ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪

ಭಾರತೀಯರ ಇತಿಹಾಸವು.


ವಸಿಷ್ಠ-ವಿಶ್ವಾಮಿತ್ರ:-ರಾಮಾಯಣದೊಳಗೆ ಅಡಿಗಡಿಗೆ ಎದು
ರುಬಂದು, ಶ್ರೀ ರಾಮಚಂದ್ರನ ಕಾರ್ಯಕ್ಕೆ ನೆರವಾಗುವ ಒ೦ದೆರಡು
ವಿಭೂತಿಗಳಲ್ಲಿ ವಸಿಷ್ಠ, ವಿಶ್ವಾಮಿತ್ರ ಅವರಿಬ್ಬರು ಮಹರ್ಷಿಗಳ ಹೆಸ
ರನ್ನು ಮರೆತರೆ, ರಾಮಾಯಣ ಕಾಲದಲ್ಲಿ ಭಾರತೀಯಜನಾ೦ಗದ ಕಟ್ಟು
ವಿಕೆಗೆ ಮೂಲವಾದ ಎರಡು ಶಕ್ತಿಗಳನ್ನೇ ನಾವು ಕಣ್ಮರೆ ಮಾಡಿ
ದಂತಾಗುವದು; ವಿಶ್ವಾಮಿತ್ರರು ತೇಜೋವಿಶಿಷ್ಟರಾದ
ಕ್ಷತ್ರಿಯ ರಾಜರು; ವಸಿಷ್ಠರು ಋಷಿಗಳು; ವಿಶ್ವಾಮಿತ್ರರು ಕ್ಷಾತ್ರತೇಜಸ್ಸಿ
ನಿಂದುಕ್ಕುವ ಮೂರ್ತಿ, ವಸಿಷ್ಟರು ಬ್ರಹ್ಮತೇಜಸ್ಸಿನ ಪುತ್ಥಳಿ; ವಿಶ್ವಾ
ಮಿತ್ರ ರಾಜರಿಗೆ ವಸಿಷ್ಠ ಮಹರ್ಷಿಗಳಲ್ಲಿರುವ ಕಾಮಧೇನುವಿನ ಬಗ್ಗೆ ಆಸೆ ಹುಟ್ಟಿತು. ವಸಿಷ್ಠರು ತಮ್ಮ ನಾರಸರ್ವಸ್ವವಾದ ಕಾಮಧೇನು
ವನ್ನು ಕೊಡಲು ಒಪ್ಪದಿರಲು ಅವರಿವರಿಗೂ ಹೋರಾಟ ನಡೆದು ವಸಿ
ಷ್ಠರ ಮುಂದೆ ವಿಶ್ವಾಮಿತ್ರ ರಾಜರ ಸೈನ್ಯಬಲ,ಕ್ಷಾತ್ರತೇಜದ ಆಟ ನಡೆ
ಯದೆ ಹೋಯಿತು. ವಿಶ್ವಾಮಿತ್ರರಾಜರು ಸ್ವಾಭಾವಿಕವಾಗಿಯೇ ಬಹು ಮಹತ್ವಾಕಾಂಕ್ಷಿಯಾದವರು. ತಮಗಾದ ಸೋಲನ್ನು ಸಹಿಸದೆ,
ವಸಿಷ್ಠರಂತಹ ಅಜೇಯವಾದ ಪದವಿಯನ್ನು ಪಡೆಯಲೆಳಸಿ

ರಾಜ್ಯ
ವನ್ನು ಬಿಟ್ಟು, ಘೋರವಾದ ತಪಾಚರಣೆಗೆ ಮನಸು ಮಾಡಿ ವಸಿಷ್ಠ ಋಷಿಗಳಿ೦ದಲೇ ಬ್ರಹ್ಮರ್ಷಿಗಳೆ೦ದೆನಿಸಿಕೊ೦ಡು, ಕ್ಷಾತ್ರ ತೇಜಸ್ಸಿಗಿಂತ ಬ್ರಹ್ಮತೇಜವೇ ಮೇಲೆಂದು ಒಪ್ಪಿಕೊಂಡರು. ಈ ಬ್ರಹ್ಮರ್ಷಿ ಪದವಿ ಗಾಗಿ ವಿಶ್ವಾಮಿತ್ರರು ಪಟ್ಟಿ ರುವ ಶ್ರಮವೆಂದರೆ ಅದೊ೦ದು ವಿಶ್ರಾ ಮಿತ್ರರ ತಪಾಚರಣೆ' ಯೆ೦ಬ ಹೆಸರಿನಿಂದ ನಾಣ್ಣುಡಿಯಾಗಿದೆ. ಶ್ರೀ ರಾಮಚಂದ್ರ ನಿಗೆ ವಿಶ್ವಾಮಿತ್ರರೇ ಕ್ಷೇತ್ರ ವಿದ್ಯೆಯನ್ನು ಕಲಿಸಿದ ರೆಂದೂ, ವಸಿಷ್ಠ ರು ಬ್ರಮ್ಹ ಪದೇಶ ಮಾಡಿದರೆಂದೂ ನಮ್ಮ ಪುರಾಣ ಗಳಿ೦ದ ತಿಳಿಯುತ್ತದೆ. ರಾಮಾಯಣದೊಳಗೆ ವಿಶ್ವಾಮಿತ್ರರ ಲೋಕ ವಿಲಕ್ಷಣವಾದ ಅನೇಕ ಕಾರ್ಯಗಳ ಉಲ್ಲೇಖವಿದೆ.

ಮಹಾಭಾರತ ಕಾಲ:- ವೈದಿಕ ಕಾಲದ ಸಾಯಂಕಾಲವೂ ಕಲಿ ಕಾಲದ ಆರಂಭಕಾಲವೂ ಆದ್ದರಿಂದ ಭಾರತಕಾಲಕ್ಕೆ ಸಂಧಿಕಾಲವೆಂದು ಹೇಳ ಬಹುದು; ಹಿಂದೂ ಜನರು ಇದಕ್ಕೆ ದ್ವಾಪರಯುಗವನ್ನು ವರು. ೨ (ವಿದೆ.