ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮ ನೇ ಪ್ರಕರಣ ಮೌರ್ಯ ರ ಆಳಿಕೆ. (ಕ್ರಿ. ಶ. ಪೂರ್ವ ೩೨೦- ೨ ೩ ವರೆಗೆ ) ಚಕ್ರವರ್ತಿ ಮೌರ್ಯ ಚಂದ್ರರು ಸ್ವನು:- ಸಿಕಂದರ ಶಹನು ಹಿಂದೂ ದೇಶಕ್ಕೆ ದಂಪೆಬ೦ದಾಗ, ಅವನ ನೆರವು ಪಡೆದು ಕಳಕೊ೦ಡ ತನ್ನ ರಾಜ್ಯವನ್ನು ತಿರಿಗಿ ಗಳಿಸಿ ಅಳಬೇಕೆಂದು ಚಂದ್ರ ಗು ಸ್ತನು ಎಷ್ಟೊಂದು ಸಾಹಸ ಪಟ್ಟ ರೂ ಹೊಳ್ಳಾಯಿ ತು. ಮನುಷ್ಯನು ಕೆಲಸ ಸಾಧಿಸಲಿಕ್ಕೆ ಕಾಲನಿರೀಕ್ಷಣೆಯೋಂದು ಅವಶ್ಯವಾದ ನಾ ಧನ ನಾ ಗಿದೆ; ಆಗ ಎಷ್ಟು ಪ್ರಯತ್ನಿಸಿದರೂ ಕೈ ಸೇರದ ಕಾರ್ಯವು ಇದೀಗ ಚಾಣಕ್ಯರ ಕೃಪೆಯಿ೦ದಲೂ, ಮಹಿಮೆಯಿಂದಲೂ ಚಂದ್ರ ಗು ಸ್ತ್ರನಿಗೆ ಸಾಧ್ಯವಾಯಿತು. ಇದುವೇ ದೈ ವರಾಟವೆಂ ಬುರು. ಯುದ್ಧದ ಗೊಂದಲ ಮುಗಿದು ಎಲ್ಲೆಡೆಯಲ್ಲಿ ಶಾಂತಿ ಸಮಾಧಾನಗಳು ನೆಲಗೊ೦ಡನ೦ತರ ಹಿಡಿದ ಕಾಯ ವು ಕೊನೆಗ೦ಡಿತೆ೦ಬುವ ಮೇಲಾದ ಉಬ್ಬಿನಿ೦ದ ಆರ್ಯ ಚಾಣಕ್ಯರು ಹಿರಿಹಿರಿ ಹಿಗ್ಗಿದವರಾಗಿ ಎಲ್ಲ ನಾಮ೦ತ ರಾಜರಿಗೆ ಚಂದ್ರಗುಪ್ತನನ್ನು ಪಟ್ಟಗಟ್ಟುವ ಬಗ್ಗೆ ತಿಳಿಸಿ, ಇತ್ತ ಪಟ್ಟಾಭಿಷೇಕದ ಸಿದ್ಧತೆಯನ್ನು ನಡೆಸಿದರು. ಚಾಣಕ್ಯರ ವಿಷಯ ದಲ್ಲಿ ಚಂದ್ರಗು ನಲ್ಲಿಯೂ, ಅವನ ಪಕ್ಷದವರಾದ ಸರದಾರರಲ್ಲಿಯೂ, ಪ್ರೀತಿವಿಶ್ವಾಸಗಳು ತುಂಬಿ ಹಿಡಿಸಲಾರದೆ ಹೆಕ್ಕಳಿಸುತ್ತಿದ್ದವು. ಪಟ್ಟಾಭಿ. ಸೆಕದ ಮ೦ಗಲ ಸಮಯ ವು ಸಮೀಪಿಸಲು, ಸಾಮಂತರಾಜರು ತಮ್ಮ ತಮ್ಮ ದ೦ಡುದಳ ದೊಡನೆ ಬಂದು ತಲ್ಪಿದರು. ರಾಜ್ಯದಲ್ಲೆಲ್ಲ ಆನಂದ ಸಾಮ್ರಾಜ್ಯವೇ ರೂಪುಗೊಂಡು ಕೆಲದಿನ ಆಳುತ್ತಿದ್ದಿತು. ಬಹು ವಿಜೃಂಭಣೆಯಿ೦ದ ಚ೦ದ್ರಗು ಸ್ವನಿಗೆ ಪಟ್ಟ ನಾಯಿ ತು. ದೈವಗೇಡಿ.