ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜೈನಮತ. ೧೭೬ ಹಣ್ಣು ಆ ಕಾಲಕ್ಕೆ ಸಿಗದಿದ್ದರೆ, ವೈದಿಕ ಧರ್ಮವು ಉಳಿಯುತ್ತಿರಲಿಲ್ಲ. ಭಾಗವತ ಧರ್ಮಕ ವೈದಿಕ ಧರ್ಮಕ್ಕೂ ಈ ವಿಧದ ಜೀವಾಳ ಸಂಬಂಧವಿದೆ. ಜೈನ ಬೌದ್ಧ ಮತಗಳು ಆರ್ಯಧರ್ಮವೆಂಬ ವೃಕ್ಷಕ್ಕೆ ಬಿಟ್ಟ ಮ ಘಮಘಿಸುವ ಹೂವುಗಳಂತಿವೆ. ಆದುದರಿಂದಲೇ ಜೈನ ಬೌದ್ಧ ಮತಗಳು ಆರ್ಯಧರ್ಮದ ಬೌದ್ಧಿಕ ಮಕ್ಕಳೆ೦ದೆನ್ನು ವದು. ನಾವು ಹೇಳ ತೊಡಗಿರುವ ಹಿಂದೂ ಜನಾ೦ಗಗಳೊಳಗಿನ ಈ ಮ ರು ಮತಗಳ ಅದಿಗರು ಕ್ಷತ್ರಿಯ ರಾಜಪುತ್ರರೇ ಆಗಿರುವರೆಂಬುದು ವಿಶೇಷ ಭಾರ ವಣೆಯ ಸಂಗತಿಯು; ಇದರ ಮೇಲಿಂದ ಈ ಕಾಲಕ್ಕೆ ಧರ್ಮ ನ್ಯಾಸ ನೆಯ ಕಾರ್ಯವು ಕ್ಷತ್ರಿಯರ ಕತೆಗೆ ಹೇಗೆ ಬ೦ತೆ೦ಬುದು ತಿಳಿ ಯುವರು. ಜೈನಮತವು:- ಆರ್ಯ ಜನಾ೦ಗದೊಳಗೆ ಹುಟ್ಟಿ ಬಾ ೪ ಕೊ೦ಡಿ ರುವ ಅನೇಕ ಪುರಾಣ ಮತಗಳಲ್ಲಿ ಜೈನಮತವೊಂದು ಅತಿ ಪ್ರಾಚೀನ ಮತವಾಗಿದೆ; ಆದರೂ ಈ ಬಗ್ಗೆ ಅವರಲ್ಲಿ ಇಷ್ಟು ಮಟ್ಟಿಗೆ ಪ್ರಾಚೀನ ಗ್ರಂಥಗಳಾವೂ ದೊರೆಯುವದಿಲ್ಲ. ತಮ್ಮ ಮತ ಪ್ರವರ್ತಕರಾದವರು ೨೪ ಮಂದಿ ತೀರ್ಥ೦ಕರರೆಂದು ಜೈನರು ಬಗೆಯು ತ್ತಾರೆ. ಪಾರ್ಶ್ವನಾಥ ಸ್ವಾಮಿಯೇ ಜೈನಮತದ ಆದಿ ಗುರು; ಮುಖ್ಯವಾಗಿ ಮಹಾವೀರ ಸ್ವಾಮಿಯು ಜೈನಮತದ ಕೊನೆಯ ದೇವದೂತನು; ವಿದೇಹನಗರ ನೆರೆ ಯಲ್ಲಿರುವ ವೈಶಾಲಿಲಿಚ್ಛವಿ ಎಂಬ ಚಿಕ್ಕ ರಾಜಮನೆತನದಲ್ಲಿ ಶ್ರೀಮಹಾ ವೀರನು ಜನಿಸಿದನು; ಈತನ ವಂಶದ ಹೆಸರು ಜ್ಞಾತೃಕ ಅಥವಾ ಜ್ಞಾತ ಪುತ್ರ; ಚಿಕ್ಕವನಿರುವಾಗಲೇ ಶ್ರೀ ಮಹಾವೀರಸ್ವಾಮಿಯು ಸಂಸಾರ ವನ್ನು ಬಿಟ್ಟು, ಪಾರಸನಾಥಜಿಯವರ ಸಂಪ್ರದಾಯಕ್ಕೆ ಸೇರಿಕೊಂಡು, ಅದರಲ್ಲಿಯೇ ಮು೦ರಾಳಾದ್ದರಿಂದ, ಶಿಷ್ಯರಿಂದ ಅವನಿಗೆ ಮಹಾವೀರ, ಜಿನ, ವರ್ಧಮಾನ ಹೀಗೆ ಬೇರೆ ಬೇರೆ ಹೆಸರುಗಳನ್ನು ಕೊಟ್ಟರು. ಮಹಾ ವೀರದೇವನು ಮುದುಕನಿರುವಾಗ ಬುದ್ಧದೇವನುಹು ಡುಗನಿದ್ದ ನೆಂದು ಕೆಲವರ ಊಹೆ, ಮಹಾವೀರದೇವನ ನಿರ್ವಾಣಕಾಲ ಕ್ರಿ.ಶ.ಪೂ. ೫೨೭ ಎಂದು ಸಿದ್ಧಾಂತ. ಜೈನರಲ್ಲಿ ಶ್ವೇತಾಂಬರ, ದಿಗಂಬರ ಎಂಬೆರಡು ಪ೦ಗಡಗಳಿವೆ; ಶ್ವೇತಾಂಬರರು ಉತ್ತರಹಿ೦ದು ಸ್ಥಾನದಲ್ಲಿ ಹೆಚ್ಚಿಗಿದ್ದು