ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೦

ಭಾರತೀಯರ ಇತಿಹಾಸವು.

ಅವರೆಷ್ಟು ವಿಧವಾಗಿ ಹಿಂದೂದೇಶ ರಕ್ಷಣೆಗಾಗಿ ಹೋರಾಡಿದರೂ ಕೊನೆಗೆ ಹಿಂದೂರಾಜರಿಗೆ ಸೋಲಾಗಿ ಹೂಣರ ಮುಖಂಡನಾದ ತೋರಮಾಣನೆಂಬವನಿಗೆ ಜಯ ದೊರೆಯಿತು. ತೋರಮಾಣನು ಮಾಳವ ಪ್ರಾ೦ತದೊಳಗೆ ತನ್ನದೊಂದು ರಾಜ್ಯವನ್ನು ಕಟ್ಟಿ ಹಿಂದೂಜನರ ಪದ್ಧತಿಯಂತೆ 'ಮಹಾರಾಧಿರಾಜ' ಎಂಬ ಗೌರವದ ಬಿರುದನ್ನು, ಧರಿಸಿದನು. ಈತನಿಗೆ ಕಾಠೇವಾಡದ ವಲಭಿ ರಾಜರೂ, ಬೇರೆ ಕೆಲ ಮ೦ದಿ ಸ್ಥಾನಿಕ ಪಾಳೆಗಾರರು ಕಪ್ಪಕಾಣಿಕೆ ಕೊಡುತ್ತಿರುವಂತೆ ಕಾಣುತ್ತದೆ. ತೋರಮಾಣನ ತರುವಾಯ ಮಹಾಕುಲನೆಂಬ ಆತನ ಮಗನೇ ಪಟ್ಟಕ್ಕೆ ಕುಳಿತನು. ಈತನು ತನ್ನ ರಾಜಧಾನಿಯನ್ನು ಸಿಯಾಲಕೋಟಕ್ಕೆ ಒಯ್ದನು. ಸ್ವಭಾವದಿ೦ದ ಬಹು ಕ್ರೂರನೂ, ನಿರ್ದಯನೂ, ಉನ್ಮತ್ತನೂ ಇರುವದರಿಂದ ಬಲುಮೆಯಿ೦ದ ನೆರೆಹೂರೆಯ ರಾಜರಿ೦ದ ಈತನು ಕಪ್ಪು ಕಾಣಿಕೆಗಳನ್ನೆತ್ತುವ ಉದ್ದಾಮಕ್ರಮವನ್ನು ನಡಿಸಿದ್ದನು. ಯಮನಂತಿರುವ ಈತನ ಉರವಣಿಗೆಗೆ ನೆರೆಯ ರಾಜರೂ ಪ್ರಜೆಗಳೂ ಬೇಸತ್ತು ಬೇಲಿ ಹೊಕ್ಕಿದ್ದರು. ಈತನ ಉಪಟಳಕ್ಕಾಗಿ ಒಂದಿಲ್ಲೊಂದು ಉಪಾಯದಿಂದ ಈತನ ರಾಜ್ಯವನ್ನೇ ಬುಡ ಮೇಲು ಮಾಡಿಬಿಡಬೇಕೆಂದು ಕೆಲವರು ಸಾ೦ಘಿಕವಾಗಿ ಪ್ರಯತ್ನ ನಡೆಯಿಸಿದರು. ಈ ಸಾಂಘಿಕ ಪ್ರಯತ್ನದೊಳಗೆ ಮಾಳವದೇಶದ ಬಲಾಢ್ಯ ಬ್ರಾಮ್ಹಣ ಅರಸನಾದ ಯಶೋಧರ್ಮ ವಿಷ್ಣುವರ್ಧನನೆಂಬುವನೂ, ಬಾಲಾದಿತ್ಯನೂ ಅವರೀರ್ವರೂ ಮುಂದಾಳಾಗಿ ನಿಂತು ಕಾಳಗಗೊಟ್ಟರು. ಈ ಕಾಳಗದೊಳಗೆ ಮಿಹಿರಕುಲನು ಸೋತು ಸುಣ್ಣಾಗಿ ತನ್ನನ್ನು ಸೋಲಿಸಿದ ಉಭಯ ವೀರರ ಪಾದಗಳಿಗೆ ತನ್ನ ತಲೆಯಲ್ಲಿರುವ ಹೂವಿನ ಕುಚ್ಚುಗಳನ್ನು ಅರ್ಪಿಸಿ ಶರಣಾಗತನಾರನು. ಆಗ ಮಿಹಿರಕುಲನಿಗೆ ಜೀವದಾನಕೊಟ್ಟು ಅವನನ್ನು ಉತ್ತರ ದಿಕ್ಕಿಗೆ ಅಟ್ಟ ಬಿಟ್ಟರು; ಆದರೆ ಹಾವಿನ ಜಾತಿಯವನಾದ ಮಿಹಿರಕುಲನು ಮತ್ತೆ ತಿರಿಗಿ ಬಂದು ನೋಡುವಷ್ಟರಲ್ಲಿ ತನ್ನ ಒಡಹುಟ್ಟಿದ ತಮ್ಮನೇ ರಾಜ್ಯವಾಳುತ್ತಿದ್ದುದನ್ನು ನೋಡಿ ಸಹಿಸದೆ, ಕಾಶ್ಮೀರದ ರಾಜ್ಯವನ್ನಾಶ್ರಯಿಸಿ, ಮೊದಲು ಮೆತ್ತಗೆ ತಾನು ಕಾಲುಚಾಚಿ ಅಲ್ಲಿ ತನ್ನ ಬೇರು ಬಿಟ್ಟು