ಪುಟ:ವೇಣೀಬಂಧನ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಳೇ ಬಂಧನ, ೧ • • • • • • • • • • • • • • • • • • • • • • ೨ ನೇ ಪ್ರಕರಣ ಜ ವಿ ಲಾ ಸ. ಹಿಂದಿನ ಪ್ರಕರಣದ ಆರಂಭದಲ್ಲಿ, ಶ್ರೀಕೃಷ್ಕನು ಪಾಂಡವರ ಪಕ್ಷ ದಿಂದ ಕೌರವರ ಕೂಡ ಸಂಧಿಯನ್ನು ಮಾಡುವ ಉದ್ದೇಶದಿಂದ ಹೋದ ಸಂಗತಿಯನ್ನು ಹೇಳಿದೆಯ? ಆ ಪ್ರಕಾರ ಅವನು ಕೌರವರ ಬಳಿಗೆ ಹೋಗಿ ಸಭೆಯನ್ನು ನೆರಿಸಿ ದುರ್ಯೋಧನನಿಗೆ ಪಾಂಡವರ ಅಭಿಪ್ರಾಯ ವನ್ನು ತಿಳಿಯಪಡಿಸಿದನು. ದುರ್ಯೋಧನನು ತನ್ನ ಹಟವನ್ನು ಬಿಡುವಂತೆ ಕಾಣಲಿಲ್ಲ. ಆಗ ಶ್ರೀಕೃಸನು ಕಟ್ಟಕಡೆಗೆ ಅಯ್ತು ಗ್ರಾಮಗಳನ್ನಾದರೂ ಕೊಟ್ಟರೆ ಪಾಂಡವರು ಸಂತುರಾಗುವರೆಂಬ ಮಾತನ್ನು ಹೇಳಿದನು. ಈ ಮಾತಿನಿಂದ ದುರ್ಯೋಧನನು, ಪಾಂಡವರು ನಮಗೆ ಹೆದಗಿದರೆಂದು ತಿಳಕೊಂಡು ಯುದ್ಧ ಮಾಡಿದ ಹೊರತು ತೀಕವಾದ ಸೂಜಿಯ ಅಗ್ರವನ್ನು ಊರುವಷ್ಟು ಭೂಮಿಯನ್ನು ಸಹ ನಾನು ಪಾಂಡವರಿಗೆ ಕೊಡುವದಿಲ್ಲೆಂದು ಖಂಡಿತವಾಗಿ ಹೇಳಿದನು, ಮತ್ತು ಈ ಕೃಷ್ಣನೇ ಅವರಿಗೆ ಆಲೋಚನೆ ಯನ್ನು ಹೇಳುವವನು, ಇವನನ್ನು ಇಲ್ಲಿಯೇ ಸೆರೆಯಲ್ಲಿ ಹಾಕಿ ಬಿಟ್ಟ ರಾ ಯಿತು. ಎಂದು ಗುಪ್ತಾಲೋಚನೆಗಳನ್ನು ಮಾಡತೊಡಗಿದನು. ದುರ್ಯೋ ಧನನು ಎಂಥ ಮೂರ್ಖನು ? ವ್ಯಾಸವಾಲ್ಮೀಕಿ ಮೊದಲಾದ ಕವಿಶ್ರೇಷ್ಠರಿಗೂ ವಶಿನೇ ಮೊದಲಾದ ಬ್ರಹ್ಮರ್ಷಿಗಳಿಗೂ ಜನಕನೇ ಮೊದಲಾದ ರಾಜ ರ್೩ಗಳಿಗೂ ಯಾವಾತನ ಮಹಿಮೆಯು ಪೂರ್ಣವಾಗಿ ತಿಳಿಯಲಿಲ್ಲವೋ, ಆ ಶ್ರೀಕೃಸ್ಮನನ್ನು ಸೆರೆಯಲ್ಲಿ ಹಾಕುವದುಂಟೆ ? ಮತ್ತು ಅವನು ಯಾರ ಕೈಯಲ್ಲಾದರ ೧ ಸೆರೆಸಿಕ್ಕುವನೆ? ಅವನು ಸರ್ವಜ್ಞಮೂರ್ತಿಯು; ದುರ್ಯೋ ಧನನ ಕಪಟತಂತ್ರಗಳನ್ನು ಕೂಡಲೆ ಅರಿತು ಆ ಸಭೆಯಲ್ಲಿ ತನ್ನ ಭಯಂಕರವಾದ ವಿರಾಟಸ್ವರೂಪವನ್ನು ಒಮ್ಮಿಂದೊಮ್ಮೆ ಪ್ರಕಟಿಸಿದನು. ಅದರಿಂದ ಅಲ್ಲಿ ನೆರೆದ ಎಷ್ಟೋ ಜನರು ಮೂರ್ಛಿತರಾದರು. ಕೂಡಲೇ ಶ್ರೀಕೃಸನು ಅಲ್ಲಿಂದ ಹೊರಟು ಧರ್ಮರಾಜನ ಬಳಿಗೆ ಬಂದು ಎಲ್ಲ ವೃತ್ತಾಂತವನ್ನು ಹೇಳಿದನು. ಧರ್ಮರಾಜನು ಶ್ರೀಕೃಷ್ಟನ ಅನುಮತಿ ಯನ್ನು ಪಡೆದು ಎಲ್ಲ ತಮ್ಮಂದಿರನ್ನೂ ಅತಿರಥ ಮಹಾರಥರನ್ನೂ ಕರೆಯಿಸಿ ಯುದ್ಧದ ಸಿದ್ಧತೆಯನ್ನು ಮಾಡತೊಡಗಿದನು.