ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇತಿಹಾಸವು. ವೇದಾ೦ತದ ಪ ಶ್ಲೋತ್ತರಗಳೂ, ಸಂವಾದಗಳೂ, ಧರ್ಮರಹಸ್ಯಗಳೂ ಭಾರತದೊಳಗೆ ರಾಶಿ ರಾಶಿಯಾಗಿ ಇಡಗಿವೆ. ಭಾರತವು ರಾಷ್ಟ್ರೀಯ ಗ್ರಂಥವು:- ಜನಾ೦ಗವೆಂದಮೇಲೆ ನಾನಾ ತರದ ಏರು- ಇಳುಕಲು, ಕೊರಕಲುಗಳೊಳಗಿಂದ ಹಾಯ ಬೇ ಕಾದದ್ದೆ; ಇ೦ಥ ಸಮಯ ಸಂದರ್ಭಗಳಲ್ಲಿ ಯಾವುದೊಂದು ಜನಾಂ ಗಕ್ಕೆ ದಾರಿ ತೋರಿಸುವದಕ್ಕಾಗಿ ಶ್ರೇಷ್ಠ ಪುರುಷರು ಇದ್ದೆ ಇರುತ್ತಾ ರೆಂಬುದು ಗೊತ್ತಿನಮಾತಲ್ಲ; ಒಂದು ವೇಳೆ, ಇದ್ದ ರೂ ಅವರಿಗಾದರೂ ಭಾರತದಂಧ ಅಸ್ತ್ರ-ಗ್ರ೦ಧಗಳ ಅಧಾರವಿಲ್ಲದೆ ಯಾವುದೊಂದು ಮಾತನ್ನು ಬಾಯಿ ಬಿಚ್ಚಿ ಅಡುವದು ಕಷ್ಟವಾಗುತ್ತದೆ. ಈ ದೃಷ್ಟಿ ಯಿಂದ ರಾಮಾಯಣ ಮಹಾಭಾರತ ಗ್ರ೦ಧಗಳೆಂದರೆ, ಯುಗ ಯುಗಾಂತರಗಳಿಂದ ಜನಾಂಗದ ಕ್ಷೇಮಕ್ಕಾಗಿ ಹಗಲಿರಳೂ ಬೋಧಿ ಸುತ್ತ ನಿಂತಿರುವ ಮೂರ್ತಿ ಮ೦ತ ಮಹಿಮಾಪುರುಷರೇ ಸರಿ, ಇ೦ಧ ಪುರಾಣ ಕಾಲದ ಮಹಾ ಗ್ರಂಥಗಳು ಜನಾಂಗದ ಮುಂದಣ ಏಳಿಗೆಗೆ, ಸರ್ವಕಾಲದಲ್ಲಿಯ, ಅಕ್ಷಯವಾದ ಉತ್ಸಾಹವನ್ನೂ, ದಿವ್ಯ ಸೂರ್ತಿ ಯನ್ನೂ, ಹೆಜ್ಜೆ ಜೈ ಗೆ ಮನಃ ಶಾಂತಿಯನ್ನೂ ನೆಲೆಗೊಳಿಸಿ ಸೋತು ಸುಣ್ಣಾದ ದಾರಿಕಾರನಿಗೆ ಅಷ್ಟಷ್ಟಕ್ಕೆ ಅಮೃತದ ಗುಟಕನ್ನು ಕೊಟ್ಟು, ಜೀವತುಂಬಿಸುತ್ತವೆ. ರಸವತ್ತಾಗಿರುವ ಗ್ರಂಥಗಳೇ ಕಾವ್ಯಗಳು. ಕಾವ್ಯಗಳ ಪ್ರಾಣವೆಂದರೆ ರಸ-ಸೂಸುತ್ತಿರುವದೆಂಬು ದನ್ನೇ ಕಾವ್ಯಗಳ ಮುಖ್ಯ ಲಕ್ಷಣವನ್ನಾಗಿಟ್ಟು ಕೊ೦ಡರೆ, ಅವುಗಳಲ್ಲಿ ಮಾನವನ-ಚರಿತ್ರವೃತ್ತಗಳನ್ನೇ ಎರಕ ಹೊಯ್ದು ಮಾರ್ಪಡಿಸಿ, ತನ್ನ೦ತೆ ಮಾಡಿಬಿಡು ವದೊ೦ದು ಹೆಚ್ಚಿನ ಗುಣವಿರುವದರಿಂದ, ಹತಾಶವಾಗಿ ನೆಲ ಕೈ ಬಿದ್ದ ಜನಾ೦ಗಕ್ಕೆ ಈ ಇತಿಹಾಸಕಾವ್ಯವು ರಸಾಯನವಾಗಿ ಪರಿಣ ಮಿಸು ವದು. ಇದನ್ನೆಡೆದು ಹೇಳಬೇಕೆಂದರೆ, ಹಿಂದೂ ಜನರಿಗೆ ಭಾರತ ಪುರಾಣವೆಂದರೆ, ಒಂದು ಮೇಲು ಪಂಕ್ತಿಯಾದ ರಾಷ್ಟ್ರೀಯ ಗ್ರಂಥವಾ ಗಿರುವದಲ್ಲದೆ, ವೀರರ ನಾ ತ್ಮಕವಾದ ಕಾವ್ಯವೂ, ಹಿಂದು ಸ್ಥಾನದಲ್ಲಿರುವ ಹೆಣ್ಣು ಗಂಡು, ಚಿಕ್ಕವರು ದೊಡ್ಡವರು, ವಿದ್ಯಾರ್ಥಿಗಳು, ವಿದ್ವಾಂಸರು, ಗೃಹಸ್ಥರು, ಸನ್ಯಾಸಿಗಳು ಅವರೆಲ್ಲರ ಮನೋಬುದ್ಧಿವಾಸನೆಗಳನ್ನು AJ ಜ ಜ