ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪ ೨ ಭಾರತೀಯರ ಇತಿಹಾಸವು. ವನೆಂದು ಹೇಳಲಿಕ್ಕೇನೂ ಅಡ್ಡಿಯಿಲ್ಲ. ಈ ತನ ಆಳಿಕೆಯು ಕ್ರಿ. ಶ. ೧೨೦-೧೬೨ ವರೆಗೆ, ಕನಿಷ್ಕನು ಬಹು ಪರಾಕ್ರಮಿ, ಹೀದೂ ದೇಶದ ಒಳ ನಾಡಿನಲ್ಲಿರುವ ಚಿಕ್ಕ ದೊಡ್ಡ ರಾಜರುಗಳನ್ನೆಲ್ಲ ಸೋಲಿಸಿ, ಮಗಧ ರಾಜಧಾನಿಯಾದ ಪಾಟಲೀಪುತ್ರದ ವರೆಗೂ ಅಭಿಯೋಗ ಮಾಡಿ, ಅಲ್ಲಿಂದ ಬುದ್ಧಘೋಷ ಎಂ ಬೊಬ್ಬ ಬುದ್ಧ ಸನ್ಯಾಸಿಯನ್ನು ತನ್ನೊಡನೆ ಒಯ್ದನು. ಈತನ ಆಳಿಕೆಯಲ್ಲಿ ಈಗಿನ ಮಹಾರಾಷ್ಟ್ರದ ಆಗಿನ ಅರಸ ನಾದ ನಹಪಾನನೆಂಬುವನು ಸಹ ಕನಿಷ್ಕನ ಮಾಂಡಲಿಕನಾಗಿದ್ದನೆಂದು ಸಿದ್ಧವಾಗುತ್ತದೆ. ಅಂದರೆ ಉತ್ತರಕ್ಕೆ ಕಾ ಬಾಲದಿಂದ ಕೆಳಗೆ ದಕ್ಷಿಣಕ್ಕೆ ಮಹಾರಾಷ್ಟ್ರದ ವರೆಗೆ, ಅತ್ತ ಗಂಗೆಯ ಧಡದವರೆಗೆ ಈತನ ರಾಜ್ಯ ವಿಸ್ತಾರ. ಕನಿಷ್ಕನು ತನ್ನ ರಾಜಧಾನಿಯನ್ನು ಪೇಶಾವರಕ್ಕೆ ಒಯ್ದನು. ಈ ಪಟ್ಟಣವು ಒಂದು ಸ್ಥಾನ ಹಾಗೂ ಅಫಗಾ೯ಣಿ ಸ್ಥಾನಕ್ಕೆ ನಡುವೆ ಇರುವದರಿಂದ ಎರಡೂ ಕಡೆ ಬ೦ದ ರಾಜ್ಯಭಾರ ನೋಡಿಕೊಳ್ಳಲು ಅನುವಾಗಿತ್ತು. ಬರಬರುತ್ತ ಕ ನಿಷ್ಕನಿಗೆ ಬುದ್ಧ ತತ್ವಗಳಲ್ಲಿ ಹೆಚ್ಚಿನ ವಿಶ್ವಾಸ ಹುಟ್ಟಿದ್ದರಿಂದ ಉತ್ತರ ವಯಸಿನಲ್ಲಿ ಆತನು ಬೌದ್ಧಸಂಗ್ರಾ ಯಕ್ಕೆ ಸೇರುವದಲ್ಲದೆ ಬೌದ್ಧರಿಗೆ ಆಶ್ರಯ ದಾತನ, ಬೌದ್ಧ ಧರ್ಮದ ಕಟ್ಟಾ ಕಾಗಿಯೂ ನಿಂತುಕೊಂಡನು. ಬುದ್ಧದೇವನ ಸಮಾಧಿಯ ಮೇಲೆ ಆಶ್ಚರ್ಯಕರವಾದುದೊಂದು ಕಟ್ಟಡವನ್ನು ಕಟ್ಟಿ ಸಿದ್ದನು. ಆದರೆ ಅದು ಅನೇಕ ಸಲ ಬೆ೦ಕೆಗೀಡಾಗಿ ನಾಶವಾಯಿತು. ಬೌದ್ಧ ಮತದ ಹಬ್ಬುಗೆ:- ಮೊದಲಿನಿಂದ ಅಂದರೆ ಕಡ ಫಿಸೆಸ ಅರಸನಿಂದಲೂ ಚಿನರಿಗೆ ಕಪ್ಪು ಕಾಣಿಕೆ ಕೊಡುವದೊಂದು ಅಪಮಾ ನಕರವಾದ ಪದ್ಧತಿಯಿತಷ್ಟೆ ! ಇದು ಕನಿಷ್ಕನಿಗೆ ಸಹನವಾಗಲಿಲ್ಲ. ಅತನು ಪಾಮೀರ ತಪ್ಪಲನ್ನು ದಾಟ, ಚೀನರ ಆಳಿಕೆಗೊಳಪಟ್ಟ ಕಾಶ ಗರ, ಯಾಕF೦ದ ಮತ್ತು ಯೋ ತಾನಗಳನ್ನು ಗೆದ್ದು, ಚಿನರಿಗೆ ಕಾಣಿಕೆ ಕೊಡುವದನ್ನು ನಿಲ್ಲಿಸಿ ಬಿಟ್ಟನು. ಇಷ್ಟಾಗುವದರಲ್ಲಿ ಕನಿಷ್ಕನಿಗೆ ಅಶೋ ಕನಂತೆ ಕೊಳ್ಳೆ ಕಾಟಗಳಿಂದ ರಾಜ್ಯ ಗಳಿಸುವ ವಿಷಯದಲ್ಲಿ ಅನುತಾಪ ವು೦ಟಾಗಿ ತನ್ನ ಕಾಲವನ್ನೆಲ್ಲ ಬೌದ್ಧ ಮತದ ಹಬ್ಬು ಗೆಯಲ್ಲಿಯೇ ವೆಚ್ಚ ಮಾಡತೊಡಗಿದನು. ಈತನು ಮ ಹಾಯಾನ ಎಂಬುದೊಂದು ಬೌರ