ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೦

ಭಾರತೀಯರ ಇತಿಹಾಸವು.

ರಿಂದ ಅವರಿಗೆ ಯಾವುದರ ಭಯವಿರಲಿಲ್ಲ. ಭಗವಂತನ ಅವತಾರದಲ್ಲಿ ಈ ಮೇರೆಗೆ ಅಲ್ಲಾಡದಂಧ ನಂಬಿಗೆಯನ್ನಿಟ್ಟುಕೊ೦ಡು ಆರ್ಯರುಯಾವಾಗಲೂ ನಿಶ್ಚಿಂತೆಯಿಂದಿದ್ದರು. ನಂಬುಗೆಯ ಬಲವೇ ಬಲವು; ಅದನ್ನು ಬೆಳೆಸುವದೇ ಅವರ ಸಾಧನವಾಗಿತ್ತು. ಭಗವಂತನು ಪ್ರಪಂಚ ಕ್ಷೇಮಕ್ಕಾಗಿ ತೊಟ್ಟಿರುವ ಮತ್ಸ್ಯ ಕೂರ್ಮಾದಿ ಅವತಾರಗಳಲ್ಲಿ ರಾಮ ಕೃಷ್ಣ ಇವೆರಡೇ ಅವತಾರಗಳು ಅತ್ಯಂತ ಶ್ರೇಷ್ಠವಾದವುಗಳು, ಇವೆರಡೂ ಅವತಾರಗಳಲ್ಲಿ ದೇವರು ಎಲ್ಲ ಅವತಾರಗಳಿಗಿಂತ ವಿಶೇಪಾ೦ಶದಿ೦ದ ಮೃಗೊ೦ಡು ಬ೦ದನು. ಆದುದರಿಂದಲೇ ರಾಮಾವತಾರಕ್ಕೆ ಇನ್ನೊಂದು ಮೇಲ್ಮೆ.

ರಾಮಾಯಣ ಮಹಾ ಕಾವ್ಯವು:-ಭಾರತೀಯರ ಜನಜೀವನಕ್ಕೆ ವೇದೋಪನಿಷತ್ತುಗಳು ಮೂಲಭೂತವಾದವುಗಳು. ಇವು ಜನ ಸಾಮಾನ್ಯಕ್ಕೆ ತಿಳಿಯುವಂಥವುಗಳಲ್ಲ. ರಾಮಾಯಣ ಮಹಾಕಾವ್ಯವಾದರೋ, ಉಪನಿಷತ್ತುಗಳಲ್ಲಿ ಹೇಳಿರುವ ಸತ್ಯಂವದ, ಧರ್ಮ೦ಚರ, ಮಾತೃದೇವೋಭವ, ಪಿತೃದೇವೋಭವ ಅವೇ ಮುಂತಾದ ಮಹಾತತ್ವಗಳನ್ನು ಸೂರ್ಯವಂಶದ ಕುಟುಂಬದವರು ನಡೆದು ತೋರಿಸಿರುವದೊ೦ದು ರೂಪವೆತ್ತಿರುವ ಉಪನಿಷತ್ತು. ಈ ಕಾವ್ಯದ ಕಥೆಯು ಕಲ್ಪನೆಯಿಂದ ಹೊರಡಿಸಿದ ಕಟ್ಟಲ್ಲ. ಒಂದಾನೊಂದು ಕಾಲಕ್ಕೆ ಆ ಕಥೆಯ ಜೀವಂತ ಮಹಾ ಚಿತ್ರವು ಜನರ ಕಣ್ಮುಂದೆ ಹಾಯ್ದು, ಹಲವು ವರ್ಷಗಳ ವರೆಗೆ ಭಾರತೀಯ ಜನಾಂಗವನ್ನೇ ಬೆರಗುಗೊಳಿಸಿ ಬೆಪ್ಪು ಹಿಡಿಸಿದ್ದಿತು. ಅಷ್ಟೇಕೆ, ರಾಮಾಯಣ ಮಹಾಕಾವ್ಯದೊಳಗಿನ ಅಲೌಕಿಕರಾದ ಚರಿತ್ರನಾಯಕನೂ, ನಾಯಿಕೆಯೂ ಅವರ ಸೆರೆಯಲ್ಲಿರುವ ಲಕ್ಷಣ, ಭರತ, ಹನುಮ೦ತ ಮೊದಲಾದವರೂ ತಮ್ಮದಿವ್ಯವಾದ ಚಾರಿತ್ರ್ಯದಿಂದ ಆರ್ಯಕುಟುಂಬದೊಳಗೂ, ಆರ್ಯಹೃದಯದೊಳಗೂ ಆಧಿದೇವತೆಗಳಾಗಿ ಮೆರೆಯುತ್ತಿದ್ದುದಲ್ಲದೆ ಮಾನವಜಾತಿಗೇನೇ ಆದರ್ಶ ಭೂತರಾಗಿದ್ದಾರೆ. ರಾಮಾಯಣವಾಗಿ ಯುಗ ಯುಗಾ೦ತರಗಳು ಉರುಳಿಹೋದರೂ, ರಾಮಾಯಣಕ್ಕಿದ್ದ ಮೇಲ್ಮೆಯು ತಪ್ಪಿಲ್ಲ. ಜನರಾಗವು ಕುಂದಿಲ್ಲ. ರಾಮಾಯಣದ ರಮ್ಯತೆಯೇ ಭಾರತೀಯರ ಜೀವ