ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೪

ಭಾರತೀಯರ ಇತಿಹಾಸವು.

ರಂತೆ ಪರಸ್ಪರ ಸೌಹಾರ್ದಭಾವವು ಸಂಪೂರ್ಣವಾಗಿ ನೆಲಸಿದ್ದುದರಿಂದ ಅವರಿವರಲ್ಲಿ ಭೇದಭಾವವಾಗಲಿ, ಮತ್ಸರಭಾವವಾಗಲಿ ಇ೦ಬುಗೊ೦ಡಿರಲಿಲ್ಲ. ಒ೦ದೇ ಜೀವ, ದೇಹ ಎರಡು. ಮೇಲಾಗಿ, ಹರ್ಷವರ್ಧನನು ತನಗಿ೦ತ ಕೈಮೆಯಲ್ಲಿಯೂ, ಜಾಣ್ಮೆಯಲ್ಲಿಯೂ, ಇಮ್ಮಡಿ ಕೈ ಮೇಲಾ ಗಿಯೂ, ದೈವಶಾಲಿಯೂ ಆಗಿದ್ದುದು ರಾಜ್ಯವರ್ಧನನ ಅನಂದಕ್ಕೊಂದು ಕುಂದಣ. ಆದರೆ ಸೋದರರ ಈ ಸೌಹಾರ್ದದ ಸೊಗಸನ್ನು ಬಹುದಿನಗಳ ವರೆಗೆ ಅನುಭವಿಸುವದನ್ನು ಶಟವಿಯು ಇಬ್ಬರ ಹಣೆಬರಹದಲ್ಲಿ ಬರೆಯದ್ದರಿಂದ, ಮನಸಿನಲ್ಲಿ ಮಾಡಿಟ್ಟ ಮ೦ಡಿಗೆಯ ಸಾಮಗ್ರಿಯೆಲ್ಲವೂ ಕೆಲವು ದಿನ ಮಾತ್ರ ಅಲ್ಲಿಯೇ ಕೊಳೆಯುತ್ತಿರುವದಕ್ಕೆ ರಾಜ್ಯವರ್ಧನನ ಅಕಸ್ಮಿಕವಾದ ಮರಣವೇ ಕಾರಣವಾಯಿತು. ಅಣ್ಣ ತಮ್ಮಂದಿರಲ್ಲಿ ಒಂದು ವಿಧದ ಜೀವದ ಪ್ರೇಮವೂ, ಒಂದು ಭಾವವೂ ಇದ್ದರೂ ತನ್ನ ಅಣ್ಣನನ್ನು ಅಕಾಲಿಕವಾಗಿ ಯಮನು ಕಟ್ಟಿಕೊಂಡು ಹೋದುದಕ್ಕೆ ಹರ್ಷನು ವ್ಯಸನಗೊ೦ಡು ಕುಳ್ಳಿರದೆ, ಅಣ್ಣನು ಅರ್ಧಕ್ಕೆ ಬಿಟ್ಟ ಕಾರ್ಯವನ್ನು ಅಂದರೆ ತ೦ಗಿಯಾದ ರಾಜ್ಯಶ್ರಿಯನ್ನು ಪರರಾಯರ ಸೆರೆಯಿಂದ ಬಿಡಿಸಲಿಕ್ಕೆ ಕೆಚ್ಚೆದೆಯಿಂದ ಮೊದಲು ಕೈಕಟ್ಟಿದನು. ಬುದ್ಧಿವಂತಿಕೆಯಲ್ಲಿಯೂ, ಬಲ್ಗಾರಿಕೆಯಲ್ಲಿಯೂ ಎಲ್ಲರಿಗಿಂತ ಮೇಲುಗೈಯಾಗಿ ಮೆರೆಯುತ್ತಿರುವ ದೈವದ ಮಗುವಾದ ಹರ್ಷವರ್ಧನನಿಗೆ ಯಾವ ಕಾರ್ಯ ತಾನೇ ಈಡು ! ದುರ್ಭಾಗ್ಯಕ್ಕೆಡೆಯಾದ ತನ್ನ ತಂಗಿಯನ್ನು ಬಿಡುಗಡೆ ಮಾಡುವದನ್ನು ನಿಮಿತ್ತವಾಗಿಟ್ಟುಕೊ೦ಡು ಇಡೀ ಭರತಖಂಡವನ್ನೇ ಗೆದ್ದು ಚಕ್ರವರ್ತಿ ಮಹಾರಾಯನಾಗಬೇಕೆ೦ಬ ಹಿರಿದಾದ ಹವಣಿಕೆಯಿಂದ ಹರ್ಷನು ಬಲವಾದ ಸೈನ್ಯಸೌರಣೆ ನಡಿಸಿದನು; ಮತ್ತು ತಾನು ದಿಗ್ವಿಜಯಕ್ಕೆ ಬಿಜಯ ಮಾಡಿದ ಕಾಲದಲ್ಲಿ ತನ್ನ ರಾಜ್ಯದ ಆಡಳಿತವು ಸುಸೂತ್ರವಾಗಿ ನಾಗಬೇಕೆಂದು ಅದಕ್ಕಾಗಿ ಬಲ್ಲವರನ್ನು ಆರಿಸಿ ಅವರ ಕೈಗೆ ರಾಜ್ಯವನ್ನೊಪ್ಪಿಸಿ, ಶುಭಮುಹೂರ್ತದಲ್ಲಿ ದಿಗ್ವಿಜಯದ ಪ್ರಸ್ಥಾನ ಗಂಟನ್ನು ತೆಗೆದಿಟ್ಟನು. ೬೦ ಸಾವಿರ ಆನೆಗಳನ್ನೂ, ೧ ಲಕ್ಷ ೨೦ ಸಾವಿರ ಕುದುರೆಸವಾರರನ್ನೂ, ೫೦ ಸಾವಿರ ಕಾಲಾಳುಗಳನ್ನೂ ಅಣಿ ಮಾಡಿ ಓರಣಗೊಳಿಸಿಕೊ೦ಡು ಕನೋಜದ ದಾರಿ ಹಿಡಿದನು.