ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩ನೇ ಪ್ರಕರಣ.


ವೈದಿಕ ಆರ್ಯರ ಸೃಷ್ಟಿಯ ಉಪಾಸನೆ.

ಇಂದ್ರ ದೇವರು:- ಆರ್ಯರ ಮನಸ್ಸು ವಿಕಾಸಗೊಂಡಂತೆಲ್ಲ ಆರ್ಯರ ಕಣ್ಣುಗಳಿಗೆ ಸೃಷ್ಟಿಯು ಭಗವದ್ರೂಪವಾಗಿ ಪರಿಣಮಿಸಿತು. ಇಂದ್ರ, ಚಂದ್ರ, ಸೂರ್ಯ, ವಾಯು, ಅರುಣ, ವರುಣ, ಆಕಾಶ, ಅಗ್ನಿ, ಇವುಗಳೆಲ್ಲ ಅವರಿಗಾಗಿಯೇ ಬೇಕಾದ ವರಗಳನ್ನು ನೀಡಲಿಕ್ಕೆ ಕೈ ಎತ್ತಿಕೊಂಡು ನಿಂತಿರುವ ಕಣ್ಮುಂದಾಡುವ ದೇವತೆಗಳ೦ತೆ ಕಾಣಿಸಿದವು. ಈ ದೇವತೆಗಳಲ್ಲಿ ಇಂದ್ರನೆ೦ದರೆ ಅರ್ಯರ ಪ್ರಾಣ. ಅದೇ ತಾನೇ ಮಾತೆಯುದರದಿಂದ ಹೊರ ಬಿದ್ದು ಕಣ್ತೆರೆದು ಜಗತ್ತನ್ನು ನೋಡುವ ಮಗುವಿಗೆ ಹೇಗೆ ಸೃಷ್ಟಿಯನ್ನು ಕ೦ಡರೆ, ಏನೋ ಒಂದು ವಿಧದ ಅಶ್ಚರ್ಯವೂ, ಅನಂದವೂ, ಸ್ವಾಭಾವಿಕವಾಗಿಯೇ ಉಕ್ಕಿ ಬಂದು, ಅನಂದದ ಅಲೆಗಳು ಹೊರಚಲ್ಲುವವೋ, ಹಾಗೆಯೇ ಭಗವಂತನಿಂದ ಕಟ್ಟಲ್ಪಟ್ಟ ಈ ಸೃಷ್ಟಿಯ ಬಗ್ಗೆ ಅರ್ಯರಿಗೆ ಅನಂದವಾಗಿ ಸೃಷ್ಟಿ ದೇವತೆಯನ್ನು ಕಂಡು, ಕುಣಿಕುಣಿದಾಡಿ, ಅವಳ ಮಹಾತ್ಮ್ಯೆಯನ್ನು ತಮ್ಮ ಹೊರಸೂಸುವ ವೈದಿಕ ನುಡಿಗಳಿ೦ದ ಮನದಣಿಯುವಂತೆ ಪಾಡಿದ್ದಾರೆ. ಕಣ್ಮುಂದಿರುವ ತಂದೆ ತಾಯಿಗಳಿಗೆ ಚಿಕ್ಕ ಮಕ್ಕಳು 'ನನಗೆ ಅದು ಕೊಡು ಇದು ಕೊಡೆಂದು' ಆಚೆಯಿ೦ದ ಕಾಡಿ ಬೇಡು ವಂತೆ, ಅರ್ಯರು 'ನಮಗೆ ದುಡ್ಡು ಕೊಡು, ನಮಗೆ ವೈಭವ ಕೊಡು' ಎಂದು ಮುಂತಾಗಿ ಸ್ಟೇಚ್ಛೆಯಾಗಿ ಸ್ತುತಿ ಮಾಡಿದ್ದಾರೆ. ಋಗ್ವೇದ ದೊಳಗಿನ ಬಹು ಭಾಗವ ಈ ತೆರದ ಸ್ತುತಿಗಳಿಂದಲೇ ತುಂಬಿದೆ. ತಮ್ಮ ಮೇಲೆ ದಾಳಿಯಿಡುವ ವೃತ್ರನಿಂದಲೂ ಶತ್ರುಗಳಿಂದಲೂ ಕಾಪಾಡಲಿಕ್ಕೂ ಆರ್ಯರು ಹಲವು ತಾರೆ ಇಂದ್ರನಿಗೆ ದೀನರಾಗಿ ಮೊರೆ ಹೊಕ್ಕಿದ್ದು, ಉತ್ಸಾಹಿಯಾದ ಇಂದ್ರನು ತನ್ನ ವಜ್ರದಿಂದ ಧರ್ಮಲಂಡ