ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨೨ ಭಾರತೀಯರ ಇತಿಹಾಸವು. ಸಾರ್ಧಕ ಮಾಡಿಕೊಳ್ಳಬೇಕೆಂಬ ಹಂಬಲವು ಅವನಲ್ಲಿ ತಲೆ ದೋರಿತು. ಆಗ ಯುವರಾಜನಾದ ಬಿಂದು ನಾ ರನಿಗೆ ರಾಜ್ಯ ಭಾರವನ್ನೊಪ್ಪಿಸಿ, ತಾನು ಜೈನಮತವನ್ನು ಸೇರಿ, ಅಕಾಲಕ್ಕೆ ಪ್ರಸಿದ್ಧಿ ಪಡೆದಿರುವ ಭದ್ರ ಬಾಹುವೆ೦ಬ ಜೈನಾ ಡಾರ್ಯರನ್ನು ಹಿಂಬಾಲಿಸಿದನು. ಈ ಸಮಯಕ್ಕೆ ಉತ್ತರಹಿ೦ದು ನ್ಯಾನದೊಳಗೆ ಭೀಷಣವಾದ ಕ್ಷಾಮವುಂಟಾಗಲು, ಭದ್ರ ಬಾಹು ಮುನಿಗಳು ತಮ್ಮ ೧೨ ಸಾವಿರ ಜೈನ ಶಿಷ್ಯರೊಡನೆ ದಕ್ಷಿಣಕ್ಕೆ ಸಾಗಿದರು. ಈ ಸಂಘದೊಳಗೆ ಚಂದ್ರಗುಪ್ತನೂ ಇದ್ದನು. ತನ್ನ ಗುರು ಗಳ ಸಂಗಡ ತಂದ್ರಗುಪ್ತನು ಮೈಸೂರ ಸೀಮೆಯ ವರೆಗೆ ಹೋದ ಬಳಿಕ ಶ್ರವಣ ಬೆಳ ಗುಳದೊಳಗೆ ಭದ್ರ ಬಾಹು ಮುನಿಗಳು ಬಂದು, ಅಲ್ಲೊಂದು ಬಸದಿಯನ್ನು ಕಟ್ಟಿ ಕೊ೦ಡು ಇರುತಿರಲು, ಅವರಿಗೆ ಅವ ಸಾನ ಕಾಲವು ಪ್ರಾಪ್ತವಾಯಿತು. ಗುರುಗಳು ದೇಹವಿಟ್ಟ ನಂತರ ಚಂದ್ರಗುಪ್ತನು ೧೨ ವರ್ಷ ಕಾಲ ನಾ ಮಾನ್ಯ ಸನ್ಯಾಸಿಯ೦ತೆ ತವಸ್ಸು ಮಾಡುತ್ತಿದ್ದು ಮುಂದೆ ಸಲ್ಲೇಖನವೆಂಬ ಉಪವಾಸವೃತಗೈದು ಕ್ರಿ. ಶ. ಪೂ. ೨೯೭ ರಲ್ಲಿ ಮರ್ತ್ಯ ಶರೀರವನ್ನು ತೊಲಗಿ ಹೋದನು. ಶ್ರವಣಬೆಳ ಗುಳದ ಚಿಕ್ಕ ಬೆಟ್ಟದ ಮೇಲೆ ಈ ನ್ಯೂ ಚಂದ್ರಗುಪ್ತನ ಬಸ್ತಿ ಎ೦ಬ ಜಿನಾಲಯವನ್ನೂ, ಭದ್ರಬಾಹುವಿನ ಗುಹೆಯನ್ನೂ ಕಾಣಬಹುದು. ಚಂದ್ರಗುಪ್ತನ ರಾಜಧಾನಿ, ಅರಮನೆ:- ಚಂದ್ರಗುಪ್ತನು ರಾಜ್ಯಭಾರ ಕ್ರಮವನ್ನು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಹೇಳಿರುವಂ ತಯೇ ನವೆಂ ಸಿದ್ದನು. ರಾಜಧಾನಿಯಾದ ಪಾಟಲಿಪುತ್ರವು ಶೋ ಣ ನದಿಯ ಉತ್ತರ ದಂಡೆಗೆ ೯ ಮೈಲುಗಳ ವರೆಗೆ ಹರಡಿಕೊ೦ಡ ಒ೦ದು ವಿಶಾಲ ಪಟ್ಟಣವಾಗಿತ್ತು. ಪಟ್ಟಣ ಸುತ್ತಲೂ ಮರಗಟ್ಟಿ ಗೆಯಿಂದ ಮಾಡಿದ ಕೋಟೆ ಗೋಡೆಗಳಿದ್ದು, ಕೋಟೆಗೆ ೬೪ ಬಾಗಿಲುಗಳೂ, ೫೭೦ ಕೊತ್ತಳಗಳೂ ಮೆರೆಯುತ್ತಿದ್ದವು. ಕೋಟೆಯ ಹೊರ ಬದಿಗೆ ಪರ ಶತ್ರುಗಳು ಸುಲಭವಾಗಿ ಬರ ಬಾರದೆಂದು ಯಾವಾಗಲೂ ನೀರಿ ನಿಂದ ತುಂಬಿರುವದೊಂದು ಆಳವಾದ ಅಗಳ ತವಿದ್ದಿತು. ಅರಮನೆಯ ಲ್ಲವೂ ಕಟ್ಟಿಗೆಯ ದಿದ್ದು, ಕ೦ಬಗಳ ಮೇಲೆ ಚಿನ್ನ ಬೆಳ್ಳಿಯ ಚಿತ್ರಗಳು ಕ೦ಗೊಳಿಸುತ್ತಿದ್ದವು. ಅರಮನೆಯಲ್ಲಿರುವ ಚಿತ್ರದ ಕೈಗಾರಿಕೆಯೆಲ್ಲವೂ