ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Y) ರಾಜ್ಯದ ಅಂಗಗಳು ೧೫೯ ದಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಸಭಿಕರ ಮುಂದೆ ತನ್ನ ಸಂದೇಹ ವನ್ನು ಮಂಡಿಸಿ, ಅವರ ಸನು ಮತಿಯ ೦ತೆ ನಡೆಯುತ್ತಿದ್ದನು. ಧರ್ಮ ಶಾಸ್ತ್ರದಂತೆ ರಾಜ್ಯವನ್ನು ಸಾಗಿಸದೆ ಇದ್ದ ದೊರೆಯನ್ನು ವಟ್ಟದಿಂದ ತಳ್ಳುವ ಅಧಿಕಾರವು ಖುಷಿಗಳಿಗೆ ಇದ್ದಿತು. ಇದಕ್ಕೆ ವೇನರಾ ಜನ ದೃಪ್ಯಾ೦ತವೇ ಕು. ಋಷಿಗಳು ಉನ್ಮತ್ತನಾದ ಮೇನಕಾ ಜ ನನ್ನು ಕೊಂದು ತಮ್ಮ ತಪೋಬಲದಿಂದ ವೇನರಾ ಜನ ತೊಡೆಯಿಂದಲೇ ಮಗನನ್ನು ಹುಟ್ಟಿಸಿ, ಆತನಿಗೆ ಪಟ್ಟ ಕಟ್ಟಿದರು. ದೊರೆಯಾಗಲಿಕ್ಕೆ ಕ್ಷತ್ರಿಯನ ಹೊರತು ಬೇರೆಯವರಿಗೆ ಅಧಿಕಾರವಿಲ್ಲೆಂಬ ಕಲ್ಪನೆಯು ಪ್ರಾಚೀನ ಋಷಿಗಳಲ್ಲಿ ಎಷ್ಟು ಬೇರೂರಿಕೊಂಡಿತ್ತೆಂಬುದೂ, ಬ್ರಾಹ್ಮಣ ಋಷಿಗಳು ರಾಜ್ಯಭಾರದ ವಿಷಯದಲ್ಲಿ ಎಷ್ಟು ಅನಾಸಕ್ತರಾಗಿದ್ದ ರೆಂಬುದೂ, ಹೊತ್ತು ಬಂದಾಗ, ತೇಜಸ್ಸು ಖರ್ಚು ಮಾಡಿ ನ್ಯಾಯ ಸ್ಥಾಪನೆಗಾಗಿ ದುಷ್ಟರನ್ನು ದಂಡಿಸಲಿಕ್ಕೆ ಹೇ ಸುತ್ತಿರಲಿಲ್ಲವೆಂಬುದೂ ಈ ಕಥೆಯ ಮೇಲಿಂದ ನಿಷ್ಪನ್ನವಾಗುತ್ತದಲ್ಲವೇ! ಅರಸನು ಧರ್ಮರಿಂದ ರಾಜ್ಯ ನಡಿಸಿ, ಅ ಧರ್ಮ ಪ್ರವೃತ್ತರಾದವರನ್ನು ಶಾಸನಕ್ಕೆ ಗುರಿಮಾಡ ತಕ್ಕದ್ದು; ಮತ್ತು ರಾಜನು ವಡುವ ಈ ಕರ್ತವ್ಯಕ್ಕಾಗಿ ಪ್ರಜೆಗಳು ತಮ್ಮ ಭೂಮಿಯ ಹುಟ್ಟುವಳಿಯೊಳಗಿನ ಒಂದು ಹತ್ತಾ೦ಶ ಭಾಗ ವನ್ನೂ, ವ್ಯಾಪಾರದ ಹುಟ್ಟುವಳಿಯೊಳಗಿನ ಒಂದು ಐವತ್ತಾ೦ಶ ಭಾಗ ವನ್ನೂ ಕೊಡಬೇಕೆಂದು ನಿಯಮ ಮಾಡಿದ್ದರು. ರಾಜನು ಹೀಗೀಗೆ ಇರಲಿಕ್ಕೇ ಬೇಕು; ಪ್ರಜೆಗಳು ಹೀಗೀಗೆ ಇರಲಿಕ್ಕೆ ಬೇಕೆಂದು ಧರ್ಮ ಶಾಸ್ತ್ರದ ನಿರ್ಬ೦ಧವೇ ಇದ್ದುದರಿಂದ ಪ್ರಾಯ ಶಃ ಈ ಅನಾದಿಸಿದ್ಧವಾದ ನಿಯಮವನ್ನು ಯಾರೂ ಮೀರಿ ನ.ಯುತ್ತಿರಲಿಲ್ಲ; ಈ ಮೇರೆಗೆ ಪ್ರಜೆ ಗಳಿಗೂ ರಾಜರಿಗೂ ದೇವರೇ ಒಂದು ವಿಧರ ಕರ್ತವ್ಯದ ಕಗ್ಗಂಟನ್ನು ಹಾಕಿಟ್ಟನು; ಮತ್ತು ಅದನ್ನು ಅವರ ಕೊನೆಯ ತನಕ ನಡಿಸಿದರೆಂತಲೇ ಈ ಭಯ ತರು ಸುಖವಾಗಿರುತ್ತಿದ್ದರು. ರಾಜ್ಯದ ಅಂಗಗಳು:- ಪೂರ್ವ ಕಾಲದಲ್ಲಿ ನೆರೆ ಹೊರೆಯ ರಾಜರು ಗಳಲ್ಲಿ ಬಹಳ ದ್ವೇಷವಿರುತ್ತಿದ್ದುದರಿಂದ ಯಾವ ಹೊತ್ತಿಗೆ ಸರ ರಾಯರ ದಾಳಿಯು ಬ೦ದೀತೆಂಬುದು ಗೊತ್ತಿರಲಿಲ್ಲ; ಇ೦ಥ ಪ್ರಸ೦ಗದೊಳಗೆ 00