ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉದ್ಯೋಗ ಭೇದಗಳು ೧೧೧ ಮನುಷ್ಯ ಸ್ವಭಾವದ ಮುಖ್ಯ ಅಡಿಗಲ್ಲಾಗಿರುವದರಿಂದ, ಅದು ಸಾಧ್ಯ ವಾದಷ್ಟು ಶುದ್ಧವಾಗಿರುವಂತೆ ಪ್ರಯತ್ನಿಸಬೇಕೆಂದು ಆರ್ಯರ ಎಣಿಕೆ ಯಾಗಿತ್ತು; ವರ್ಣ ಹಾಗೂ ಸ್ವಭಾವ ಇವೆರಡೂ ಸಾಮಾನ್ಯವಾಗಿ ಕೂಡಿಯೇ ಇರುತ್ತವೆ. ಲಕ್ಕೇನೂ ಅಡ್ಡಿಯಿಲ್ಲ. ಆದರೆ ಉಚ್ಚ, ನೀಚ ವರ್ಗಗಳ ಬೆರಿಕೆಯಾಯಿತೆಂದರೆ, ಅವರವರಲ್ಲಿಯ ಗುಣಸ್ವಭಾವಗಳು ಅವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಲ್ಲಿ ಮೂಡಿ, ಇಂತಿಂತಹ ವರ್ಣ, ಜಾತಿಯ ವರ ಸ್ವಭಾವಗಳು ಹೀಗೀಗೇ ಇರುತ್ತವೆಂಬು ವ ಸಿದ್ಧಾಂತವು ಲೋನವಾಗುತ್ತದೆ; ಬ್ರಾಹ್ಮಣರ ಮೇಲೆಯನ್ನು ಸಹಿಸದ ನಹುಷ ಕಾಜನು ಬ್ರಾಹ್ಮಣರ ಛಲನೆ ಗೈರು, ಅವರ ಶಾಪದಿಂದ ಸರ್ಪನಾಗಿ ಬಿದ್ದಿರಲು, ಒಂದಾನೊಂದು ಕಾಲಕ್ಕೆ ಆ ಸರ್ಪನಾದ ನಹುಷನಿಗೂ, ಯುಧಿಷ್ಠಿರನಿಗೂ ಈ ಬಗ್ಗೆ ಮಾತು ಕಥೆ ನಡೆಯಿತು; ಈ ಸಂದರ್ಭಗೊ ಳಗೆ : ಸರ್ಪನಾದ ನಹುಷ ' ನು, ನಿಜವಾದ ಬ್ರಾಹ್ಮಣನು ಯಾರೆಂದು ಪ್ರಶ್ನೆ ಮಾಡಿದ್ದ ಕೈ ಯುಧಿಷ್ಠಿರನು, ಯಾವನು ಶಾ೦ತಿ, ದಯಾ, ಸತ್ಯ, ಧರ್ಮ ಮೊದಲಾದ ದೈವಿಕ ಗುಣಗಳಿಂದ ಬೆಳಗುತ್ತಿರುವನೋ ಆತನೇ ಬ್ರಾಹ್ಮಣನೆಂದು ಉತ್ತರಿಸಿರು ವನು; ಮತ್ತು ಈ ಪ್ರಶ್ನಕ್ಕೆ ಆಧಾರ ವೆಂದು ಬೆಳಿಸಿ ಮಾತಾಡುತ್ತಿರುವಾಗ ಧರ್ಮರಾಜನು ( ಈಗ ಮುಖ್ಯ ಜಾತಿಯೆಂದರೆ, ಮನುಷ್ಯ ಜಾತಿಯೊ೦ದೇ; ಏಕೆಂದರೆ ಎಲ್ಲೆಲ್ಲಿಯೂ, ವರ್ಣಸಂಕರವಾಗಿದೆ; ಆದುದರಿಂದ ವರ್ಣ ನಿರ್ಣಯ ಮಾಡಲಿಕ್ಕೆ ಬರು ವಂತಿಲ್ಲ; ಪೂರ್ವದಲ್ಲಿ ಯಾವನೊಬ್ಬನನ್ನು ವರ್ಣದಿಂದಲೇ ಗುರುತಿಸು ಆದ್ದರು. ಆದರೆ ಈಗ ಅದು ಅಳಿದು ಹೋಗಿ, ಅವನವನ ನಡೆಯಿ೦ ದಲೂ, ಶೀಲದಿ೦ದಲೂ ಯಾರೆಂಬುದನ್ನು ನಿರ್ಧರಿಸಬೇಕಾಗಿದೆ ೦ದು ಹೇಳಿದ್ದಾನೆ. ಮೇಲಣ ಧರ್ಮ ಹಾಗೂ ಸರ್ಪರೂಪಿಯಾದ ನಹುಷ ರಾಜನ ವಾದವಿವಾದದಿಂದ ಭಾರತಕಾಲಿನ ಸ್ಥಿತಿಯ ಚಿತ್ರವು ಕಣ್ಮುಂದೆ ನಿಲ್ಲುವಂತಿದೆ. ಉದ್ಯೋಗ ಭೇದಗಳು:--ಆರ್ಯರು ವರ್ಣ ಬೀಜಗಳಿಗೆ ಎಷ್ಟು ಪ್ರಾಶಸ್ತ್ರವನ್ನು ಕೊಡುತ್ತಿದ್ದರೋ, ಅಷ್ಟೇ ಉದ್ಯೋಗ ವ್ಯವಸಾ ಹಕ್ಕೂ ಕೊಡುತ್ತಿದ್ದದರಿಂದ, ಇಂತಿಂಥವರಿಗೆ ಇಂತಿಂತಹ ಉದ್ಯೋಗ