ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೪

ಭಾರತೀಯರ ಇತಿಹಾಸವು.

ದಕ್ಷಿಣದ ಬಿಹಾರ, ಅಯೋಧ್ಯಾ ಮುಂತಾದ ನೆರೆಯ ಸೀಮೆಯಲ್ಲಿ ತನ್ನ ಅಧಿಪತ್ಯವನ್ನು ನೆಲಿಸಿ, ತಾನಾಳುವ ಪ್ರದೇಶದೊಳಗೆ ತನ್ನ ದೊಂದು ಶಕವನ್ನೇ ಪ್ರಾರಂಭಿಸಿದನು. ತನ್ನ ಹೆಂಡತಿಯಿಂದ ಈತನಿಗೆ ಒಳ್ಳೆ ಅಭ್ಯುದಯ ಕಾಲವು ಪ್ರಾಪ್ತವಾದ್ದರಿಂದ, ಅದರ ಗು ರುತಿಗಾಗಿಯೇ ಎನೋ ಈ ತನು ತನ್ನ ರಾಜ್ಯದೊಳಗೆ ನಡಿಸಿದ ನಾಣ್ಯಗಳ ಮೇಲೆ ತನ್ನ ಹಾಗೂ ತನ್ನ ರಾಣಿಯ ಹೆಸರನ್ನು ಮುದ್ರೆ ಹಾಕಿಸಿದ್ದನು. ಹೀಗೆ ಒಂದು ಬಗೆಯಿಂದ ಗುಪ್ತ ಸಾಮ್ರಾಜ್ಯದ ಶಂಕು ಸ್ಥಾಪನೆ ಮಾಡಿದ ನಂತರ ಚಂದ್ರಗುಪ್ತನು ಕುಮಾರದೇವಿ ಹೊಟ್ಟೆಯಲ್ಲುದಯ ನಾದ ಸಮುದ್ರಗುಪ್ತನೆಂಬ ತನ್ನ ಮಗನಿಗೆ ಪಟ್ಟ ಗಟ್ಟಿ ತಾನು ಕಡೆಗಾದನು.

ದಿಗ್ವಿಜಯಿಯಾದ ಸಮುದ್ರಗುಪ್ತನು:- ಕ್ರಿ. ಶ. ೩೩೦ ರಿಂದ ೩೭೫ ವರೆಗೆ, ಅನಾಯಕರ ಕಾಲವೆಂದರೆ, ಅದೊಂದು ಬಗೆಯಿ೦ದ ಜನಾ೦ಗದ ಮಧನ ಕಾಲವೇ ಸರಿ. ಮಜ್ಜಿಗೆಯನ್ನು ಕಡೆಯುವದರಿಂದ, ಅದರೊಳಗೆ ಎಲ್ಲಡೆಯಲ್ಲಿ ವ್ಯಾಪಿಸಿಕೊಂಡಿರುವ ಬೆಣ್ಣೆಯು ಒಂದೆಡೆಯಲ್ಲಿ ಕೂಡಿಕೊಂಡು ಒಂದು ಮುದ್ದೆಯಾಗಿ ನಮ್ಮ ಕಣ್ಣಿಗೆ ಬೀಳುವಂತೆ, ಜನಾಂಗವನ್ನು ಮಧಿಸುವ ಕಾಲವಾದ ನಂತರವೇ ನಮಗೆ ಬೆಣ್ಣೆಯ ರೂಪದಿಂದ ಜನಾ೦ಗದ ಸಾರಸರ್ವಸ್ವರಾದ ಮಹಾವೀರರು ಕ೦ಗೊಳಿಸುವದುಂಟು. ಅ೦ತಹ ವರರಾಜರಲ್ಲಿ ಸಮುದ್ರಗುಪ್ತನೊಬ್ಬನು. ಈತನು ತನ್ನ ಆಳ್ವಿಕೆಯ ಬಹು ಭಾಗವನ್ನೆಲ್ಲ ದಿಗ್ವಿಜಯದೊಳಗೆ ಕಳೆದನು. ಸಾಮ್ರಾಜ್ಯ ಗಳಿಸಬೇಕೆಂಬುದೊಂದು ಅಶೆಯು ಆತನ ಮನಸಿನಲ್ಲಿ ಹಗಲಿರಳು ಕಟೆಯುತ್ತಿದ್ದುದರಿಂದ ಅದನ್ನು ಸಾಧಿಸಲೋಸುಗ ಸಮುದ್ರಗುಪ್ತನು ಏನು ತನ್ನ ಜೀವಮಾನದೊಳಗೆಲ್ಲ ಮೀರಿದ ಎತ್ತುಗಡೆ ನಡಿಸಿದನು. ಅವನೀ ಹಿರಿದಾದ ಆಶೆಗನುಗುಣವಾಗಿ ಸಮುದ್ರಗುಪ್ತನು ಸರಸ್ವತಿಯ ಭಕ್ತನೂ, ಮಹತ್ವಾಕಾ೦ಕ್ಷಿಯಾದ ಶೂರನೂ ಇದ್ದುದರಿಂದ ಶ್ರೀ, ವಿಜಯ, ಭೂತಿ ಇವೆಲ್ಲವು ಇವನಲ್ಲಿ ಒಂದೇ ಕಾಲಕ್ಕೆ ಮನೆಮಾಡಿಕೊಂಡಿರುವಂತೆ ಕಾಣಿಸಿತು. ಯವನ ವೀರನಾದ ಅಲೆಕ್ಸಾಂಡರನಂತೆ, ರಾಜ್ಯ ವಿಸ್ತಾರಗೊಳಿಸುವದೊಂದು ಹಿರಿಯಾಸೆಯು ಈತನ ಮನಸಿನಲ್ಲಿ ಬಲವಾಗಿ ಮಸೆಯುತ್ತಿದ್ದುದರಿಂದ, ಪ್ರತಿಭೆಯಿಂದ ಮಿಂಚುವ ತನ್ನ