ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮತ್ತೊಂದು ಪ್ರಚಂಡವಾದ ಕರೆಯು.

೧೭೫

ಯನ್ನಾಗಲಿ, ಮಾರ್ಪಡಿಸುವ೦ಧ ಕಾರ್ಯಗಳೆನೂ ಆಗಲಿಲ್ಲ. ಆರ್ಯ ಸಂಸ್ಕೃತಿ ವಿಕಾಸವಾಗುವ ಕಾರ್ಯಗಳೇನೂ ಈ ಕಾಲದಲ್ಲಿ ಒದಗದಿದ್ದರೂ, ಸಂಸ್ಕೃತವಿದ್ಯೆ ಪಾ೦ಡಿತ್ಯ, ಹಾಗೂ ಬ್ರಾಹ್ಮಣರ ವಿಚಾರ ಓಘಗಳು ಅಪ್ರತಿಹತವಾಗಿ ನಾಗಿದ್ದವು; ಎಲ್ಲಿ ನೋಡಿದರೂ, ಔಪನಿಷದ ವಿಚಾರಗಳೇ ಹಬ್ಬಿ ಹರಡಿಕೊಂಡು ಜನತೆಯ ಮನಸ್ಸಿನಲ್ಲಿ ಒಂದು ಬಗೆಯ ಬೌದ್ಧಿಕ- ಕ್ರಾಂತಿಯನ್ನು ಮಾಡತೊಡಗಿದ್ದರಿಂದ, ಈ ಕಾಲದ ಬೌದ್ಧಿಕ ಇತಿಹಾಸವೇ ಬಹುಮಟ್ಟಿಗೆ ಸಿಗುತ್ತದೆಯೇ ಹೊರ್ತು ರಾಜಕೀಯ ಇತಿಹಾಸ-ಪೋಷಕವಾದ ಹೆಜ್ಜೆಗಳು ಸ್ಪಷ್ಟವಾಗಿ ಮೂಡಿರುವದಿಲ್ಲ. ಈ ಕಾಲದ ಚರಿತ್ರೆಯು ಜನಾ೦ಗಗಳೊಳಗೆ ನಡೆದ ಯುದ್ಧಗಳ ನೆತ್ತರದಿಂದ ಕೆ೦ಪು ಒಡೆಯದೆ, ಬುದ್ಧಿಯ ಬೆಳಿಗೆಯನ್ನು ತೋರ್ಪಡಿಸುವಂಧ ಹೊಸ ಹೊಸ ಧಾರ್ಮಿಕ ವಿಚಾರಗಳಿ೦ದಲೂ, ನವೀನವಾದ ಸಂಪ್ರದಾಯಗಳಿಂದಲೂ, ಕಲಾ ಕೌಶಲ್ಯದ ಬೆಳುವಳಿಗೆಯ ಕ೦ಪಿನಿಂದಲೂ ಮನೋರಂಜಕವಾದ ಚಟುವಟಿಕೆಗಳಿ೦ದಲೂ ಪೆಂಪು ಒಡೆದಿದೆ.

ಮತ್ತೊಂದು ಪ್ರಚಂಡವಾದ ತೆರೆಯು:-ಭಾರತೀಯುದ್ಧದಿ೦ದ ಬಹುಕಾಲ ಜನಾ೦ಗದ ಸ್ಥಿತಿಯು ಕಕ್ಕಾಬಿಕ್ಕಿಯಾಗಿತ್ತಷ್ಟೇ? ಇ೦ಧ ಸಮಾಜವನ್ನು ಒ೦ದೊ೦ದು ಬೇರೆ ಬೇರೆ ವಿಚಾರಗಳಿಂದ ಧರ್ಮದಲ್ಲಿ ಪ್ರವರ್ತಿಸುವ೦ಥದೊ೦ದು ಪ್ರಚ೦ಡ ಸ೦ಘಟನಕಾರ್ಯವು ಈ ಕಾಲದೊಳಗೆ ನಡೆಯಿತು. ಅದೇ ತಾನೇ ಮಹಾಭಾರತ ವೀರನಾದ ಭಗವಾನ್ ಶ್ರೀಕೃಷ್ಣನು ತನ್ನ ಅವತಾರ ಸಮಾಪ್ತಿ ಮಾಡಿ, ಜಗತ್ತಿನ ರಂಗಸ್ಥಳದಿಂದ ಮಾಯವಾಗಿದ್ದನು; ಹಿಂದೂಧರ್ಮದೊಳಗೆ ಜ್ಞಾನಮಾರ್ಗ, ಭಕ್ತಿ ಮಾರ್ಗ ಅವೆರಡರಲ್ಲಿ ವಾದ ನಡೆದಿತ್ತು; ಇದು ವರೆಗೆ ಹಿಂದೂಧರ್ಮದೊಳಗೆ ಶ್ರೀಕೃಷ್ಣನಂಧ ಅವತಾರಿಕ ಪುರುಷರನ್ನು ಉಪಾಸ್ಯ- ದೇವತೆಯೆ೦ದಿಟ್ಟುಕೊಂಡು ನಡೆಯುವ ಮತಗಳಾವೂ ಇರಲಿಲ್ಲ. ಜನರಲ್ಲಿ ಭಕ್ತಿಯಿತ್ತು; ಜ್ಞಾನವಿತ್ತು; ಆದರೂ ಒಬ್ಬ ವಿಭೂತಿಪುರುಷನನ್ನು ಆರಾಧ್ಯ ದೇವತೆಯನ್ನಾಗಿಟ್ಟು ಕೊಂಡಿರುವಸಂಪ್ರದಾಯ ಭೇದಗಳು ಇರಲಿಲ್ಲ; ಉಪನಿಷತ್ಕಾಲವು ಜ್ಞಾನಯುಗವು;