ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಶೋಕ ಚಕ್ರವರ್ತಿಯ ರಾಜನೀಶಿ. ೨೨೯ ಸಲ ಅ ಶೋಕನು ಅ೦ದದ್ದು ( ಕಳೆದ ಹಲವು ವರ್ಷಗಳಲ್ಲಿ ಪ್ರಜೆ ಗಳ ಕ್ಷೇಮ ಸಮಾಚಾರವನ್ನು ಕೇಳಿಕೊಂಡು, ಅವರ ಹಿತಕ್ಕಾಗಿ ಹೆಣಗಿರಲಿಲ್ಲ. ಆದರೆ ಇಂದು ಮೊದಲು ನಾನು ಆಟ ನೋಟ, ಊಟ 'ಈಡಿಗೆ, ವಿಲಾಸ ನಿದ್ರೆ, ಕಾರ್ಯಕಲಾಪ ಮೊದಲಾದವುಗಳಲ್ಲಿ ತೊಡ ಗಿರುವದನ್ನು ಎಣಿಸದೆ ಅಧಿಕಾರಿಗಳು ಬೇಕಾದ ಕಾರ್ಯಕ್ಕಾಗಿ ನಾನಿ ದೈಡೆಯಲ್ಲಿ ಬರಬಹುದು. ಪ್ರಜೆಗಳ ಕಾರ್ಯಕ್ಕಾಗಿ ನಾನು ಯಾವಾ ಗಲೂ ಸಿದ್ಧನಿರುವೆ.” ಜಗತ್ತಿನಲ್ಲಿ ಇದುವರೆಗೆ ರಾಜ್ಯವಾಳಿ ಹೋದ ಯಾವ ರಾಜರ ಹೃದಯದಲ್ಲಿಯೂ ಪ್ರಿಯದರ್ಶಿಯಾದ ಅಶೋಕನನ್ನು ಪ್ರಜೆಗಳ ಬಗ್ಗೆ ಕರ್ತವ್ಯ ಜಾಗೃತಿಯ ಜ್ಯೋತಿಯು ಉರಿಯುತ್ತಿದ್ದುದು ನೋಡಲು ಶಿಗು ವದು ದುರ್ಲಭ; ನಾಲದುದಕ್ಕೆ ನಮಗೆ ರಾಮ ಚಂದ್ರ, ಹರಿಶ್ಚಂದ್ರ, ಧರ್ಮರಾಜನಂತಹ ಒ೦ದೆರಡು ಉದಾಹರಣೆ ಗಳು ಸಿಕ್ಕುತ್ತವೆ. ಅಶೋಕನು ತನ್ನ ರಾಜ್ಯದೊಳಗೆ ಅಲ್ಲಲ್ಲಿ ( ತಾಯಿ ತಂದೆಗಳ ಮಾತು ಕೇಳತಕ್ಕದ್ದು, ಶಿಷ್ಯನು ಗುರುವಿನೊಡನೆ ವಿನೀತ ನಾಗಿ ನಡೆಯ ಕದ್ದು ; ಅಲ್ಲದೆ ಸೇವಕರನ್ನು ಅಕ್ಕರೆಯಿಂದ ನೋಡಿ ಕೊಳ್ಳತಕ್ಕದ್ದು. ದಾನ ಧರ್ಮವನ್ನಾಚರಿಸತಕ್ಕದ್ದು, ಪರ ಧರ್ಮದಲ್ಲಿ ಆದರವಿಡ ತಕ್ಕದ್ದು." ಎಂದು ಮುಂತಾಗಿ ಪ್ರಜೆಗಳ ಶಿಕ್ಷಣಕ್ಕಾಗಿ ಉನ್ನ ತವಿಳ ರಗಳ ನ್ನೊಡಗೊಂಡ ಬೊ ಧವಚನಗಳನ್ನು ಬಂಡೆಗಲ್ಲು ಗಳ ಮೇಲೆ ತ್ರಿಸಿದನು.* ದಾರಿಕಾರರ ದೆಸೆಯಿಂದ ರಾಜ ಮಾರ್ಗ ದೊ ಳಗೆ ಭಾವಿ, ಛತ್ರಗಳನ್ನು ಇಡಿಸಿದ್ದು, ನಡೆಯುವಾಗ್ಗೆ ಅವರಿಗೆ ಬಿಸಿಲು ತಾಕ ಬಾರದೆಂದು ಇಬ್ಬದಿಗೆ ಮಾವು ಹಾಗೂ ಆಲದ ಮರಗಳನ್ನು ಹಚ್ಚಿ ಸಿದನು. ಪ್ರಾಣಿಗಳಿಗಾಗಿಯ, ಮನುಷ್ಯರಿಗಾಗಿಯ ಆಸ್ಪತ್ರೆಗಳನ್ನು ಇಟ್ಟಿದ್ದ ನೆಂಬುದು ಗೊತ್ತಾಗುತ್ತದೆ. ಐದೈದು ವರ್ಷಕ್ಕೊಮ್ಮೆ ತನ್ನ ವರಿಷ್ಟ ಅಧಿಕಾರಿಗಳನ್ನು ತಾಲೂಕಿನ ಸ್ಥಿತಿಗತಿಗಳನ್ನು ನೋಡಿಕೊ೦ಡು ಬರಲಿಕ್ಕೆ ಕಳಿಸುತ್ತಿದ್ದನು. ಇದರಲ್ಲಿ ಪ್ರಜೆಗಳ ಗೋಳು ಕೇಳಿಕೊಳ್ಳು

  • ಈ ಕಲ್ಲುಗಳು ನಿಜಾಂ ಹೈದರಾಬಾದ ಸೇವೆಯಲ್ಲಿರುವ ವಸ್ತಿ ಎಂಬ ಯಾ ಮೈಸೂರ ಪ್ರಾಂತದೊಳಗಿನ ಮೊಳಕಾಲ್ಮುರು ತಾಲೂಕಿನಲ್ಲಿ ಯಾ ಇತ್ತೀಚೆ ದೊರಕಿವೆ.