ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೮

ಭಾರತೀಯರ ಇತಿಹಾಸವು.

ಭಿಕ್ಷುಗಳಿಗೂ ತನ್ನಲ್ಲಿರುವ ಐಶ್ವರ್ಯ ಸಂಪತ್ತನ್ನೆಲ್ಲ ದಾನಮಾಡುತಿದ್ದನು. * ಒ೦ದೊ೦ದು ಸಲ ಈ ದಾನಪ್ರೇಮವು ಕೈತಪ್ಪಿಹೋಗಿ, ಹರ್ಷನಿಗೆ ಮೈ ಮೇಲೆ ಹೊದ್ದುಕೊಳ್ಳಲು ಬಟ್ಟೆ ಬರೆ ದುಡ್ಡುದುಗ್ಗಾಣಿ ಉಳಿಯದ್ದರಿಂದ ತಂಗಿಯಾದ ರಾಜಶ್ರಿಯನ್ನು ಕುರಿತು ಒಂದೆರಡು ಹೊದ್ದುಕೊಳ್ಳುವ ಬಟ್ಟೆಗಳಿಗಾಗಿ ಭಿಕ್ಷೆಬೇಡುವ ಪ್ರಸಂಗವೂ ಒದಗುತ್ತಿತ್ತು ! ಅಶೋಕನನ್ನುಳಿದು ಜಗತ್ತಿನೊಳಗಾಗಿ ಹೋದ ಯಾವ ಸಮ್ರಾಟನೂ ಈತನಿಗೆ ಸರಿಗಟ್ಟಲಾರನು. ಈಮೇರೆಗೆ ಧರ್ಮರಾಜನಂತೆ ಜ್ಞಾನಿಯೂ, ಕರ್ಣನಂತೆ ದಾನವೀರನೂ, ಪಾರ್ಥನಂತೆ ಶೂರನೂ, ಸದ್ವಿದ್ಯಾಭಿಮಾನಿಯೂ ಒಟ್ಟಿನ ಮೇಲೆ ಗುಣಗಳ ಖಣಿಯೇ ಆದ ಶ್ರೀಹರ್ಷ ಸಮ್ರಾಟನೆಂದರೆ ಅದ್ವಿತೀಯ ಚಕ್ರವರ್ತಿಯಾಗಿ ಕೆಲ ಕಾಲ ಪ್ರಪಂಚದೊಳಗೆ ಝಗಝಗಿಸಿ ತನ್ನೊಡನೆ ತ೦ದಿದ್ದ ನಶ್ವರವಾದ ದೇಹವನ್ನು ಇಲ್ಲಿಯೇ ಬಿಟ್ಟು ಕ್ರಿ. ಶ. ೬೪೭ರಲ್ಲಿ ಗೆದ್ದು ಹೋದನು.

ಹರ್ಷಕಾಲದ ಜಾತಿ ವ್ಯವಹಾರಗಳು :- ಹರ್ಷಕಾಲವೆಂದರೆ ಉತ್ತರ ಹಿಂದುಸ್ಥಾನಕ್ಕೆ ಎಲ್ಲ ಬಗೆಯಿಂದಲೂ ಅದೊಂದು ಹರುಷ ಕಾಲವು. ಐತಿಹಾಸಿಕದೃಷ್ಟಿಯಿಂದ ಅಲ್ಲಿಂದಿಲ್ಲಿಯ ವರೆಗಿನ ಇತಿಹಾಸವನ್ನು ಹಕ್ಕಿಯು ಅಕಾಶದೊಳಗೆ ಹಾರುವಂತೆ ಹಾರಿ ಸುತ್ತೆಲ್ಲ ಕಣ್ಣು ತಿರುಗಿಸಿದರೆ, ಹರ್ಷನಕಾಲಕ್ಕೆ ಆರ್ಯರ ನಾಗರಿಕತೆಯ ವೈಭವದ ಮಧ್ಯಾನ್ಹ ಕಾಲವು ಮುಗಿಯುತ್ತ ಬಂದು ಅದು ಕೆಳಗಿಳಿಯಲಿಕ್ಕೆ ಮೊದಲು ಮಾಡಿತ್ತೆಂದು ಹೇಳಲಿಕ್ಕೇನೂ ಅಡ್ಡಿಯಿಲ್ಲ. ನಮ್ಮಗಳ ಸುದೈವದಿಂದ ಈ ಕಾಲದ ಚರಿತ್ರೆಯನ್ನರಿಯಲು, ಸುಪ್ರಸಿದ್ಧ ಚೀನ ಯಾತ್ರಿಕನಾದ ಹ್ಯೂಯೆನತ್ಸ೦ಗನು ಚನ್ನಾಗಿ ನೋಡಿಕೊಂಡು ಬರೆದಿಟ್ಟಿರುವ ಪ್ರವಾಸವರ್ಣನೆಯೂ ಹರ್ಷನ ಒಡ್ಡೋಲಗದೊಳಗೆ ಒಡೆದುಮೂಡಿ


* ಟಿಪ್ಪಣಿ- ಕುಮಾರಿಲಭಟ್ಟನೆಂಬ ಅಸಾಮದೇಶದ ಬ್ರಾಮ್ಹಣನೊಬ್ಬನು ಈ ಧರ್ಮಸಭೆಗೆ ಬಂದು ಬೌದ್ಧಧರ್ಮವನ್ನು ಚನ್ನಾಗಿ ಖಂಡಿಸಿದ್ದನು. ಈತನು ಪೂರ್ವ ಮೀಮಾಂಸಾಶಾಸ್ತ್ರದಲ್ಲಿ ಬಲು ಗಟ್ಟಿಗನು, ಆಗಿನ ಕಾಲಕ್ಕೆ ಈತನ ಕೈ ಹಿಡಿಯುವವರು ಯಾರೂ ಇದ್ದಿಲ್ಲ.