ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಾ ಸನದಿಯ ವರೆಗೆ ಪಯ?. ಬರಲು ಆ ಊರನ್ನು ಮುತ್ತಿ ವಶಮಾಡಿಕೊಂಡನು. ಇಲ್ಲಿಂದ ವ್ಯಾಸ ನದಿಯನ್ನು ರಾತ್ರಿ ಅದರಾಚೆಯ ಪ್ರದೇಶವನ್ನು ಗೆಲಿಯಬೇಕೆಂಬ ಉತ್ಸಾಹವು ಅಲೆಕ್ಸಾಂಡರನಲ್ಲಿ ಉಕ್ಕೇರಲು ಪ್ರಾರಂಭವಾದ ತು. ಕೈ ಹಾಕಿದಲ್ಲಿ ಭಗವಂತನು ತನಗೆ ಜಯ ಕೊಡುತ್ತಿರುವನೆ೦ಬ ಭಾವ ನೆಂಬ ಂದ ಪ್ರೇರಿತನಾದ್ದರಿಂದ ಅವನಿಗೆ ಹಿಂದಿರುಗಬೇಕೆನ್ನುವ ಕಲ್ಪ ನೆಯು ಸದೆ ರದಂ ತಾಯಿ ತು; ಇತ್ಯ ತನ್ನ ದ೦ಡಿನವರಲ್ಲಂತೂ ಮುಂದೆ ಸಾಗುವ ವಿಷಯದಲ್ಲಿ ಸಾಕಷ್ಟು ಹುರುವು ಕಂಡು ಬಾರದ್ಧ ರಿಂದ, ತನ್ನ ದ೦ಡಾಳುಗಳನ್ನೆಲ್ಲ ಒಕ್ಕತೆಯಲ್ಲಿ ಕಲೆಸಿ, ಇದುವರೆಗೆ ತಾವು ಮಾಡಿರುವ ಪರಾಕ್ರಮವನ್ನೂ, ಮಹಾ ಮಹಾ ರಾಜರನ್ನು ಗೆದ್ದಿ ರುವದನ್ನ ಮತ್ತು ಹೀಗೆ ಮುಂದೆ ಇಾಗಿದರೆ ತನಗೆ ಏಸಿಯ ಖಂಡ ದೊಳಗಿರುವ ಅಪಾರವಾದ ಸ೦ಪತ್ತಿಯು ಕೈ ಸೇರುವದಲ್ಲದೆ ಇನ್ನೂ ಹೆಚ್ಚು ವಿಸ್ತಾರವಾದ ರಾಜ್ಯವು ತಮ್ಮ ಸಾಮ್ರಾಜ್ಯಕ್ಕೆ ಲಭಿಸುವದೆಂಬು ದನ್ನೂ ಎಲ್ಲರ ಮನಸಿಗೆ ಹಿಡಿಯುವಂತೆ ಬಣ್ಣದ ಮಾತುಗಳಿಂದ ಬಣ್ಣಿಸಿ ಅವರನ್ನು ಹುರಿದುಂಬಿಸಲಿಕ್ಕೆ ಪ್ರಯತ್ನಿ ಸಿದನು ; ಆದರೆ ಎಲ್ಲವೂ ಬೊರ್ಗಲ್ಲ ಮೇಲೆ ಮಳೆ ಸುರಿದ೦ತಾಯಿತು ! ಕಡೆಗೆ ಅಲೆಕ್ಸಾಂಡರ ನಿಗೆ ವಿರೋಧಿಸಿ ಮಾತಾಡಲಿಕ್ಕೆಂದು ಅವನ ಸೇನಾಪತಿಯಾದ ಕೊ ಯಿ ನಾಸನು ಎದ್ದು ನಿಂತು “ ನಮ್ಮ ದಂಡಿನ ಸ್ಥಿತಿಯು ಈಗ ಬಹು ಹ ಸ್ಥಾಗಿದೆ; ದೇಶಾ೦ತರಕ್ಕೆ ಬಂದು ಬಹು ದಿನಗಳಾದ್ದರಿಂದ ಎಲ್ಲರೂ ತಮ್ಮ ತಮ್ಮ ಮನೆ ಕಾಣಲಿಕ್ಕೆ ಹಾತೊರೆಯುತ್ತಿರುವದರಿ೦ದ ಮು೦ದೆ ದಂಡೆತ್ತಿ ನಡೆಯುವದು ನಾಕೆಂ ” ದು ಪ್ರತಿಸ್ಪರ್ಧಿಯಾಗಿ ಮಾತನಾಡಿ ದನಲ್ಲದೆ, ಒಂದು ಬಗೆಯಿ೦ದ ಗಲಭೆಯನ್ನೆಬ್ಬಿಸಿದನು, ಕೊಯಿನಾ ಸನ ಮಾತಿನಿಂದ ಅನೇಕರಿಗೆ ಊರು ಮನೆ ಕಡೆಗಿನ ಹಳವಂಡವು ಹೆಚ್ಚಾ ಯಿ ತು. ತನ್ನ ಮಾತು ಯಾರಿಗೂ ಸರಿ ಕಾಣದ್ದರಿ೦ದ ಅಲೆಕ್ಸಾಂಡರನು ಮುಚ್ಚಿದ ತುಟಿ ಬಿಚ್ಚದೆ ತೆಪ್ಪಗೆ ತನ್ನ ಬಿಡಾರಕ್ಕೆ ಹೋಗಿ ಔದಾಸೀ ನ್ಯ ದಿಂದ ಮೂರು ದಿನಗಳವರೆಗೆ ತನ್ನ ಡೇರೆಯೊಳಗೆ ಹೊಕ್ಕವನು ಹೊರ ಬೀಳಲಿಲ್ಲ. ಮನಸಿನ ಔದಾಸೀನ್ಯವು ಕೊಂಚ ಕಡಿಮೆಯಾದ ನಂತರ, ಇನ್ನು ಮುಂದೆ ನಾಗು ವದು ಅನಾಧ್ಯವೆಂದು ಯೋಚನೆಗೈದು - 6