ಪುಟ:ಕಾದಂಬರಿ ಸಂಗ್ರಹ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಬಗಿ” - ಗ್ರ. ದರು !! “ ಈಗ ಆ ಭಯಂಕರ, ರಾಜ್ಯ ಪ್ರವಾಹವು ಇರುವ ಕೋಣೆ ಯಲ್ಲಿ ಮಲಗುತ್ತಿದ್ದವರು ಮಾರ್ವಾಡಿಗಳು, ಅದೇ ಸ್ಥಳದಲ್ಲಿ ಈ ಘೋರ ದೃಶ್ಯ ! ಆದುದರಿಂದ ಮೃತರು ಅವರೇ ಎಂದೂಹಿಸಲು ಅಡ್ಡಿಯೇನು ? ಆಗಲಿ, ಅವರು ಮೃತರಾಗಿರುವರು, ಶಂಭುದತ್ಯಾದಿಗಳೆಲ್ಲಿ ? ಒಂದುವೇಳೆ ಅವರಿವರೆಲ್ಲರೂ ಒಟ್ಟಿಗೆ ಭೂನಾಗಿರಬಹುದೇ ? ಅದೆಲ್ಲಿಯ ಮಾತು ? ಅವರು ಮಲಗಿದ್ದ ಸ್ಥಳದಲ್ಲಿ ಆವವಿಧವಾದ ಅನು ಮಾನಾಸ್ಪದವಾದ ಕುರುಹುಗಳೂ ತೋರುವುದಿಲ್ಲ. ಆದುದರಿಂದ ಕೊಲೆ ಗಾರರು ಅವರೆಲ್ಲರನ್ನೂ ಈ ಕೋಣೆಯಲ್ಲಿಯೇ ಸೇರಿಸಿ ಕತ್ತರಿಸಿರಬಹು ದೆಂದು ಯೋಚಿಸೋAವ ? ಛೇ! ಛೇ !! ಅದು ಕೇವಲ ಅಸಂಭವವೆ. ಕೊಲ್ಲಲು ಬಂದವರು ಎಲ್ಲಿದ್ದವರನ್ನು ಅಲ್ಲಲ್ಲಿಯೇ ಕೊಂದು ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಹೋಗುವುದನ್ನು ಬಿಟ್ಟು ಅಂತಹ ವಿಪರೀತ ವನ್ನು ಆಚರಿಸುವರೆಂದು ಸ್ವಲ್ಪ ವಿವೇಕವಾದರೂ ಇದ್ದವನು ಎಂದಿಗೂ ಆಲೋಚಿಸಲಾರ! ಕಂಭದತ್ತಾದಿಗಳನ್ನು ಅವರಿದ್ದಲ್ಲಿ ಕೊಂದಿಲ್ಲ ಅಲ್ಲಿಂದಿಲ್ಲಿಗೆ ತಂದಿಲ್ಲ ! ಮನೆಯಲ್ಲಿದ್ದವರ ಸುಳಿವಿಲ್ಲ ! ಏನಾದರೊಂದು ಯೋಚಿಸಲು ಸಾಧ್ಯವಲ್ಲ ! ಆದುದರಿಂದ ಇದರ ಪರಿಣಾಮವೇನಾಗು ವುದೋ ದೇವರೇ ಬಲ್ಲನಲ್ಲದೆ ನನ್ನಿಂದ ಯೋಚಿಸಿಲು ಸಾಧ್ಯವಲ್ಲ ಅದಂತಿರಲಿ ! ಈಗ ಮೃತರು ಮಾರ್ವಾಡಿಗಳ ಸರಿಯ೦ದು ಹೇಳುವು ದಾದರೆ ಪರಸ ೪ಕರಾದ ಇವರನ್ನು ಕೊಲ್ಲಲು ಬಂದವರಾರು ? ಸಾಮಾ ನ್ಯವಾಗಿ ಇಂತಹ ಯೂನಿಗಳಿಗೆ ಪೂರ್ವಕ್ಷೇಪ, ದಾಯಾದಿಮತ್ಸರ, ದಮ್ಯಾ ಪೇಕ್ಷ, ಅಥವಾ ಸುಂದರಿಯರ ಸಂದಬರುವಾಗ ಈ ಗಣವಾಗಿರ ಬೇಕು. ಒಂದುವೇಳೆ ಮೃತನ ಶಂಭುದಷ್ಯನಾಗಿದ್ದ ಪಕ್ಷದಲ್ಲಿ ಮೇಲಿನ ಮ ದಣದ ಆರಣಗಳಲ್ಲಿ ಎರಡು ಮೂರು ಅವನಲ್ಲಿ ಇತ್ತು. ಪಾಪ ? ಈ ಬಡಪಾಯಿಗಳಾದ ಮಾರ್ವಾಡಿಗಳು ಅನ್ಯದೇಶೀಯರು ! ಇವರು ಇಲ್ಲಿಗೆ ಹೊಸದಾಗಿ ಬಂದಿದ್ದುದರಿಂದ ಇವರಿಗೆ ಇಲ್ಲಿ ಪೂರ್ವದ್ವೇಷಗಳಿರಲು ಕಾರಣವಿಲ್ಲ, ದಾಯಾದಿಗಳಿದ್ದರೆ ಇಲ್ಲಿಗೆ ಬಂದು ಅವರನ್ನು ಕೊಲ್ಲುವ ಆವಶ್ಯಕತೆಯು ಏನು ? ಸ್ತ್ರೀಯರ ತಂಟೆಯಂತೂ ಇಲ್ಲವೇ ಇಲ್ಲ ! ಬಾಕಿ ಉಳಿದುದು ದ್ರವ್ಯವೊಂದು, ಅದೂ ಕೂಡ ಶಂಭುದತ್ತನ ಉತ್ತಮ 1