ಪುಟ:ಭಾರತ ದರ್ಶನ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ವೇಷಣೆ

೩೫

ಸಮಸ್ಯೆಗೆ ಯಾವುದಾದರೂ ಪರಿಹಾರ ಪಡೆಯಬೇಕೆಂದು ಸರ್ವ ಧರ್ಮಗಳ ಮಹಾ ಪಂಡಿತರು ಗಳೊಡನೆ ಚರ್ಚೆಮಾಡಿ, ನಾದಮಾಡುತ್ತ ಕುಳಿತಿರುವುದು ಕಾಣುತ್ತಿತ್ತು.

ಈ ರೀತಿ ಕ್ರಮೇಣ ಭಾರತೀಯ ಇತಿಹಾಸದ ಉಬ್ಬರವಿಳಿತಗಳ, ಗೆಲವು ಸೋಲುಗಳ ಮಹಾ ಚಿತ್ರವು ನನ್ನ ದುರು ಸುಳಿಯಲು ಆರಂಭವಾಯಿತು. ದೇಶದ ಇತಿಹಾಸದಲ್ಲಿ ಐದುಸಾವಿರ ವರ್ಷ ಗಳಿಂದ ಅನೇಕ ದಂಡಯಾತ್ರೆಗಳು ಮತ್ತು ಕೊಭೆಗಳು ಕಂಡುಬಂದರೂ, ಜನಕೋಟಿಯಲ್ಲಿ ಹರಡಿ ಅವರಮೇಲೆ ವಿಶೇಷ ಪ್ರಭಾವ ಬೀರಿರುವ ಒಂದು ಸಂಸ್ಕೃತಿ ಮತ್ತು ಆ ಸಂಸ್ಕೃತಿಯ ಸಂಪ್ರದಾಯ ಪರಂಪರೆ ನಿರಾತಂಕವಾಗಿ ನಡೆದು ಬಂದಿರುವುದು ಒಂದು ವೈಶಿಷ್ಟ, ಅದೇ ರೀತಿ ಒಂದು ಸಂಪ್ರ ದಾಯ ಪರಂಪರೆ ಮತ್ತು ಸುಸಂಸ್ಕೃತ ಜೀವನ ನಡೆಸಿದ ಇನ್ನೊಂದು ರಾಷ್ಟ್ರವೆಂದರೆ ಚೀನ ಈ ಗತಕಾಲದ ವೈಭವ ಕ್ರಮೇಣ ಪ್ರಸ್ತುತ ದುರದೃಷ್ಟ ಕಾಲದೊಳಗೆ ಮಿಳಿತವಾಯಿತು. ಗತಕಾಲದ ವೈಭವ ಮತ್ತು ಅಸ್ತಿತ್ವ ಬೇಕಾದಷ್ಟು ಇದ್ದರೂ ಈ ರಾಷ್ಟ್ರ ದಾಸ್ಯ ರಾಷ್ಟ್ರವಾಗಿ, ಇಂಗ್ಲೆಂಡಿನ ಬಾಲವಾಗಿ ಪರಿಣಮಿಸಿ, ಮನುಷ್ಯನನ್ನು ಪಶುವಾಗಿ ಮಾಡುವ ಘೋರ ವಿನಾಶಕಾರಕ ಯುದ್ಧ ಪ್ರಪಂಚದಲ್ಲೆಲ್ಲ ನಡೆಯಿತು. ಆದರೆ ಆ ಐದು ಸಾವಿರ ವರ್ಷಗಳ ದೃಶ್ಯದಿಂದ ನನಗೊಂದು ತುಲನಾತ್ಮಕ ದೃಷ್ಟಿ ದೊರೆಯಿತು. ಇಂದಿನ ಹೊರೆಯು ಹಗುರವಾದಂತೆ ಕಂಡಿತು. ಬ್ರಿಟಿಷ್ ರಾಜ್ಯಾಡಳಿತೆಯ ನೂರೆ೦ ಭತ್ತು ವರ್ಷಗಳು ಇಂಡಿಯದ ಪುರಾತನ ಇತಿಹಾಸದ ದುರಂತ ಸನ್ನಿವೇಶಗಳಲ್ಲಿ ಒಂದು ಮಾತ್ರ. ಭಾರತ ತನ್ನನ್ನು ತಾನು ಅರಿತುಕೊಳ್ಳುತ್ತದೆ. ಈಗಾಗಲೇ ಈ ಘಟ್ಟದ ಕತೆ ಮುಗಿಯುತ್ತ ಬಂದಿದೆ. ಇಂದಿನ ಪ್ರಳಯಾಗ್ನಿಯಿಂದ ಪ್ರಪಂಚವೂ ಪಾರಾಗುತ್ತದೆ. ಹೊಸ ತಳಹದಿಯಮೇಲೆ ನೂತನ ಪ್ರಪಂಚ ಸೃಷ್ಟಿಯಾಗುತ್ತದೆ.

೨. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾವನೆ

ಭಾರತದ ಈ ನನ್ನ ಪ್ರತಿಕ್ರಿಯೆ ಅನೇಕ ವೇಳೆ ರಾಗಾನ್ವಿತವಾದದ್ದಾದರೂ ಅದು ಬಗೆ ಬಗೆಯ ನಿಯಮಗಳು ಮತ್ತು ಪರಿಮಿತಿಗಳಿಗೆ ಅಧೀನವಾದದ್ದು. ಅದು ರಾಷ್ಟ್ರೀಯ ಸ್ವಭಾವದ್ದು. ಆದರೆ ಅನೇಕರ ರಾಷ್ಟ್ರೀಯ ಭಾವನೆಗೆ ಯಾವ ನಿಯಮವೂ ಪರಿಮಿತಿಯೂ ಇರುವುದಿಲ್ಲ. ನಮ್ಮ ಕಾಲದ ಭಾರತಕ್ಕೆ ರಾಷ್ಟ್ರೀಯ ಭಾವನೆ ಅತ್ಯವಶ್ಯಕ, ಅದು ಸಹಜವಾದ ಪುಷ್ಟಿ ಕರವಾದ ಬೆಳವಣಿಗೆಯೂ ಹೌದು, ಯಾವ ದಾಸ್ಯದೇಶಕ್ಕೇ ಆಗಲಿ ರಾಷ್ಟ್ರೀಯ ಸ್ವಾತಂತ್ರ ಪ್ರಥಮ ಪ್ರಧಾನ ಪ್ರೇರಕವಾಗ ಬೇಕು. ಸಹಸ್ರಾರು ವರ್ಷಗಳ ಪ್ರಬಲ ಅಸ್ತಿತ್ವ ಮತ್ತು ವೈಶಿಷ್ಟದ ಪ್ರಚಂಡ ಪ್ರಜ್ಞೆಯುಳ್ಳ ಭಾರತಕ್ಕಂತೂ ಇದು ಇನ್ನೂ ಹೆಚ್ಚು ಅಗತ್ಯ.

ಇತ್ತೀಚಿನ ಪ್ರಪಂಚದ ಘಟನೆಗಳಿಂದ ಅಂತರರಾಷ್ಟ್ರೀಯ ಸಂಘರ್ಷಣೆಗಳ ಜನತಾವಿ ಪ್ಲವಗಳ ಜಂಝಾವಾತದ ಎದುರಿನಲ್ಲಿ ರಾಷ್ಟ್ರೀಯ ಭಾವನೆಗೆ ಎಡೆಯಿಲ್ಲ, ಎಂಬುದರಲ್ಲಿ ತಥ್ಯವಿಲ್ಲ. ಅದು ಇಂದಿಗೂ ಒಂದು ಜನಾಂಗವನ್ನು ಉತ್ತಮ ಪ್ರೇರಣೆಯಿಂದ ಹೊಡೆದೆಬ್ಬಿಸುವ ಶಕ್ತಿ; ಅದರ ಸುತ್ತ ಭಾವಾತಿರೇಕಗಳು, ಸಂಪ್ರದಾಯಗಳು, ಒಂದು ಸಾಂಘಿಕ ಜೀವನ, ಒಂದು ನಿರ್ದಿಷ್ಟ ಗುರಿ ಇವುಗಳ ಭಾವನೆಗಳು ಹೆಣೆದುಕೊಂಡಿವೆ, ಮಧ್ಯಮ ವರ್ಗದ ಗಣ್ಯ ವ್ಯಕ್ತಿಗಳು ರಾಷ್ಟ್ರೀಯ ಭಾವನೆ ಯಿಂದ ದೂರವಾಗುತ್ತಿದ್ದಾಗ ಅಥವ ದೂರವಾಗುತ್ತಿದೇವೆಂದು ಅವರು ತಿಳಿಸಿದಾಗ, ಅಂತರರಾಷ್ಟ್ರೀಯ ಭಾವನೆಯಿಂದಲೇ ಉಜ್ವಲಿಸಿದ ಶ್ರಮಜೀವಿ ಮತ್ತು ಜನತಾ ಚಳವಳಿಗಳು ರಾಷ್ಟ್ರೀಯತೆಯ ಕಡೆಗೆ ಸರಿಯುತ್ತಿದ್ದವು. ಯುದ್ದ ಬಂದೊಡನೆ ಎಲ್ಲೆಡೆಯಲ್ಲೂ ಎಲ್ಲರೂ ರಾಷ್ಟ್ರೀಯ ಭಾವನೆಯ ಬಲೆಗೆ ಸೆರೆಯಾದರು. ರಾಷ್ಟ್ರೀಯತೆಯ ಈ ಪ್ರಚಂಡ ಪುನರುಜ್ಜಿವನ ಅಥವ ಪುನರ್ದಶ್ರನ ಮತ್ತು ಅದರ ಪ್ರ ಪ್ರಥಮ ಅವಶ್ಯಕತೆಯ ಪ್ರಜ್ಞೆಯು ಹೊಸ ಸಮಸ್ಯೆಗಳನ್ನು ಎಬ್ಬಿಸಿದೆ ; ಹಳೆಯ ಸಮಸ್ಯೆಗಳ ರೂಪು, ರಚನೆಗಳನ್ನು ಮಾರ್ಪಡಿಸಿದೆ. ರೂಢಮೂಲವಾದ ಪುರಾತನ ಸಂಪ್ರದಾಯ ಗಳನ್ನು ಸುಲಭವಾಗಿ ಕಿತ್ತೊಗೆಯಲು ಸಾಧ್ಯವಿಲ್ಲ; ಗಂಡಾಂತರ ಕಾಲದಲ್ಲಿ ಅವು ಉಳಿದೆಲ್ಲ ಭಾವನೆ