ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭ ನೇ ಪ್ರಕರಣ. ಬೌದ್ದ ಕಾಲ. (ಕ್ರಿ. ಶ. ಪೂರ್ವ ೫ ೩೭-೩೦ ವರೆಗೆ) - ಸೀಮಾ ಪುರುಷರ ಕಾರ್ಯ:- ಈ ಕಾಲದಲ್ಲಿ ಗೌತಮ ಬುದ್ಧ ನಂಧ ಶಕಪುರುಷನು ಮೈ ದೊರಿ, ಜನತೆಯಲ್ಲಿ ವಿಲಕ್ಷಣವಾದ ವೈಚಾ ರಿಕ ಗಲಭೆಯ ನ್ನೆಬ್ಬಿಸಿ, ತನ್ನ ದೆ೦ದು ಬೇರೆ ಪ೦ಥವನ್ನೆ ನಿರ್ಮಾಣ ಮಾಡಿದ್ದರಿಂದ ಈ ಕಾಲಕ್ಕೆ ಬೌದ್ಧ ಕಾಲವೆಂದು ಹೇಳುವದು೦ಟು. ರೈವೀಸ೦ಪತ್ತಿಯಿಂದ ಬೆಳಗುವ ಪುರುಷರು ಕಾಲಕ್ಕೆ ತಕ್ಕಂತೆ ನಡೆ ಯದೆ ತಾವು ಹೇಳಿದಂತೆ ಕಾಲವನ್ನು ತಿರುಗಿಸುವದುಂಟು. ಕಾಲ ವನ್ನೆ ಆಳುವ ಈ ಮಹಿಮಾಪುರುಷರ ಜನಾ೦ಗದ ಇತಿಹಾಸವನ್ನು ನಿರ್ಮಿಸಿ, ಅದಕ್ಕೆ ಹೊಸ ಹೊಸರಾದ ಚೈತನ್ಯದಿಂದ ಚಾಲನ ಕೊಡು ತಿರುವದರಿಂದ ಇವರಿಗೆ ಸೀಮಾ ಪುರುಷರೆಂದು ಹೆಸರು. ಈ ಸೀಮಾ ಪುರುಷರ ಚಾರಿತ್ರ್ಯವನ್ನು ನಾವು ಅಲ್ಲಲ್ಲಿ ಕಂಡು ಶೋ ಧಿಸಿದರೆ, ಜೇನು ಹುಟ್ಟಿಗೆ ಜೇನು ನೊಣಗಳು ಮುತ್ತಿರುವಂತೆ, ಜನಗಳೆಲ್ಲರೂ ಈ ಸಿನಿಮಾ ಪುರುಷರ ಸುತ್ತು ಮುತ್ತಿರುವದು ನಮಗೆ ಕಂಡು ಬರುತ್ತದೆ. ಈ ಸೀಮಾ ಪುರುಷರೆಂದರೆ, ವೈರಾಗ್ಯದ ತವರ್ಮ ನೆ; ಕಾರುಣ್ಯದ ಜೀವಂತ ಕಾವ್ಯ ಗಳು; ಪರಾರ್ಧಕ್ಕಾಗಿಯೇ ಜನ್ಮವೆತ್ತಿದ ಪುತ್ಥಳಿಗಳು; ಇ೦ಧವರು ಅವತರಿಸಿದೊಡನೆ ಪ್ರಸಂಡದೊಳಗಿನ ಮರುಳು ಪ್ರಾಣಿಗಳು ಹುಚ್ಚು ಹಿಡಿದ೦ತೆ ಮನೆಮಾರು, ಹೆ೦ಡಿರು ಮಕ್ಕಳು, ಆಸ್ತಿ ಪಾಸ್ತಿಯನ್ನೂ ನಾಲ ದ್ದಕ್ಕೆ ಅರಸೊತ್ತಿಗೆಯ ಸ್ನೇ ಎಡಗಾಲಿ ನಿ೦ಗೊದ್ದು ಈ ಸೀಮಾ ಪುರುಷ ರನ್ನು ಬೆನ್ನಟ್ಟು ವದರಲ್ಲೇನು ಸೋಜಿಗ ? ಇ೦ಥ ನೋಟವು ನಮಗೆ ಸೀಮಾಪುರುಷರು ಹುಟ್ಟಿದ ಕಾಲಕ್ಕೆ ಸಿಕ್ಕಿಯೇ ಸಿಕ್ಕುತ್ತದೆ. ಉಪ ನಿಷತ್ಕಾಲವನ್ನು ಒಳ ಹೊಕ್ಕು ನೋಡಿ! ರಾಮಾಯಣ ಕಾಲವನ್ನು