ವಿಷಯಕ್ಕೆ ಹೋಗು

ಪುಟ:ಉಮರನ ಒಸಗೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ಋಷಿಗಳೆಂದೂ, ಅವರ ವಿರಹವಿಲಾಪಗಳು ಭಕ್ತಿಯ ಉತ್ಕಟದಶೆಯೆಂದೂ, ಗೋಪಾಲಕರು ಸಂಸಾರ ಬಂಧನಗಳೆಂದೂ, ವಸ್ತ್ರಗಳು ಅಹಂಕಾರ ಸ್ವರೂಪಗಳೆಂದೂ, ಕೃಷ್ಣಲೀಲೆಯೆಂಬುದು ಭಗವದನುಗ್ರಹ ರೀತಿಯೆಂದೂ ಹೇಳತಕ್ಕವರಿಲ್ಲವೆ ? ಈ ಬಗೆಯ ವ್ಯಾಖ್ಯಾನವು ಭಕ್ತಿ ಚಮತ್ಕಾರಗಳುಳ್ಳುದೇನೋ ಹೌದು. ಆದರೆ ಅದಕ್ಕೆ ಅವಶ್ಯವಾಗುವ ಬಲಾತ್ಕಾರದ ಶಬ್ದಾನ್ವಯಗಳನ್ನೂ ಅತಿಯುಕ್ತಿಗಳನ್ನೂ ನೋಡಿದರೆ, ಅದು ಕವಿಯ ನಿಜವಾದ ಹೃದಯವನ್ನು ತೋರಿಸುತ್ತದೆ ಎಂದು ನಂಬಿಕೆ ಹುಟ್ಟುವುದು ಕಷ್ಟ, ಕಾವ್ಯದಿಂದ ಸಹಜವಾಗಿ, ಸ್ಪಷ್ಟವಾಗಿ, ಸುಲಭವಾಗಿ ದೊರೆಯುವ ಅರ್ಥವು ಕವಿಯ ಮನಸ್ಸಿನಲ್ಲಿದ್ದುದೇ ಅಲ್ಲವೆಂದುವಾದಿಸುವುದು ಸಾಹಸವೇ ಸರಿ. ಪ್ರಕಾಶವಾಗಿ ಭೋಗವನ್ನೂ, ರಹಸ್ಯವಾಗಿ ವಿರಾಗವನ್ನೂ ಬೋಧಿಸುವುದರ ಪ್ರಯೋಜನವಾದರೂ ಏನೋ ತಿಳಿಯುವುದು ಕಷ್ಟ. ಒಳ್ಳೆಯ ಕಾವ್ಯವು ಮತ ಗ್ರಂಥವಾಗಿರಲೇಬೇಕೆಂಬ ನಿಯಮವು ಕಾವ್ಯ ಶಾಸ್ತ್ರದಲ್ಲಿಯೂ ಇಲ್ಲ, ಧರ್ಮಶಾಸ್ತ್ರದಲ್ಲಿಯೂ ಇಲ್ಲ. ಚಿತ್ತವಿಕಾಸ ವನ್ನುಂಟಾಗಿಸಿ, ಅದರ ಮೂಲಕ ಪರೋಕ್ಷವಾಗಿ ಒಂದು ಬಗೆಯ ಉತ್ತಮ ಆತ್ಮಸಂಸ್ಕಾರಕ್ಕೆ ದಾರಿ ಬಿಡಿಸುವುದು ಕಾವ್ಯದ ಕೆಲಸ, ಸ್ಪಷ್ಟಾರ್ಥವೇ ಈ ಕೆಲಸವನ್ನು ಮಾಡುತ್ತಿರುವಾಗ, ಗೂಢಾರ್ಥವನ್ನು ಹುಡುಕುವ ಕೈಶಕ್ಕೆ-ಅದೊಂದು ಬಗೆಯ ಕಸರತ್ತೆಂಬುದೊಂದಲ್ಲದೆ ಬೇರೆ ಫಲ ಕಾಣುವುದಿಲ್ಲ. ಉಮರನು ನಾಚಿಕೆ ಬಿಟ್ಟ ಚಾರ್ವಾಕನೆಂದೂ ಇಂದ್ರಿಯ ಸುಖಲೋಲುಪನೆಂದೂ ಹೇಳುವುದಕ್ಕೂ ಸ್ವಲ್ಪ ಕಾರಣವಿರುವಂತೆ ಒಂದೆರಡು ಕಡೆ ಕಾಣಬಹುದು. ಆದರೆ ಆ ಕಾರಣವೂ ಭ್ರಾಂತಿಯೇ ಎಂಬುದು ಕಾವ್ಯವನ್ನೊಟ್ಟಿಗೆ ತೆಗೆದುಕೊಂಡು ಪರಾಮರ್ಶಿಸುವವರಿಗೆ ಬೇಗನೆ ಗೋಚರವಾಗುವುದು. ಉಮರನು ಇಹಲೋಕದ ಋಷಿಗಳೆಂದೂ, ಅವರ ವಿರಹವಿಲಾಪಗಳು ಭಕ್ತಿಯ ಉತ್ಕಟದಶೆಯೆಂದೂ, ಗೋಪಾಲಕರು ಸಂಸಾರ ಬಂಧನಗಳೆಂದೂ, ವಸ್ತ್ರಗಳು ಅಹಂಕಾರ ಸ್ವರೂಪಗಳೆಂದೂ, ಕೃಷ್ಣಲೀಲೆಯೆಂಬುದು ಭಗವದನುಗ್ರಹ ರೀತಿಯೆಂದೂ ಹೇಳತಕ್ಕವರಿಲ್ಲವೆ ? ಈ ಬಗೆಯ ವ್ಯಾಖ್ಯಾನವು ಭಕ್ತಿ ಚಮತ್ಕಾರಗಳುಳ್ಳುದೇನೋ ಹೌದು. ಆದರೆ ಅದಕ್ಕೆ ಅವಶ್ಯವಾಗುವ ಬಲಾತ್ಕಾರದ ಶಬ್ದಾನ್ವಯಗಳನ್ನೂ ಅತಿಯುಕ್ತಿಗಳನ್ನೂ ನೋಡಿದರೆ, ಅದು ಕವಿಯ ನಿಜವಾದ ಹೃದಯವನ್ನು ತೋರಿಸುತ್ತದೆ ಎಂದು ನಂಬಿಕೆ ಹುಟ್ಟುವುದು ಕಷ್ಟ, ಕಾವ್ಯದಿಂದ ಸಹಜವಾಗಿ, ಸ್ಪಷ್ಟವಾಗಿ, ಸುಲಭವಾಗಿ ದೊರೆಯುವ ಅರ್ಥವು ಕವಿಯ ಮನಸ್ಸಿನಲ್ಲಿದ್ದುದೇ ಅಲ್ಲವೆಂದುವಾದಿಸುವುದು ಸಾಹಸವೇ ಸರಿ. ಪ್ರಕಾಶವಾಗಿ ಭೋಗವನ್ನೂ, ರಹಸ್ಯವಾಗಿ ವಿರಾಗವನ್ನೂ ಬೋಧಿಸುವುದರ ಪ್ರಯೋಜನವಾದರೂ ಏನೋ ತಿಳಿಯುವುದು ಕಷ್ಟ. ಒಳ್ಳೆಯ ಕಾವ್ಯವು ಮತ ಗ್ರಂಥವಾಗಿರಲೇಬೇಕೆಂಬ ನಿಯಮವು ಕಾವ್ಯ ಶಾಸ್ತ್ರದಲ್ಲಿಯೂ ಇಲ್ಲ, ಧರ್ಮಶಾಸ್ತ್ರದಲ್ಲಿಯೂ ಇಲ್ಲ. ಚಿತ್ತವಿಕಾಸ ವನ್ನುಂಟಾಗಿಸಿ, ಅದರ ಮೂಲಕ ಪರೋಕ್ಷವಾಗಿ ಒಂದು ಬಗೆಯ ಉತ್ತಮ ಆತ್ಮಸಂಸ್ಕಾರಕ್ಕೆ ದಾರಿ ಬಿಡಿಸುವುದು ಕಾವ್ಯದ ಕೆಲಸ, ಸ್ಪಷ್ಟಾರ್ಥವೇ ಈ ಕೆಲಸವನ್ನು ಮಾಡುತ್ತಿರುವಾಗ, ಗೂಢಾರ್ಥವನ್ನು ಹುಡುಕುವ ಕೈಶಕ್ಕೆ-ಅದೊಂದು ಬಗೆಯ ಕಸರತ್ತೆಂಬುದೊಂದಲ್ಲದೆ ಬೇರೆ ಫಲ ಕಾಣುವುದಿಲ್ಲ.

ಉಮರನು ನಾಚಿಕೆ ಬಿಟ್ಟ ಚಾರ್ವಾಕನೆಂದೂ ಇಂದ್ರಿಯ ಸುಖಲೋಲುಪನೆಂದೂ ಹೇಳುವುದಕ್ಕೂ ಸ್ವಲ್ಪ ಕಾರಣವಿರುವಂತೆ ಒಂದೆರಡು ಕಡೆ ಕಾಣಬಹುದು. ಆದರೆ ಆ ಕಾರಣವೂ ಭ್ರಾಂತಿಯೇ ಎಂಬುದು ಕಾವ್ಯವನ್ನೊಟ್ಟಿಗೆ ತೆಗೆದುಕೊಂಡು ಪರಾಮರ್ಶಿಸುವವರಿಗೆ ಬೇಗನೆ ಗೋಚರವಾಗುವುದು. ಉಮರನು ಇಹಲೋಕದ