ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೪ ಭಾರತೀಯರ ಇತಿಹಾಸವು. ವಳಿಯ ಭಾಗದೊಳಗಿನ ಒಂದು ಹದಿನೆಂಟಾ ೦ಶ ಭಾಗವನ್ನೆ ತ್ಯಬೇಕೆಂದು ನಿಯಮವಿದ್ದರೂ, ಅದು ಮುಂದೆ ಬದಲಾಗಿ ಒಂದು ಅರಾ೦ಶವೇ ಸ್ಥಿರ ವಾಯಿತು. ಭೂ ಸ್ವಾಮಿತ್ವವು ರೈ ತರದಿದ್ದು, ಅರಸನಿಗೆ ಪ್ರಜೆಗಳ ಸಂರಕ್ಷಣೆಗಾಗಿಯೆ೦ದು ಒ೦ದು ಆರಾ೦ಶ ಕರವನ್ನು ಕೊಟ್ಟ ರಾಯಿತು. ಗೌಳಿಗರೂ, ಕುರುಬರೂ ತಮ್ಮ ದನಕರುಗಳಲ್ಲಿ ಒಂದು ಐವತ್ತಾ೦ಶ ಭಾಗವನ್ನು ರಾಜನಿಗೆ ಕೊಡಬೇಕಾಗುತ್ತಿತ್ತು; ಹೀಗೆ ಇರುವದರಿಂದ ರಾಜಧಾನಿಯಲ್ಲಿ ಕಾಳುಕಡಿಯ ದೊಡ್ಡ ದೊಡ್ಡ ಸಂಗ್ರಹಾಲಯಗಳೂ, ರನಕರುಗಳ ದಡ್ಡಿಗಳೂ ಇರುತ್ತಿದ್ದವು. ವರ್ತಕರ ಹಾಗೂ ಶಿಲ್ಪಿಗರ ಮೇಲೆಯೂ ಅವರವರ ಯೋಗ್ಯತೆಗೆಸರಿಯಾಗಿ ತೆರಿಗೆ ಇರುತ್ತಿತ್ತು; ಆದರೆ ಈ ತೆರಿಗೆಯ ೦ದರೆ ಬಹು ತರವಾಗಿ ಅವರಿಂದ ಸರಕಾರದ ಕೆಲಸವನ್ನು ಹತ್ತು ದಿವಸಕ್ಕೆ ೧ ದಿನ ಬಿಟ್ಟಿಯಾಗಿ ಮಾಡಿಸಿಕೊಳ್ಳುತ್ತಿದ್ದರು; ಆದರೂ, ಅದಕ್ಕಾಗಿ ಅವರಿಗೆ ತೊಂದರೆ ಕೊಡುತ್ತಿರಲಿಲ್ಲ. ರಾಜ್ಯವು ಯಾವು ದೊ೦ದು ಘೋರವಾದ ಬೇನೆಗಾಗಲಿ, ಕ್ಷಾಮ ಕಾಗಲಿ, ಯುದ್ಧಕ್ಕಾ ಗಲಿ ಈಡಾದರೆ, ರಾಜನು ಪ್ರಜಾ ಕ್ಷೇಮಕ್ಕಾಗಿ ಜನರಿಂದ ಹಣವೆತ್ತಿ, ಆ ಅಸತಿಯು ತೀರಿದ ಬಳಿಕ ತಿರಿಗಿ ಅವರವರ ಹಣವನ್ನು ತಿರಿಗಿ ಮುಟ್ಟಿ ಸುತ್ತಿದ್ದನು. ಇದಕ್ಕಾಗಿ ಎಲ್ಲರೂ ಜನರಿಗೆ ಪೀಡಿಸುತ್ತಿರಲಿಲ್ಲ. ಪ್ರಾಚೀನ ಕಾಲಕ್ಕೆ ಹೆದ್ದಾರಿಗಳಿದ್ದರಿಂದ, ವರ್ತಕರು ಗುಂಪುಗಟ್ಟಿ ಕೊ೦ಡು ತಮ್ಮ ಸರಕಲ್ಲ ಎತ್ತುಗಳ ಮೇಲೆ ಹೇರಿಕೊಂಡು ಹೋಗುವ ಬಳಿಕೆಯಿತ್ತು. ಇವರ ಮೇಲೆಯ, ಕೆಲಮಟ್ಟಿಗೆ ತೆರಿಗೆ. ಯಿರುತ್ತಿತ್ತು, ಅಲ್ಲದೆ ಉಪ್ಪು, ಅನೆ, ಬಂಗಾರ, ವಜ್ರ, ವೈಡೂರ್ಯ ಇವೆಲ್ಲವುಗಳು ರಾಜರ ಸ್ವಾಮಿ ತ್ವಕ್ಕೆ ಒಳಪಟ್ಟಿದ್ದವು. ಆದ್ದರಿಂದ ಇವು ಗಳ ವ್ಯವಸ್ಥೆಗಾಗಿ ರಾಜನು ಒಬ್ಬೊಬ್ಬ ಮಂತ್ರಿಗಳನ್ನು ನಿಯಮಿಸು ತಿದ್ದನು; ಇವುಗಳಿಂದ ರಾಜನಿಗೆ ಅಪಾರವಾದ ಹುಟ್ಟುವಳಿಯಾಗು ತಿತ್ತು. ಅನೆಗಳಿಲ್ಲದ ಅಡವಿಗಳಲ್ಲಿ ಸ್ವಚ್ಛಂದವಾಗಿ ದನಕರುಗಳನ್ನು ರೈತರಿಗೆ ಮೇಯಿಸಕೊಡುತ್ತಿದ್ದರು; ಕಟ್ಟಿಗೆ ಉರುವಲಿಗಳನ್ನು ತಂದು ತಮಗೆ ಬೇಕಾದಂತೆ ಉಪಯೋಗಿಸುತ್ತಿದ್ದರು; ಅಡವಿಗಳ ಮೇಲೆ ಯಾರ ಸ್ವಾಮಿತ್ವವೂ ಇರಲಿಲ್ಲ; ಜನತೆಯಿಂದ ಬರುವ ಕಂದಾಯ