ಪುಟ:ಭಾರತ ದರ್ಶನ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

v

ಗ್ರಂಥಕರ್ತರು ತಮ್ಮ ಪುಸ್ತಕಗಳನ್ನು ನೋಡಿ ಏನೆಂದುಕೊಳ್ಳುತ್ತಾರೋ ನಾನರಿಯೆ. ಆದರೆ
ಹಿಂದೆ ನಾನು ಬರೆದುದನ್ನು ನಾನೇ ಓದಿದಾಗ ನನಗೊಂದು ವಿಚಿತ್ರ ಅನುಭವವಾಗುತ್ತದೆ. ಆ ಬರೆ
ವಣಿಗೆ ಸೆರೆಮನೆಯ ವೈಪರೀತ್ಯದ ಸಂಕುಚಿತ ವಾತಾವರಣದಲ್ಲಿ ಬರೆದುದಾಗಿ ಹೊರಗೆ ಓದಿದಾಗ ಈ
ಅನುಭವ ಇನ್ನೂ ತೀಕ್ಷ್ಣವಾಗುತ್ತದೆ. ಅದರ ಪರಿಚಯವೇನೋ ಆಗುತ್ತದೆ; ಆದರೂ ಪೂರ್ಣ ಪರಿ
ಚಯವಲ್ಲ. ಬೇರೆ ಯಾರೋ ಒಬ್ಬರು-ನನಗೆ ತೀರ ಸಮೀಪದವರಾದರೂ ಬೇರೆಯವರು-ನನಗೆ
ಚಿರಪರಿಚಿತವಾದ ಯಾವುದೊ ಒಂದು ಗ್ರಂಥ ಬರೆಹವನ್ನು ಓದಿದಂತೆ ಆಗುತ್ತದೆ. ಪ್ರಾಯಶಃ
ನನ್ನಲ್ಲಿ ಆಗಿರುವ ಪರಿವರ್ತನೆಗೆ ಇವೇ ಒ೦ದು ಅಳತೆಗೋಲು.
ಈ ಪುಸ್ತಕದ ವಿಷಯದಲ್ಲೂ ನನ್ನ ಅನುಭವವು ಅದೇ ರೀತಿ ಇದೆ. ಅದು ನನ್ನದು ನಿಜ,
ಆದರೂ ಪೂರ್ಣ ಈಗಿನ ನನ್ನದಲ್ಲ. ಕ್ಷಣಕಾಲ ಬಾಳಿ, ಬಾಡಿ, ಒಂದು ನೆನಪನ್ನು ಮಾತ್ರ ಬಿಟ್ಟು
ಹೋಗಿರುವ ಹಿಂದಿನ ನೆನಹುಗಳ ಪರಿಯ೦ತೆ ಇದೂ ನನ್ನ ಯಾವುದೊ ಒಂದು ಹಿಂದಿನ ನೆನಹು.

ಆನಂದಭವನ : ಆಲಹಾಬಾದ್,

ಜವಹರಲಾಲ್ ನೆಹ್ರೂ.

೨೫ ಡಿಸೆಂಬರ್, ೧೯೪೫.






ಬಿನ್ನಹ

————

ಪಂಡಿತ ಜವಹರಲಾಲರು ಪ್ರಪಂಚದ ಮಹಾರಾಜಕಾರಣಿಗಳಲ್ಲಿ ಒಬ್ಬರು, ಭಾವನಾ
ಜೀವಿಗಳು, ಉದಾತ್ತಧ್ಯೇಯನಿಷ್ಠರು. ಅವರು ತಮ್ಮ 'Discovery of India '
(ಭಾರತದರ್ಶನ) ಗ್ರಂಥದಲ್ಲಿ ಭಾರತದ ಇತಿಹಾಸ, ಸಾಹಿತ್ಯ ಕಲೆ ಮತ್ತು ಸಂಸ್ಕೃತಿಗಳನ್ನು ಒಂದು
ನೂತನ ದೃಷ್ಟಿಯಿಂದ ನೋಡಿ, ಅವುಗಳ ಮೇಲೆ ಹೊಸ ಬೆಳಕನ್ನು ಬೀರಿ ಭಾರತೇಯರಿಗೂ
ಪ್ರಪಂಚಕ್ಕೂ ಮಹದುಪಕಾರ ಮಾಡಿದಾರೆ. ಅವರ ಇಂಗ್ಲಿಷ್ ಗ್ರಂಥವು ಈಗಾಗಲೇ ಐದು ಬಾರಿ
ಪುನರ್ಮುದ್ರಿತವಾಗಿದೆ. ಇತರ ಭಾಷೆಗಳಲ್ಲೂ ಅದರ ಅನುವಾದಗಳಾಗಿವೆ. ಅದನ್ನು ಕನ್ನಡಿಸಿ
ಕನ್ನಡಿಗರಿಗೆ ಅರ್ಪಿಸಲು ಅನುಮತಿ ಇತ್ತುದಕ್ಕಾಗಿ ಪಂಡಿತ ಜವಹರಲಾಲ್ರಿಗೂ, ಆ ಅನುಮತಿ
ಯನ್ನು ದೊರಕಿಸಿ ಕೊಡುವುದರಲ್ಲಿ ನೆರವಾದ ಹಿರಿಯರಾದ ಮಾನ್ಯ ರಂಗನಾಥ ರಾಮಚಂದ್ರ
ದಿವಾಕರರಿಗೂ, ನನ್ನ ಮಿತ್ರರಾದ ಸಿದ್ದವ್ವನಹಳ್ಳಿ ನಿಜಲಿಂಗಪ್ಪನವರಿಗೂ ತುಂಬ ಋಣಿಯಾಗಿದ್ದೇನೆ.
ನನ್ನ ಗೆಳೆಯರಾದ ಶ್ರೀ ಕೂಡಲಿ ಚಿದಂಬರಂ ಮುದ್ರಣದ ಹೊರೆಯನ್ನು ಹೊತ್ತು ಕರಡುಗಳನ್ನು
ತಿದ್ದಿ ಗ್ರಂಥವನ್ನು ಅಂದವಾಗಿ ಪ್ರಕಟಿಸಿದ್ದಾರೆ. ಅವರ ಶ್ರಮವನ್ನು ನಾನೆಂದೂ ಮರೆಯಲಾರೆ.
ಈ ಗ್ರಂಥಾವಲೋಕನದಿಂದ ಪಂಡಿತ ಜವಹರರ ವಿಶಾಲದೃಷ್ಟಿ ಕಿಂಚಿತ್ತಾದರೂ ಕನ್ನಡಿಗರಿಗೆ ದರ್ಶನ
ವಾಗಿ ಅನುಭಕ್ಕೆ ಬಂದರೆ ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಿತೆಂದು ಭಾವಿಸುವ,

ಕನ್ನಡಿಗರ ಸೇವಕ,
ಸಂತೆಬೆನ್ನೂರು ಕೃಷ್ಣಮೂರ್ತಿರಾವ್