ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸತ್ಯಕಾಮ ಜಾಬಾಲೀ ಕರೆ. ೬ ಕಾಮ; ನನ್ನ ಹೆಸರು ಜಾ ಬಲಾ; ನೀನು ನನ್ನ ಮಗನಾದ್ದರಿಂದ ನಿನಗೆ ಸತ್ಯಕಾಮ ಜಾ ಬಲಿಯಂದು ಕರೆಯುವದು೦ಟು” ಹೀಗೆಂದಳು. ತಾ ಯಿ೦ದ ತನ್ನ ಜನ್ಮ ವೃತವನ್ನು ಕೇಳಿಕೊ೦ಡವನಾದ ಸತ್ಯಕಾಮನು ಗೌತಮ ಋಷಿ ಶಿಷ್ಯನಾದ ಹಾರಿದ್ರು ಮತ ಋಷಿಯ ಬಳಿ ಹೋಗಿ, ತಪೋನಿಧಿಗಳೆ ? ನನಗೆ ಬ್ರಹ್ಮಚರ್ಯದೀಕ್ಷೆಯ ಮೈ ತು, ಕೃತಾರ್ಧ ನನ್ನಾಗಿ ಮಾಡು ವಿರಾ ? ಎಂದು ಬಿನ್ನವಿಸಿಕೊಳ್ಳಲು, ಅವರು ವಾಡಿಕೆ ಯ೦ತೆ ತಮ್ಮಾ, ನಿನ್ನ ಕುಲಗೋತ್ರವಾವುದು? ಎಂದು ತಿರುಗಿ ವಿಚಾರಿ ಸಿದರು. ಆಗ ಸತ್ಯಕಾ ಮನು ನನ್ನ ಕುಲಗೋ ತ್ರ ನಾನರಿಯೆ. ನನ್ನ ತಾಯಿಯನ್ನು ಈ ಬಗ್ಗೆ ನಾನು ವಿಚಾರಿಸಿದರೆ, ಅವಳೂ ನನಗೆ ಹೀಗೇ ಉತ್ತರ ಕೊಟ್ಟಳು; ಅದು ಕಾರಣ ' ನಾನು ತಾದಿಯ ಹೆಸರಿಟ್ಟು ಕೊಂಡು ವ್ಯವಹರಿಸುತ್ತಿದ್ದೇನೆ” ಎಂದನು. ದಿವ್ಯ ತೇಜದಿಂದೊಡ ಗೂಡಿದ ಆ ಚಿಕ್ಕ ಬಾಲಕನ ಬಾಯಿ ಂದ ಸುರಿಯುವ ಅಮೃತ ಸವ ವಾದ ಸತ್ಯವಾಣಿಯನ್ನು ಕೇಳಿಕೊ ೦ಡವನಾದ ಆ ಋಷಿಯು (< ಅಹಹ ! ಬ್ರಾಹ್ಮಣನಿಗಲ್ಲದೆ ಮತ್ತಾರಿಗೆ ಸತ್ಯವನ್ನಾಡುವ ಈ ನಾಲಿಗೆಯು ಇರಲಿಕ್ಕೆ ಸಾಧ್ಯವೆ ? ಈ ತನು ಬ್ರಾಹ್ಮಣನೇ ಎಂದು ಮನಸಿನಲ್ಲಿ ಅಂದು ಕೊ೦ಡು ( ಮಗು, ಸ್ವಲ್ಕು ಇ೦ ಧನವನ್ನು ತೆಗೆದು ಕೊ೦ಡು ಬಾ, ನೀನು ನಿಜವಾಡಿದ್ದರಿಂದ ನಾನು ನಿನಗೆ ಆಶ್ರಯ ಕೊಟ್ಟೆ ತೀರುವೆನು.” ಹೀಗೆಂದು ಅಭಯವಿತ್ತನು. ಉವನಿಷತ್ಕಾಲದ ಜನರ ದೃಷ್ಟಿ ಕೋನವು ಬದಲಾಗಿ ಅವರಲ್ಲಿ ಸತ್ಯದ ಹಸಿವು ಎಷ್ಟು ಬೆಳೆದಿತ್ತೆಂಬುದಕ್ಕೆ ಮೇಲಿನ ಕಥೆಯೊಂದು ನಾ ಕು. ಹೊರಗಿನ ಹುರುಳಿಲ್ಲದ ಹೊದಿಕೆಯ ಹೊಟ್ಟು ಹಾರಿಸಿ, ಳಗಿನ ತಿಳಿಯಾದ ತಿಳಿವಿನ ತೊ ಆಕೆಯ ತಿಳಿ ನೀರಿನಿಂದ ಬೆಳಿಸಲಿಕ್ಕೆ ಕೈಕೊಂಡು ನಿಂತಿರುವ ಖುಷಿಗಳ ಸಹಾನುಭೂತಿಯ ದೃಷ್ಟಿ ಯನ್ನು ಕುರಿತು ಎಷ್ಟು ಕೊಂಡಾಡಿದರೂ ಕಡಿಮೆ. ಬೃಹದಾರಕ ಗ್ಯಕ ಉಪನಿಷತ್ತಿನಲ್ಲಿ ವಚಕ್ಕು ವಿನ ಮಗಳಾದ ಗಾರ್ಗಿಯು ಯಾಜ್ಞವಲ್ಕ ಮುನಿಗಳಿಗೆ ದೃಶ್ಯ ಜಗತ್ತನ್ನು ಕುರಿತು ಭಾರವಣೆಯ ಪ್ರಶ್ನೆಗಳನ್ನು ಕೇಳಿ ರುವಳು. ಯಾಜ್ಞವಲ್ಕಮುನಿಯು ತನ್ನ ಪ್ರಿಯ ಪತ್ನಿಯಾದ ಮೈತ್ರೇ ಯಿಗೆ ಅತ್ಮಜ್ಞಾನದ ಕುರುಹನ್ನು ತಿಳಿಸಿಕೊಟ್ಟ ಸಂಗತಿಯು ಪ್ರಸಿದ್ಧ