ಪುಟ:ವೈಶಾಖ.pdf/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೮೫ ಅವು ಮರ ಅತ್ತೋದ. ಆ ಗೀಜಗ ಗೂಡಗಳಿಂದ ರೆಂಬೆ ಮ್ಯಾಲೆ ಕುಂತ. ಅಂಗೇ ಕುಂತು ಹುನ್ನಾರಿನಿಂದ ಕೋಲ್ನಲ್ಲಿ ಜೋರಾಗಿ ನೂರ, ಆ ಹಾವ ಕೇಳೀಕ್ಕೆ ಕೆಡುವ... ಆಮ್ಯಾಕೆ ತಾನು ಇನ್ನು ವಕ್ಕಡಿಂದ ತಟಕ್ಕೆ ಕೆಳೀಕೆ ಕುಪ್ಪುದ, ನಾಗರಾವು ಸೆಡೆಯ ವೋಟೆತ್ತರ ಎತ್ತಿ ಬುಸುಗರೀತಿತ್ತು... ನಮ್ಮಣ್ಣ ಧೀರ, ಒಂದೀಟೂ ಎದುರೆ, ಆ ಸಪ್ತ ತಾವಿಕೆ ಸರಿದು, ಕೋಲ್ಸಿಂದ ಅದರ ಸೆಡೆಗೆ ಒಂದೇ ಸಮಕ್ಕೆ ಚಿಕ್ಕೊಂಡು ಚಿಕ್ಕೊಂಡೊಡದು, ಅನ್ನ ಕೊಂದಾಕಿಬುಟ್ಟ.... ಸಿವುನಿ ಎದುರಿ ಎಷ್ಟುಳಿಸೋಗಿ, ಮುಟ್ಟಾರಣ್ಣ ಹಾವು ವೊಡೆಯೋದ ಕ್ವಾಡಲಾರೆ. ನ್ನ ಬಲವಾಗಿ ತಬ್ಬಿಕಂಡಿದ್ದಲು. ... ಅಣ್ಣ ಬಂದು, “ಪುಕ್ಕಲಿ” ಅಂತು ಸಿವುನಿ ಕೆನ್ನೆ ಗಿಂಡಿ, ಗೀಜಗ್ನ ಗೂಡ ನನ್ನ ಕೈಯಿಂದ ಈಸುಕಂಡೋಗಿ ಮರ ಅತ್ತಿ, ಅದು ಮೊದ್ದು ಎಲ್ಲಿತ್ತೊ ಆ ರೆಂಬೆಗೇ ಆ ಗೂಡ ಕಟ್ಟಿಬುಟ್ಟು ಬಂದ... -ಇದ್ಯಲ್ಲ ಗ್ಯಪಕ ಆದಂಗೆ ಚಿಕ್ಕೋರಾಗಿದ್ದಾಗ ನಾವೇಟು ಸುಕವಾಗಿದ್ದೂ ಅಂತ ಲಕ್ಕ ಕರಗೋದ... ಇನ್ನು ಈ ಮಣ್ಣಿನ ರುಣ ನಂಗೆ ತೀರು ಅಂದ್ಯಂಡು. ನನ್ನವ್ವ ವೋದ್ಲು. ನನ್ನ ತಾಯಿಗಿಂತ ಎಚ್ಚಗಿದ್ದ ಬುಂಡಮ್ಮರು ವೊಂಟೋದ್ರು. ಅವರಂಗೆ ನನ್ನ ಸ್ವಾಡ್ಕತ್ತಿದ್ದ ರುಕ್ಕಿಣಿದ್ವಾರು ಅನ್ನಯ ಮಾಡ್ಕಂಡು, ನಮ್ಮ ದೊಡ್ಡಯ್ಯಂಗೂ ಜರ ಅಂದ ದ್ಯವಾಜಮ್ಮ ಯೋಳಿದಂಗಿತ್ತು. ಇನ್ನೇನು ಅದೂ ಪಳೇಗೇ ಇದ್ದೇಕು. ನಮ್ಮ ಪುಟ್ಟಾರಿ ನಮ್ಮ ಬುಟ್ಟು ದೂರ ವೋಂಟೋದ. ನನ್ನಯ್ಯ ಕುಡ್ಡು ಕುಡ್ಡು ನಿಪಾತಾಗಿ ಅಮ್ಮು ಬದುಕಿದ್ರೂವೆ, ಸತ್ತ ಕೂಟಕೇ ಸೇರೋದ. ಎಲ್ಲಕ್ಕಿಂತ ಮುಕ್ಕಾಗಿ ನನ್ನ ತಂಗಿ ಸಿವುನಿ-ಇಂಗಾಗೋದ್ದು!... ಈ ಸುತ್ನಲ್ಲಿ ನಂಗೇ ಇನ್ನೇನ ಉಳುದಿರಾದು?... ನಕ್ಕ ನಂಜೇಗೌಡ ವೊಲ ಸಮೀಪಿಸ್ತಿದಂಗೆ ಇನ್ನೊಂದು ಇಚರವೂ ಅಮ್ಮ ತಲೇಗೆ ವೊಕ್ಕೊತ್ತು. ಆ ನಾತ್ರೆ ಗುದ್ದ ಬಗದು ನಂಜೇಗೌಡ ಎಡತಿ ಗೌರಮ್ಮ ಎಣದ ಮೈಮ್ಯಾಗ್ನಿಂದ ಬಂಗಾರದ ಅಡಿಕೆ, ಕಿವಿವಾಲೆ, ಕರಡಿಗೆ, ಎಲ್ಲಾನೂವೆ ಆ ಮಾರಿಗುಡಿ ಅಣ್ಣದೀರು ಕಂಡು ವೋದ್ರಲ್ಲ, ಆ ಇಸಂಗಳು ಈ ಕಳ್ಳತನ್ವ ನ್ನ ಮ್ಯಾಲೆ ಏರಿಬುಟ್ಟರೂ ಏರಿಬುಟ್ಟರೆ!- ಎಂಗೆ ಯೋಳೋದು?... ಎಂಗಿದ್ದರೂ ಈ ಗುದ್ದಕೂ ನನ್ನ ಗುಡ್ಡಿಗೂ ಅಂತಾ ದೂರ ಯಾನಿಲ್ಲ. ಈ ಕಡೀಗೆ ದುರಮನಳ್ಳಿಯೋರು ಯಾರೂವೆ ಪಳೇಗ ಗುಡ್ಲುಗಳ ಅಕ್ಕಂಡಿಲ್ಲ.....ಆ ಬೊಡ್ಡಿಹಕ್ಕಳು ಇಂಗೆ ಪಲಾನು ಮಾಡಿದ್ರೂವೆ ಮಾಡೋರೆ!...