ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇತಿಹಾಸವು. ಯುವದು. ರಾಷ್ಟ್ರೀಯ ಅಧವಾ ರಾಜನೀತಿವೃಷ್ಟಿಯಿಂದ ಜೈನಮತ ದಿಂದ ಈ ಬಗೆಯಾದ ಹಾನಿ ತಟ್ಟಿದರೂ, ಕರುಣೆಯ ದೃಷ್ಟಿಯನ್ನು ವ್ಯಾಪಕಗೊಳಿಸಿ, ಜೈನರು ಒಂದು ಪಂಗಡದ ಮಾನವಸ್ವಭಾವವನ್ನು ಹಣ್ಣು ಗೊಳಿಸಲಿಕ್ಕೆ ಮಾಡಿದ ಯತ್ನವೇನೂ ಸಾಮಾನ್ಯವಾದ ಲಾಭ ವಲ್ಲ; ಆದರೆ, ಒಂದೆಡೆಯಿಂದ ಮನುಷ್ಯ ಸ್ವಭಾವವನ್ನು ದಯೆಯಿ೦ದ ತು೦ಬಬೇಕೆಂದು ಮಾಡಿದ ಯತ್ನ ದೊಳಗೆ ಮೈ ಮರೆತು ಜೈನರು ತಮ್ಮ ಮೈ ಮೇಲಿನ ಮಲಿನವಾದ ಬಟ್ಟೆಗಳನ್ನು ಸಹ ತೊಳೆಯಲಿಕ್ಕೆ ಹಿಂಜರಿ ದಿದ್ದು ದಯೆಯ ಪರಾಕಾಷ್ಟೆಯೆಂತಲೇ ಹೇಳಲಿಕ್ಕೆ ಬೇಕು. - ಜೈನರ ನಡೆನುಡಿಗಳು:- ಅಹಿ೦ಸೆಯ ಈ ಕಲ್ಪನೆಯು ಅಳತೆ ಗೆಟ್ಟು, ತಲೆ ಬೋಳಿಸದೆ, ತಲೆಯ ಮೇಲಿನ ಕೂದಲುಗಳನ್ನು ಕಿತ್ತು ಕೊಳ್ಳುವ ಪದ್ಧತಿಯು ಪ್ರಾರಂಭವಾಯಿತು. ಮೈ ಮೇಲೆ ಹುಳಹುಪ್ಪಡಿ ಗಳು ಓಡಾಡ ತೊಡಗಿದರೆ, ಅವುಗಳಿಗೆ ಧಕ್ಕೆ ತಗಲಿಸದೆ, ಹಾಗೇ ಓಡಾಡಗೊಡುವ ಮಟ್ಟಿಗೂ ಸುಮ್ಮನಿರುತ್ತಿದ್ದರು. ನಡೆಯುವಾಗ್ಗೆ ತಮ್ಮ ಕಾಲೆಳಗೆ ಇರುವೆ ಮುಂತಾದ ಪ್ರಾಣಿಗಳು ನಾಯ ಬಾರದೆಂದು ಅತ್ಯಂತ ಜಾಗರೂಕತೆಯಿಂದ ಕಣ್ಣಲ್ಲಿ ಕಣ್ಣಿಟ್ಟು, ನೋ ಡಿ ಕೊಂಡು ಹೂವಿನ ಹಾಸಿಗೆಯ ಮೇಲೆ ನಡೆಯುವಷ್ಟು ಮೆಲ್ಲಗೆ ನಡೆಯುತ್ತಿದ್ದರು. ಯಾವ ಠಾವಿನಲ್ಲಾದರೂ ಕುಳ್ಳಿರಬೇಕಾದರೆ ತಮ್ಮ ಕೈಯಲ್ಲಿರುವ ಬಟ್ಟೆಯಿಂದ ಆ ಸ್ಥಳವನ್ನು ಝಾಡಿಸಿ, ಕುಳಿತುಕೊಳ್ಳುತ್ತಿದ್ದರು. ರಾತ್ರಿ ದೀಪ ಹಚ್ಚಿದರೆ, ದೀಪದಿಂದ ಪ್ರಾಣಿಗಳು ಸಾಯುವನೆಂದು ರಾತ್ರೆಯ ವೇಳೆ ಜೈನರು ದೀಪವನ್ನು ಹಚ್ಚುತ್ತಿರಲಿಲ್ಲ. ಆದುದರಿಂದ ಹಗಲು ಹೊತ್ತೇ ಅವರು ತಮ್ಮ ರಾತ್ರಿಯ ಊಟವನ್ನು ತೀರಿಸಿಕೊಳ್ಳುತ್ತಿ ದ್ದರು. ಕಿವಿಯಿ೦ದ ಇ೦ ಪಾದ ಸ್ವರವನ್ನು ಕೇಳದೆ, ಕಣ್ಣಿನಿಂದ ಸೊಗ ಸಿನ ನೋಟವನ್ನು ನೋಡದೆ, ನಾಲಿಗೆಯಿಂದ ಸವಿಯನ್ನ ವನ್ನು ಸವಿ ಯದೆ ಸಂಪೂರ್ಣ ವಿರಕ್ತರಾಗಿದ್ದುಕೊಂಡು ಹರಯೋಗವನ್ನು ಸಾಧಿ ಸುತ್ತಿದ್ದರು; ಮತ್ತು ತಾವು ಮೋಕ್ಷಕ್ಕೆ ಪಾತ್ರವಾಗುವ ಪರಿಣತ ಸ್ಥಿತಿಗೆ ಮುಟ್ಟಿದ್ದು ತಮ್ಮ ತಮಗೆ ತಿಳಿದೊಡನೆ, ಏಕಾ೦ತಸ್ಥಳಕ್ಕೆ ಹೋಗಿ, ಅನ್ನ ನೀರಿಲ್ಲದೆ ಪ್ರಾಣ ಬಿಡುತ್ತಿದ್ದರು. ಇವು ಈಗ್ಯೂ ಜೈನರಲ್ಲಿ ಬಳ