ. ಜಸಮೀರದ ಮಾರ್ಗದಲ್ಲಿ ಸ್ವಲ್ಪ ದೂರ ಹೋಗುತ್ತಲೇ, ಮುಂದಿದ್ದ ದುರ್ಗದ ಸೈನಿಕರಲ್ಲೊಬ್ಬನು ತನ್ನ ಪಕ್ಕದಲ್ಲಿದ್ದ ಸವಾರನನ್ನು ಕುರಿತು, ಎಲೋ ! ನೋಡು, ಇನ್ನಾವುದೋ ಸೈನ್ಯವು ಇತ್ತ ಕಡೆ ಬರುವಂತಿದೆ ! ಎಂದನು, ಆದರೆ ಎರಡನೆಯವನು ಅದನ್ನು ನಂಬಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಮೇ ಯಾವುದೋ ಒಂದು ದೊಡ್ಡ ಸೈನ್ಯವು ದರದಲ್ಲಿ ಕಾಣಬಂದಿತು, ಆಗ ಎಲ್ಲರಿಗೂ ಧೃಡವಾದ ನಂಬುಗೆ ಯುಂಟಾಯಿತು. ಈ ವರ್ತಮಾನವು ಸ್ವಲ್ಪ ಕಾಲದಲ್ಲಿಯೇ ಭಗವತೀದಾಸನಿಗೆ ತಿಳಿ ಯಿತು. ಭಗವತೀದಾಸನಿಗೆ ಸ್ವಲ್ಪ ಕಷ್ಟಕ್ಕೆ ಬಂದಿತು. ತನ್ನ ಸೈನ್ಯಸಂಚಲನದ ವಿಷ ಯವು ತನಗೆ ಮತ್ತಾ ವಿಕ್ರಮಸಿಂಹನಿಗೆ ಮಾತ್ರ ಗೊತ್ತಿರುವುದೆಂದು ಅವನಿಗೆ ನಂಬು ಗೆಯಿತ್ತು. ಈಗ ಆ ನಂಬುಗೆಯು ಸಡಿಲವಾಯಿತು. ವಿಕ್ರಮಸಿಂಹನೇ ಎಲ್ಲಿಯಾ ದರೂ ಈ ಗುಪ್ತಸಮಾಚಾರಗಳನ್ನು ಶತ್ರುಗಳಿಗೆ ತಿಳಿಯಿಸಿರಬಹುದೆಂಬ ಯೋಚನೆಯು ಅವನ ಮನದಲ್ಲಿ ಉತ್ಪನ್ನವಾಗಿ ಅವನನ್ನು ಬಹಳವಾಗಿ ನಿಂದಿಸಲಾರಂಭಮಾಡಿದನು. ಕೊನೆಗೆ ಅವನು ವಿಕ್ರಮಸಿಂಹನೇ ದೂಷಿಯೆಂದು ನಿರ್ಧರಿಸಿಬಿಟ್ಟನು. ಆ ಪಾಪಿ-ಮೋಹ ನನ ಸೇವಕನು ಇವರ ಗುಸಮಾಚಾರವನ್ನು ಭೇದಿಸಿದುದು ಭಗವತೀದಾಸನಿಗೆ ತಿಳಿ ಯುವುದೆಂತು ? ಕೊನೆಗೆ ತನ್ನ ಸೈನಿಕರಿಗೆ ಮುಂದುವರಿಸಬೇಕೆಂದು ಅಪ್ಪಣೆಮಾಡಿ ದನು. ಏತಕ್ಕೆಂದರೆ ಅವನಿಗೆ ತನ್ನ ಮುಂದೆ ಬರುತಲಿದ್ದ ಸೇನೆಯ ಮುಜಫರನದೇ ಅಹುದೋ ಅಥವಾ ಇನ್ನಾವರಾಜನದೋ-ಎಂಬ ಸಂಶಯವುಂಟಾಯಿತು, ಸ್ವಲ್ಪ ಹೊತ್ತಿನೊಳಗಾಗಿ ಎರಡು ಬಲಗಳೂ ಸಂಧಿಸಿದುವು. ಇನ್ನೊಂದು ಮುಜ ಫರನ ಸೇನೆಯೆಂದು ತಿಳಿದಕೂಡಲೇ ಆ ಕತ್ತಲಲ್ಲಿ ಯೇ ಯುದ್ಧವು ಪ್ರಾರಂಭವಾ ಯಿತು, ಹೊಡೆದಾಟವು ಮೊದಲಾಂತು, ಎರಡು ಕಡೆಗಳ ಸೈನಿಕರೂ ಧಣಿ