ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದವಂಶವ. ವಾಗಿರಲಿಲ್ಲ. ನಂದರು ಉನ್ಮತರ, ಕೂರರೂ ಆಗಿದ್ದರು. ಇವರಿಗೆ ನವನಂದರನ್ನು ವ ವಾಡಿಕೆಯುಂಟು. ಈ ರಾಜರ ವಿಷಯವಾಗಿ ಸಂಸ್ಕೃತದೊಳಗೆ ಮುದ್ರಾರಾಕ್ಷಸನೆಂಬುದೊಂದು ನಾಟಕವೇ ನಿರ್ಮಾ ಣವಾದುದನ್ನು ನೋಡಿದರೆ, ನಂದ ಹಾಗೂ ಮೌರ್ಯವಂಶದವರ ಅಳಿ ಕೆಯು ಪ್ರಜೆಗಳ ಮನಸಿನಲ್ಲಿ ಯಾವ ವಿಧವಾಗಿ ಪರಿಣಮಿಸಿರುವದೆಂಬು ದನ್ನು ಕಂಡು ಹಿಡಿಯಲಿಕ್ಕೆ ಅನುವು ದೊರೆಯುತ್ತದೆ. ನವನಂದರು ಹಾಗೂ ಮೌರ್ಯರ ವಿಷಯವಾಗಿ ವಿಶ್ವಸನೀಯವಾದ ಐತಿಹಾಸಿಕ ಸಂಗತಿಯು ದೊರೆಯದ್ದರಿಂದ ನಾವು ಮುದ್ರಾರಾಕ್ಷಸ ನಾಟಕದೊಳ ಗಿರುವ ಸಂಗತಿಯ ನೆ ಆಧಾರವಾಗಿಟ್ಟು ಕೊ೦ಡು ಮು೦ದೆ ನಾಗ ವದೇ ಯುಕ್ತವಾಗಿ ತೋರುತ್ತದೆ. ಪಾಟಲೀಪುತ್ರದಲ್ಲಿ ಸರ್ವಾರ್ಥ ಸಿದ್ದಿಯೆ೦ಬ ಅರಸನು ಪ್ರಜಾ ಕ್ಷೇಮ ಚಿಂತನೆಯಲ್ಲಿಯೆ ( ಆಸಕ ನಾಗಿ ರಾಜ್ಯವಾಳುತ್ತಿದ್ದನು. ಆತನಿಗೆ ಸುನ೦ದೆಯೆ೦ಬ ಪಟ್ಟದ ರಾಣಿಯೂ, ಮುರೆಯೆ೦ಬ ಗಾಡಿಗಾರ್ತಿಯ, ಆದ ಇಬ್ಬರು ಹೆಂಡಿರಿದ್ದರು. ಸುನಂ ದೆಗೆ ಒ೦ ಭತ್ತು ಮಕ್ಕಳು. ಮುರಾ ದೇವಿಗೆ ಮೌರ್ಯನೆಂಬೊ ಬ್ಬ ಸುಕುಮಾರ, ಸರ್ವಾರ್ಥ ಸಿದ್ಧಿಯ ನಂತರ ಹಿರಿಯವನಾದ ಮೌರ್ಯನೇ ಪಟ್ಟಕ್ಕೆ ಕುಳಿತು ರಾಜ್ಯದ ಸಾತ್ರಗಳನ್ನೆಲ್ಲ ತನ್ನ ಕೈಯಲ್ಲಿಟ್ಟು ಕೊ೦ಡು ಪ್ರಜಾ ರಂಜಕ ನಾಗಿಯ, ಎಲ್ಲರಿಗೆ ಅನುಕೂಲವಾ ಗಿಯ ಇದ್ದನ್ನು ನವನಂದರು ಚಿಕ್ಕವರಿದ್ದುದರಿಂದ ವಿದ್ಯಾಭ್ಯಾಸಕ್ಕಾಗಿ ಅಮಾತ್ಯ ರಾಕ್ಷಸ ನೆಂಬ ಸ್ವಾಮಿ ಭಕ್ತ ನಾದ ವಿದ್ಯಾವಂತನಿಗೆ ಅವರನ್ನೆಲ್ಲ ಒಪ್ಪಿಸಿದನು ಇತ್ತ ನವನಂದರು ವಿದ್ಯಾವಂತರಾಗಿಯ, ಬಲವಂತರಾಗಿಯೂ ಅಭಿ ವೃದ್ಧಿಗೆ ಬರುತ್ತಿರಲು,' ಮೌರ್ಯ ನಿಗೆ ಚಂದ್ರಗುಪ್ತನೇ ಮೊದಲಾದ ನೂರು ಮಕ್ಕಳು ಹುಟ್ಟಿದರು. ತೇಜಸ್ವಿಗಳೂ, ವೀರರೂ, ನಿರ್ಮಲರೂ, ಶೀಲಸಂಪನ್ನರೂ ಆದ ಮೌರ್ಯ ಹಾಗೂ ಮೌರ್ಯ ಮಕ್ಕಳಾದ ಚಂದ್ರ ಗುಪ್ತ ಅವರೇ ಮೊದಲಾದವರ ದೆಸೆಯಿ೦ದ ನ೦ದರಲ್ಲಿ ವೈರಭಾವ ವುಂಟಾಗಿ ಅವರನ್ನು ಹೇಗಾದರೂ ಮಾಡಿ ನಿರ್ನಾಮಗೊಳಿಸಬೇಕೆಂಬ ಹಂಚಿಕೆ ಮಾಡಿ, ಬೇಟೆಯ ನಿಮಿತ್ತ ಉದ್ಯಾನಕ್ಕೆ ಹೋಗಿ ಅಲ್ಲಿ ಒಂದೆರಡು ದಿನಗಳನ್ನು ವಿನೋದದಿಂದ ಕಳೆಯಬೇಕೆಂಬ ವಿಚಾರ